ಕನ್ನಡ ಚಿತ್ರರಂಗದ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರಿ ಗೀತಾಂಜಲಿ ಅವರ ವಿವಾಹ ಉದ್ಯಮಿ ಅಜಯ್ ಅವರೊಂದಿಗೆ ಬುಧವಾರ ಅದ್ಧೂರಿಯಾಗಿ ನೆರವೇರಿತು.
ಬೆಳಗ್ಗೆ 10 ರಿಂದ 11 ಗಂಟೆಯವರೆಗಿನ ಶುಭ ಮುಹೂರ್ತದಲ್ಲಿ, ಬೆಂಗಳೂರಿನ ಅರಮನೆ ಮೈದಾನದ ವೈಟ್ ಪೆಟಲ್ಸ್‌ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಉದ್ಯಮಿ ಅಜಯ್ ಜೊತೆಗೆ ಗೀತಾಂಜಲಿ ನವ ಜೀವನಕ್ಕೆ ಕಾಲಿಟ್ಟರು.
Related Articles
ಸ್ವತಃ ರವಿಚಂದ್ರನ್ ಅವರೇ ಕಲರ್‌ಫುಲ್ ಆಗಿ ವಿನ್ಯಾಸಗೊಳಿಸಿದ್ದ ಗಾಜಿನ ರಾಜಹಂಸ ವೇದಿಕೆಯಲ್ಲಿ ನವ ಜೋಡಿ ವೈವಾಹಿಕ ಜೀವನಕ್ಕೆ ಅಡಿಯಿಟ್ಟಿದ್ದು ವಿಶೇಷವಾಗಿತ್ತು.
ಇನ್ನು ಗೀತಾಂಜಲಿ – ಅಜಯ್ ವಿವಾಹಕ್ಕೆ ರವಿಚಂದ್ರನ್ ಕುಟುಂಬ ವರ್ಗ, ಸ್ನೇಹಿತರು, ಚಿತ್ರರಂಗದ ಗಣ್ಯರು ಹಾಗು ಭಿಮಾನಿಗಳು ಸಾಕ್ಷಿಯಾಗಿ, ನವ ವಧುವರರಿಗೆ ಶುಭ ಕೋರಿದರು.