Advertisement

ರವಿ ಪೂಜಾರಿ ಸೆನಗಲ್‌ ಜೈಲಿನಿಂದ ಪರಾರಿ?

11:11 PM Jun 08, 2019 | Team Udayavani |

ಮಂಗಳೂರು: ನಕಲಿ ಪಾಸ್‌ಪೋರ್ಟ್‌ ಹೊಂದಿದ ಆರೋಪದಡಿ ಪಶ್ಚಿಮ ಆಫ್ರಿಕಾದ ಸೆನಗಲ್‌ನಲ್ಲಿ ನಾಲ್ಕು ತಿಂಗಳ ಹಿಂದೆ ಬಂಧನಕ್ಕೊಳಗಾಗಿದ್ದ ಕರಾವಳಿ ಮೂಲದ ಭೂಗತ ಪಾತಕಿ ರವಿ ಪೂಜಾರಿ ಇದೀಗ ಸೆನಗಲ್‌ನ ಜೈಲಿನಿಂದ ಎಸ್ಕೇಪ್‌ ಆಗಿದ್ದಾನೆ ಎನ್ನುವ ಆತಂಕಕಾರಿ ಮಾಹಿತಿ ಲಭಿಸಿದೆ.

Advertisement

ಆ ಮೂಲಕ ಹಲವು ಪ್ರಕರಣಗಳಲ್ಲಿ ಬೇಕಾಗಿರುವ ಈ ಮೋಸ್ಟ್‌ ವಾಂಟೆಡ್‌ ಭೂಗತ ಪಾತಕಿಯನ್ನು ಕಾನೂನು ಹೋರಾಟದಡಿ ಗಡಿಪಾರು ಮಾಡಿಸಿಕೊಳ್ಳುವ ಭಾರತೀಯ ಪೊಲೀಸರ ಪ್ರಯತ್ನಕ್ಕೆ ಭಾರೀ ಹಿನ್ನಡೆಯಾಗಿದೆ. ರವಿ ಪೂಜಾರಿಯನ್ನು ಭಾರತಕ್ಕೆ ಕರೆ ತರುವುದಕ್ಕೆ ಕಾನೂನಾತ್ಮಕ ಹೋರಾಟ ನಡೆಸುವಲ್ಲಿ ಮುಂಬೈ ಹಾಗೂ ಬೆಂಗಳೂರು ಪೊಲೀಸರು ಕಳೆದ ಮೂರು ತಿಂಗಳಿಂದ ಸೆನಗಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮೂಲಕ ಪ್ರಯತ್ನ ನಡೆಸಿದ್ದರು.

ಆತನ ವಿರುದ್ಧ ದಾಖಲಾಗಿರುವ ಸುಮಾರು 25ಕ್ಕೂ ಹೆಚ್ಚು ಪ್ರಕರಣಗಳಿಗೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಫ್ರೆಂಚ್‌ ಭಾಷೆಗೆ ತರ್ಜುಗೆ ಮಾಡಿ ಅಲ್ಲಿನ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆತನ ವಿರುದ್ಧದ ನ್ಯಾಯಾಲಯದ ವಿಚಾರಣೆಯೂ ಅಂತಿಮ ಹಂತದಲ್ಲಿದ್ದು, ಇನ್ನೇನು ಭಾರತಕ್ಕೆ ಗಡೀಪಾರು ಆಗುವ ವಿಶ್ವಾಸದಲ್ಲಿ ಭಾರತೀಯ ಪೊಲೀಸರಿದ್ದರು.

ಅಷ್ಟರಲ್ಲಿ ಆತ ನ್ಯಾಯಾಲಯ ಹಾಗೂ ಸ್ಥಳೀಯ ಪೊಲೀಸರ ನೆರವು ಪಡೆದು ಜೈಲಿನಿಂದ ಬಿಡುಗಡೆಯಾಗಿ ಮತ್ತೆ ಭೂಗತನಾಗಿದ್ದಾನೆ ಎನ್ನಲಾಗುತ್ತಿದೆ. “ಉದಯವಾಣಿ’ಗೆ ಉನ್ನತ ಮೂಲಗಳಿಂದ ಲಭಿಸಿರುವ ಮಾಹಿತಿಯಂತೆ ರವಿ ಪೂಜಾರಿಯು ಸೆನಗಲ್‌ನ ಜೈಲಿನಿಂದ ಶುಕ್ರವಾರ ಬಿಡುಗಡೆಯಾಗಿದ್ದಾನೆ.

ಆದರೆ, ಆ ಬಗ್ಗೆ ಮುಂಬೈ ಅಥವಾ ಬೆಂಗಳೂರಿನ ಪೊಲೀಸರಿಗೆ ಮಾಹಿತಿ ಬಂದಿರಲಿಲ್ಲ. ಜತೆಗೆ ಜೈಲಿನಿಂದ ಬಿಡುಗಡೆಯಾಗಿರುವ ಸುದ್ದಿ ಸುಳ್ಳು ಎಂದು ಕೆಲವು ಉನ್ನತ ಪೊಲೀಸ್‌ ಮೂಲಗಳು ಸ್ಪಷ್ಟಪಡಿಸಿದ್ದವು. ಆದರೆ, ಶನಿವಾರ ಸಂಜೆಯಾಗುತ್ತಿದ್ದಂತೆ ರವಿ ಪೂಜಾರಿ ಸೆನಗಲ್‌ನಿಂದ ಪರಾರಿಯಾಗಿರುವುದು ನಿಜ ಎನ್ನುವ ಆಘಾತಕಾರಿ ಮಾಹಿತಿ ಬಂದಿದೆ. ಕರ್ನಾಟಕದ ಪೊಲೀಸರು ಮಾತ್ರ ಇನ್ನಷ್ಟೇ ಈ ಬಗ್ಗೆ ಅಧಿಕೃತವಾಗಿ ಖಚಿತಪಡಿಸಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next