Advertisement

12 ಸಾವಿರ ಕುಟುಂಬಕ್ಕೆ ಪಡಿತರ

05:30 AM Jun 04, 2020 | Team Udayavani |

ಪಾಂಡವಪುರ: ಲಾಕ್‌ಡೌನ್‌ನಿಂದ ಸಮಸ್ಯೆಗೆ ಸಿಲುಕಿರುವ ತಾಲೂಕಿನ ಸುಮಾರು 12 ಸಾವಿರ ಕುಟುಂಬಗಳಿಗೆ ಪಡಿತರ ಕಿಟ್‌ ವಿತರಣೆ ಮಾಡಲಾಗಿದೆ ಎಂದು ಸಮಾಜಸೇವಕ ಬಿ.ರೇವಣ್ಣ ಹೇಳಿದರು.

Advertisement

ಪಟ್ಟಣದ ಪುರಸಭೆ ಆವರಣದಲ್ಲಿ  ವಿಕಲಚೇತನರು, ಆಶಾಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು, ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿಗೆ ಪಡಿತರ ಕಿಟ್‌ ವಿತರಿಸಿ ಮಾತನಾಡಿ, ಲಾಕ್‌ಡೌನ್‌ನಿಂದ ಕ್ಷೇತ್ರದಲ್ಲಿ ಸಾಕಷ್ಟು ಮಂದಿ ಸಂಕಷ್ಟಕ್ಕೆ ಸಿಲುಕಿದ್ದರು. ಅಲ್ಲದೆ,  ಸಂಕಷ್ಟಕ್ಕೆ ಸಿಲುಕಿದ ಬಹುತೇಕ ಮಂದಿ ನೆರವಾಗುವಂತೆ ಮನವಿ ಮಾಡಿದರು.

ಈ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಬಡವರ, ಕೂಲಿಕಾರ್ಮಿಕರು, ಶ್ರಮಿಕರು, ಆಟೋ ಚಾಲಕರು, ಸವಿತ ಸಮುದಾಯ, ಮಂಗಳಮುಖೀಯರು,  ಪೌರಕಾರ್ಮಿಕರು, ಬೀದಿಬದಿಯ ವ್ಯಾಪಾರಿಗಳು ಸೇರಿದಂತೆ ಸಂಕಷ್ಟಕ್ಕೆ ಸಿಲುಕಿದ್ದ ಜನರಿಗೆ ನೆರವಾಗಬೇಕು ಎನ್ನುವ ಉದ್ದೇಶದಿಂದ ಕ್ಷೇತ್ರದಲ್ಲಿ ಸುಮಾರು 7 ಹಂತದಕಾರ್ಯಕ್ರಮವನ್ನು ಹಮ್ಮಿಕೊಂಡು ಕ್ಷೇತ್ರಾದ್ಯಂತ ಸುಮಾರು 12  ಸಾವಿರದಷ್ಟು ಆಹಾರದ ಕಿಟ್‌ಗಳನ್ನು ವಿತರಣೆ ಮಾಡಿದ್ದೇನೆ ಎಂದರು.

ರಾಜ್ಯ ಕೆಪಿಸಿಸಿ ಕಾರ್ಯಾಧ್ಯಕ್ಷ ತಿಬ್ಬೇಗೌಡ ಮಾತನಾಡಿ, ಲಾಕ್‌ಡೌನ್‌ ನಡುವೆ ಸಂಕಷ್ಟಕ್ಕೆ ಸಿಲುಕಿರುವ ಸಾವಿರಾರು ಕುಟುಂಬಗಳಿಗೆ ಸಮಾಜ ಸೇವಕ ಬಿ.ರೇವಣ್ಣ  ಆಹಾರದ ಕಿಟ್‌ ವಿತರಣೆ ಮಾಡುವ ಮೂಲಕ ಹೃದಯವಂತಿಕೆ ಮೆರೆದಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿ.ಡಿ.ಗಂಗಾಧರ್‌, ಮುಖಂಡರಾದ ಡಿ.ಹುಚ್ಚೇಗೌಡ, ಬಂಕ್‌ ಶ್ರೀನಿವಾಸ್‌, ಪುರಸಭೆ ಸದಸ್ಯರಾದ  ಜಯಮ್ಮ, ಪಾರ್ಥ, ಉಮಾಶಂಕರ್‌, ಬಿ.ರೇವಣ್ಣ ಅಭಿಮಾನಿ ಬಳಗದ ಬಿ.ಟಿ.ಮಂಜುನಾಥ್‌, ಮಹದೇಶ್ವರಪುರ ಮಹದೇವು, ಶ್ರೀಕಂಠು, ಸಂತೋಷ್‌, ಅನೀಲ್‌, ಕಾರ್ತಿಕ್‌, ಜಗದೀಶ್‌, ಬನ್ನಂಗಾಡಿ ದೇವರಾಜು, ಸುಂದರೇಶ್‌, ಸತೀಶ್‌ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next