ಕಟಪಾಡಿ; ಶ್ರೀಕೃಷ್ಣ ಜನ್ಮಾಷ್ಟಮಿಯಂದು ವೇಷವನ್ನು ಧರಿಸಿ ಜನಪ್ರಿಯತೆಯನ್ನು ಗಳಿಸಿಕೊಂಡಿರುವ ರವಿ ಕಟಪಾಡಿ ಮತ್ತು ತಂಡ ಈ ಬಾರಿ ಜನಜಾಗೃತಿಯನ್ನು ಮೂಡಿಸುವ ಸಲುವಾಗಿ ಜಿಲ್ಲಾಡಳಿತದ ಅನುಮತಿಯ ಮೇರೆಗೆ ಕೋವಿಡ್ ಜಾಗೃತಿಯನ್ನು ಎಚ್ಚರಿಸಲು ಎರಡು ದಿನಗಳ ಕಾಲ ವೇಷದಾರಿಯಾಗಿ ತನ್ನ ತಂಡದೊಂದಿಗೆ ಕಟಪಾಡಿ ಉಡುಪಿ ಮಲ್ಪೆ ಪರಿಸರದಲ್ಲಿ ಎರಡು ದಿನಗಳ ಕಾಲ ಸುತ್ತಾಟ ನಡೆಸಲಿದ್ದಾರೆ.
ಕಳೆದ ಎಂಟು ವರ್ಷಗಳಿಂದ ವೇಷಧಾರಿಯಾಗಿ ಸಂಗ್ರಹಿಸಲ್ಪಟ್ಟ ಹಣದಲ್ಲಿ ಅಸಹಾಯಕ ಬಡ ಮಕ್ಕಳ ಪಾಲಿಗೆ ಆಶಾದಾಯಕ ವಾದಂತಹ ಭರವಸೆಯನ್ನು ಮೂಡಿಸುತ್ತಿದ್ದ ರವಿ ಕಟಪಾಡಿ ಈ ಬಾರಿ ಕೋವಿಡ್ ಪರಿಣಾಮ ಧನ ಸಂಗ್ರಹವನ್ನು ಕೈಬಿಟ್ಟಿದ್ದು ಜನರಲ್ಲಿ ಕೋವಿಡ್ ವಿರುದ್ಧ ಜಾಗೃತಿಯನ್ನು ಮೂಡಿಸುವ ಸಲುವಾಗಿ ವೇಷದಾರಿಯಾಗಿ ಎಲ್ಲೆಡೆ ಸಂಚರಿಸಲಿದ್ದಾರೆ.
ಈ ಬಾರಿಯ ಜನಜಾಗೃತಿ ಕಾರ್ಯಕ್ರಮಕ್ಕೆ ಕಟಪಾಡಿ ಪೇಟೆಯಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ ಅವರು ಚಾಲನೆಯನ್ನು ನೀಡಿದ್ದು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇನಾಯತ್ ಉಲ್ಲಾ ಬೇಗಾ ಕೂಡ ಕೈಜೋಡಿಸಿ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿದರು.