Advertisement
ಸಭೆಯನ್ನು ಉದ್ಧೇಶಿಸಿ ಮಾತನಾಡಿದ ರತ್ನಾಕರ ಶೆಟ್ಟಿ ಮುಂಡ್ಕೂರು ಅವರು, ಕೋಲ್ಹಾಪುರ, ರಾಯಗಡ್, ರತ್ನಗಿರಿ ಜಿಲ್ಲೆಗಳಲ್ಲಿ ಬ್ಯಾಂಕಿನ ವ್ಯವಹಾರವನ್ನು ವಿಸ್ತರಿಸಲು ಸರಕಾರದಿಂದ ಅನುಮತಿ ದೊರಕಿದ್ದು, ಇದರ ಸದುಪಯೋಗವನ್ನು ನಾವು ಪಡೆದುಕೊಂಡು ಆದಷ್ಟು ಶೀಘ್ರದಲ್ಲಿ ಮುಂಬಯಿಯಲ್ಲೂ ಇದರ ಶಾಖೆಯು ಪ್ರಾರಂಭಗೊಳ್ಳುವಂತಾಗಬೇಕು. ಅಲ್ಲದೆ ನಮ್ಮದೆ ಸ್ವಂತ ಬ್ಯಾಂಕೊಂದು ಕಾರ್ಯ ನಿರ್ವಹಿಸುವಂತೆ ಆಗುವಲ್ಲಿ ಎಲ್ಲರೂ ಶ್ರಮಿಸುತ್ತಿದ್ದೇವೆ ಎಂದರು.
Related Articles
Advertisement
ಚರಿಷ್ಮಾ ಬಿಲ್ಡರ್ನ ಸಿಎಂಡಿ ಸುಧೀರ್ ವಿ. ಶೆಟ್ಟಿ ಇವರು ಮಾತನಾಡಿ, ಬಂಟ್ಸ್ ಸಮಾಜಕ್ಕೊಂದು ಸ್ವಂತ ಬ್ಯಾಂಕ್ ಬೇಕು ಎಂಬ ನನ್ನಾಸೆ ಬಹುದಿನಗಳದ್ದಾಗಿದೆ. ಅದು ಸದ್ಯದಲ್ಲೇ ನೆರವೇರುತ್ತದೆ ಎಂಬ ವಿಶ್ವಾಸ ನನಗಿದೆ. ನಾನು ನನ್ನಿಂದಾಗುವ ಎಲ್ಲ ರೀತಿಯ ಸಹಾಯವನ್ನು ನೀಡಲು ಬದ್ಧನಾಗಿದ್ದೇನೆ ಎಂದರು.
ಭವಾನಿ ಫೌಂಡೇಷನ್ ಮುಂಬಯಿ ಸಂಸ್ಥಾಪಕಾಧ್ಯಕ್ಷ ಕೆ. ಡಿ. ಶೆಟ್ಟಿ ಇವರು ಮಾತನಾಡಿ, ಈ ಕನಸಿನ ಯೋಜನೆಗೆ ನನ್ನ ಸಂಪೂರ್ಣ ಸಹಕಾರವಿದೆ. ಅಸಾಧ್ಯವಾದುದು ಏನೂ ಇಲ್ಲ. ನಮ್ಮ ಪ್ರಯತ್ನ ಇದೇ ಮಾದರಿಯಲ್ಲಿ ಮುಂದುವರಿದಾಗ ಯಶಸ್ಸು ಖಂಡಿತ ಸಿಗುತ್ತದೆ ಎಂದು ಹೇಳಿದರು.ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಮಾತನಾಡಿ, ಬಂಟ ಸಮಾಜಕ್ಕೊಂದು ಬ್ಯಾಂಕ್ ಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ. ಅದಕ್ಕೆ ಇದೀಗ ಕಾಲ ಕೂಡಿ ಬಂದಂತಾಗಿದೆ. ಇದಕ್ಕೆ ನನ್ನ ಸಹಕಾರ ಸದಾಯಿದೆ ಎಂದು ನುಡಿದು ಶುಭ ಹಾರೈಸಿದರು. ಬಂಟರ ಸಂಘದ ವಿಶ್ವಸ್ತ ಕರ್ನಿರೆ ವಿಶ್ವನಾಥ ಶೆಟ್ಟಿ ಇವರು ಮಾತನಾಡಿ, ಸಲಹೆ ಸೂಚನೆಗಳನ್ನಿತ್ತು ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು.
ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ನಿರ್ದೇಶಕ ಡಾ| ಆರ್. ಕೆ. ಶೆಟ್ಟಿ, ರತ್ನಗಿರಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ ಕಾರ್ಯಾಧ್ಯಕ್ಷ ನ್ಯಾಯವಾದಿ ಸುಜಿತ್ ಬಿ. ಜಿಮನ್ ಉಪಸ್ಥಿತರಿದ್ದ ಬ್ಯಾಂಕಿನ ಅಭಿವೃದ್ಧಿಯ ಬಗ್ಗೆ, ವ್ಯವಹಾರದ ಬಗ್ಗೆ ವಿವರಿಸಿ ಎಲ್ಲರ ಸಹಕಾರ ಬಯಸಿದರು. ನೆರೂಲ್ ಶ್ರೀ ಶನೀಶ್ವರ ಮಂದಿರದ ಕಾರ್ಯಾಧ್ಯಕ್ಷ ಸಂತೋಷ್ ಡಿ. ಶೆಟ್ಟಿ, ವೆಂಕಟ್ ರೆಸಿಡೆನ್ಸಿ ಮಾಲಕ ವೆಂಕಟ್ರಮಣ್ ಇವರು ಸಲಹೆ ಸೂಚನೆಗಳನ್ನಿತ್ತು ತಮ್ಮ ಸಹಕಾರ ಸದಾಯಿದೆ ಎಂದು ನುಡಿದರು. ಮಾತೃಭೂಮಿ ಕ್ರೆಡಿಟ್ ಸೊಸೈಟಿಯ ಉಪಕಾರ್ಯಾಧ್ಯಕ್ಷ ಉಳೂ¤ರು ಮೋಹನ್‌ದಾಸ್ ಶೆಟ್ಟಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಎ ರಮೇಶ್ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಪ್ರಾರಂಭದಲ್ಲಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ ನಿರ್ದೇಶಕ ಮಂಜಯ್ಯ ಸಿ. ಶೆಟ್ಟಿ, ಮಾತೃಭೂಮಿ ಕ್ರೆಡಿಟ್ ಸೊಸೈಟಿಯ ನಿರ್ದೇಶಕ ಉಮಾಕೃಷ್ಣ ಶೆಟ್ಟಿ, ಸುಜಾತಾ ಐಕಳ ಗುಣಪಾಲ್ ಶೆಟ್ಟಿ, ಬಂಟರ ಸಂಘ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ನಂದಿಕೂರು ಜಗದೀಶ್ ಶೆಟ್ಟಿ, ಉದ್ಯಮಿ ಖಾಂದೇಶ್ ಭಾಸ್ಕರ ಶೆಟ್ಟಿ, ಬಂಟರ ಸಂಘ ಮುಂಬಯಿ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಜತೆ ಕೋಶಾಧಿಕಾರಿ ಐಕಳ ಗುಣಪಾಲ್ ಶೆಟ್ಟಿ, ರೀಜನಲ್ ಕೋಆರ್ಡಿನೇಟರ್ ಡಾ| ಪ್ರಭಾಕರ ಶೆಟ್ಟಿ, ಬಂಟರವಾಣಿಯ ಕಾರ್ಯಾಧ್ಯಕ್ಷ ಶಾಂತಾರಾಮ ಶೆಟ್ಟಿ, ಪೊವಾಯಿ ಎಸ್. ಎಂ. ಶೆಟ್ಟಿ ಶಿಕ್ಷಣ ಸಂಸ್ಥೆಯ ಹರೀಶ್ ವಾಸು ಶೆಟ್ಟಿ, ಉದ್ಯಮಿ ಸಂಜೀವ ಶೆಟ್ಟಿ, ಪನ್ವೇಲ್ ನಗರ ಸೇವಕ ಸಂತೋಷ್ ಶೆಟ್ಟಿ, ಥಾಣೆ ಬಂಟ್ಸ್‌ನ ಕಾರ್ಯಾಧ್ಯಕ್ಷ ಕುಶಲ್ ಸಿ. ಭಂಡಾರಿ, ಬೋಂಬೆ ಬಂಟ್ಸ್‌ನ ಮಾಜಿ ಅಧ್ಯಕ್ಷ ಶ್ಯಾಮ್ ಎನ್. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ನಿರ್ದೇಶಕ ಪ್ರವೀಣ್ ಬಿ. ಶೆಟ್ಟಿ ವಂದಿಸಿದರು. ಚಿತ್ರ-ವರದಿ: ಸುಭಾಷ್ ಶಿರಿಯಾ