Advertisement

ಕೆಜಿಎಫ್-2 ಡಬ್ಬಿಂಗ್‌ ಮಾಡಿದ ರವೀನಾ ಟಂಡನ್‌

01:07 PM Feb 10, 2022 | Team Udayavani |

ಬಾಲಿವುಡ್‌ ನಟಿ ರವೀನಾ ಟಂಡನ್‌ “ಕೆಜಿಎಫ್-2′ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವುದು ನಿಮಗೆ ಗೊತ್ತಿರಬಹುದು. ಈಗಾಗಲೇ “ಕೆಜಿಎಫ್-2′ ಸಿನಿಮಾದಲ್ಲಿ ತಮ್ಮ ಪಾತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿರುವ ರವೀನಾ ಟಂಡನ್‌, ಈಗ ಸಿನಿಮಾದಲ್ಲಿ ತಮ್ಮ ಪಾತ್ರಕ್ಕೆ ಡಬ್ಬಿಂಗ್‌ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ.

Advertisement

ಹೌದು, ಕಳೆದ ಕೆಲ ತಿಂಗಳಿನಿಂದ “ಕೆಜಿಎಫ್’ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಭರದಿಂದ ನಡೆಯುತ್ತಿದ್ದು, ಈಗಾಗಲೇ ನಟ ಸಂಜಯ್‌ ದತ್‌, ನಾಯಕಿ ಶ್ರೀನಿಧಿ ಶೆಟ್ಟಿ ಸೇರಿದಂತೆ ಚಿತ್ರದ ಬಹುತೇಕ ಕಲಾವಿದರು ತಮ್ಮ ಪಾತ್ರದ ಡಬ್ಬಿಂಗ್‌ ಪೂರ್ಣಗೊಳಿಸಿದ್ದಾರೆ. ಈಗ ರವೀನಾ ಟಂಡನ್‌ ಅವರ ರಮೀಕಾ ಸೇನ್‌ ಪಾತ್ರಕ್ಕೆ ಡಬ್ಬಿಂಗ್‌ ನಡೆಯುತ್ತಿದ್ದು, ರವೀನಾ ಟಂಡನ್‌ ಅವರು ತಮ್ಮ ಪಾತ್ರಕ್ಕೆ ಧ್ವನಿ ಕೊಟ್ಟಿದ್ದಾರೆ.

ಇನ್ನು “ಕೆಜಿಎಫ್-2′ ಚಿತ್ರಕ್ಕೆ ಸ್ವತಃ ರವೀನಾ ಟಂಡನ್‌ ಅವರೇ ತಮ್ಮ ಪಾತ್ರಕ್ಕೆ ಧ್ವನಿ ನೀಡಿದ್ದಾರೆ ಎಂದು ತಿಳಿಸಿರುವ ನಿರ್ದೆಶಕ ಪ್ರಶಾಂತ್‌ ನೀಲ್‌, ನಟಿ ರವೀನಾ ಟಂಡನ್‌ ಅವರು ಡಬ್ಬಿಂಗ್‌ನಲ್ಲಿ ಪಾಲ್ಗೊಂಡಿರುವ ಪೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:‘ಲವ್‌ ಮಾಕ್ಟೇಲ್‌-2’ ಕಲರ್‌ ಫುಲ್‌ ಪ್ರೀ-ರಿಲೀಸ್‌ ಇವೆಂಟ್‌

ಅಂದಹಾಗೆ, “ಕೆಜಿಎಫ್-2′ ಕನ್ನಡ ಮಾತ್ರವಲ್ಲದೆ ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ತೆರೆಗೆ ಬರುತ್ತಿರುವುದರಿಂದ, ರವೀನಾ ಟಂಡನ್‌ ಕೇವಲ ಹಿಂದಿ ಭಾಷೆಯಲ್ಲಿ ಮಾತ್ರ ತಮ್ಮ ಪಾತ್ರಕ್ಕೆ ಡಬ್ಬಿಂಗ್‌ ಮಾಡಿದ್ದಾರಾ? ಅಥವಾ ಕನ್ನಡ ಸೇರಿದಂತೆ ಬೇರೆ ಭಾಷೆಗೂ ರವೀನಾ ಅವರೇ ಧ್ವನಿ ಕೊಟ್ಟಿದ್ದಾರಾ? ಎಂಬ ಗುಟ್ಟನ್ನು ಮಾತ್ರ ಪ್ರಶಾಂತ್‌ ನೀಲ್‌ ಬಿಟ್ಟುಕೊಟ್ಟಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next