ಬೆಳಗಾವಿ : ಬಿಜೆಪಿಯ ಮತಗಳನ್ನು ಕಡಿತಗೊಳಿಸುವ ಪ್ರಯತ್ನದಲ್ಲಿ ಕಾಂಗ್ರೆಸ್ ಸೂಚನೆ ಮೇರೆಗೆ ಕರ್ನಾಟಕದ ಬೆಳಗಾವಿಯಲ್ಲಿ ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವುತ್ ಪ್ರಚಾರ ಮಾಡುತ್ತಿದ್ದಾರೆ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಗುರುವಾರ ಆರೋಪಿಸಿದ್ದಾರೆ.
ಬಿಜೆಪಿ ಪರ ಪ್ರಚಾರಕ್ಕೆ ಆಗಮಿಸಿದ್ದ ಫಡ್ನವೀಸ್ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ರಾವುತ್ ಅವರು ಕಾಂಗ್ರೆಸ್‌ನ ಮಧ್ಯವರ್ತಿಯಂತೆ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದರೆ, ನಾನು ಇಲ್ಲಿಗೆ ಬರುವುದಿಲ್ಲ …ಆದರೆ ಅವರು ಬಿಜೆಪಿಯ ಮತಗಳನ್ನು ಕಡಿತಗೊಳಿಸಲು ಕಾಂಗ್ರೆಸ್‌ನ ಸೂಚನೆಯ ಮೇರೆಗೆ ಇಲ್ಲಿದ್ದಾರೆ” ಎಂದು ಕಿಡಿ ಕಾರಿದರು.
“ರಾವುತ್ ಅವರ ಪಕ್ಷ ಮತ್ತು ಕಾಂಗ್ರೆಸ್ ರಾಜಕೀಯ ಮಿತ್ರರು, ಆದ್ದರಿಂದ ಅವರು ನಮಗೆ ಹೇಳುವ ಬದಲು ಬೆಳಗಾವಿಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದಂತೆ ಕಾಂಗ್ರೆಸ್ ನಾಯಕರನ್ನು ಕೇಳಬೇಕಿತ್ತು. ಆದರೆ ಅವರು ಅದನ್ನು ಕಾಂಗ್ರೆಸ್‌ಗೆ ಹೇಳುವುದಿಲ್ಲ ಎಂದರು.
ಈ ಹಿಂದೆ ಹಲವಾರು ಸಂದರ್ಭಗಳಲ್ಲಿ, ದಕ್ಷಿಣ ರಾಜ್ಯದ ಬೆಳಗಾವಿ-ಕಾರವಾರ ಪ್ರದೇಶಗಳಲ್ಲಿ ಮರಾಠಿ ಮಾತನಾಡುವ ಜನರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಅನ್ನು ಬೆಂಬಲಿಸಲು ಫಡ್ನವೀಸ್ ಅವರಿಗೆ ರಾವುತ್ ಸವಾಲು ಹಾಕಿದ್ದರು.
ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದವನ್ನು ಬಗೆಹರಿಸುವಲ್ಲಿ ಬಿಜೆಪಿಯ ನಿಲುವಿನ ಬಗ್ಗೆ ಕೇಳಿದಾಗ, ಫಡ್ನವಿಸ್ ಅವರು, ”ಬೆಳಗಾವಿಯಲ್ಲಿ ಪ್ರಸ್ತುತ ವಾಸಿಸುತ್ತಿರುವ ಮರಾಠಿ ಮಾತನಾಡುವ ಜನರಿಗೆ ನನ್ನ ಪಕ್ಷ ಮತ್ತು ನಾನು ಸಂಪೂರ್ಣ ಬೆಂಬಲ ನೀಡುತ್ತೇನೆ” ಎಂದರು.