Advertisement

ಮಹಿಳೆಯ ಹತ್ಯೆ ಪ್ರಕರಣ : ಎರ್ನಾಕುಲಂ ಪೊಲೀಸರ ವಶದಲ್ಲಿ ರವಿ ಪೂಜಾರಿ

11:19 PM Feb 18, 2021 | Team Udayavani |

ಬೆಂಗಳೂರು : ಕೇರಳದ ಬ್ಯೂಟಿ ಪಾರ್ಲರ್‌ ನಲ್ಲಿ ಮಹಿಳೆಯೊಬ್ಬರ ಹತ್ಯೆಗೈದ ಪ್ರಕರಣ ಸಂಬಂಧ ಭೂಗತ ಪಾತಕಿ ರವಿ ಪೂಜಾರಿಯನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಔಪಚಾರಿಕವಾಗಿ ಬಂಧಿಸಿ ವಿಚಾರಣೆ ನಡೆಸಲು ಎರ್ನಾಕುಲಂನ ಸಿಸಿಬಿ ಪೊಲೀಸರಿಗೆ ನಗರದ ಸೆಷನ್ಸ್‌ ನ್ಯಾಯಾಲಯ ಅನುಮತಿ ನೀಡಿದೆ.

Advertisement

ರವಿ ಪೂಜಾರಿಯನ್ನು ವಶಕ್ಕೆ ಪಡೆಯಲು ಅನುಮತಿ ನೀಡುವಂತೆ ಕೋರಿ ಕೇರಳದ ಎರ್ನಾಕುಲಂನ ಸಿಸಿಬಿ ವಿಭಾಗದ ಪೊಲೀಸರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನಗರದ 65ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಜೈಲಿನಲ್ಲೇ ವಿಚಾರಣೆ ನಡೆಸಲು ಅನುಮತಿ ನೀಡಿದೆ.

ಎರ್ನಾಕುಲಂನ ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರವಿಪೂಜಾರಿಯನ್ನು ಐದು ದಿನಗಳ ಕಾಲ ಔಪಚಾರಿಕವಾಗಿ ಬಂಧಿಸಬಹುದು. ಈ ಸಂದರ್ಭದಲ್ಲಿ ಅರೋಪಿ ಪರ ವಕೀಲರು ಹಾಗೂ ಕಾರಾಗೃಹದ ಮುಖ್ಯ ಅಧೀಕ್ಷಕರು ಹಾಜರಿರಬೇಕು. ಔಪಚಾರಿಕ ಬಂಧನ ಸಂಬಂಧ ತನಿಖಾಧಿಕಾರಿ ವರದಿ ಸಿದ್ಧಪಡಿಸಿ ಎರ್ನಾಕುಲಂನ ಸಂಬಂಧಪಟ್ಟ ನ್ಯಾಯಾಲಯಕ್ಕೆ ಸಲ್ಲಿಸಬಹುದು. ಆದರೆ ಆ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರುಪಡಿಸುವಂತಿಲ್ಲ. ಔಪಚಾರಿಕ ಬಂಧನ ಮಾಡುವ ದಿನದ ಬಗ್ಗೆ ಆರೋಪಿ ಪರ ವಕೀಲರಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ಇದನ್ನೂ ಓದಿ:ಪ.ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ದುರ್ಗಾ, ಸರಸ್ವತಿ ಪೂಜೆ ಪುನರಾರಂಭ : ಅಮಿತ್ ಶಾ

Advertisement

Udayavani is now on Telegram. Click here to join our channel and stay updated with the latest news.

Next