Advertisement

ಜೂನ್‌ ಪಡಿತರ ಹಂಚಿಕೆ: ಡಿಸಿ

06:56 AM Jun 09, 2020 | Suhan S |

ಕೊಪ್ಪಳ: ಆಹಾರ ಇಲಾಖೆ ಆಯುಕ್ತರ ನಿರ್ದೇಶನದಂತೆ ಜಿಲ್ಲೆಯ ಅಂತ್ಯೋದಯ ಮತ್ತು ಬಿಪಿಎಲ್‌ ಹಾಗೂ ಎಪಿಎಲ್‌ ಪಡಿತರ ಚೀಟಿದಾರರಿಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ, ಅನ್ನಭಾಗ್ಯ ಯೋಜನೆ, ಸಾಮಾನ್ಯ ಹಂಚಿಕೆ, ಹೊಸ ಪಡಿತರ ಚೀಟಿ ಅರ್ಜಿದಾರರಿಗೆ ವಿಶೇಷ ಹಂಚಿಕೆ ಯೋಜನೆಯಡಿ ಜೂನ್‌ ತಿಂಗಳ ಪಡಿತರ ಹಂಚಿಕೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಸುನೀಲ್‌ ಕುಮಾರ್‌ ತಿಳಿಸಿದ್ದಾರೆ.

Advertisement

ಬಿಪಿಎಲ್‌ ಮತ್ತು ಅಂತ್ಯೋದಯಕ್ಕೆ ಪಿಎಂ ಗರೀಬ ಕಲ್ಯಾಣ ಅನ್ನಯೋಜನೆಯಡಿ ಪ್ರತಿ ಸದಸ್ಯನಿಗೆ 5 ಕೆಜಿ ಅಕ್ಕಿ, 2 ಕೆಜಿ ತೊಗರಿ ಬೇಳೆ, ಬಿಪಿಎಲ್‌ಗೆ ಪ್ರತಿ ಸದಸ್ಯನಿಗೆ 5 ಕೆಜಿ ಅಕ್ಕಿ, ಪ್ರತಿ ಪಡಿತರ ಚೀಟಿಗೆ 2 ಕೆಜಿ ಗೋಧಿ, ಅಂತ್ಯೋದಯ ಚೀಟಿದಾರರಿಗೆ ಅನ್ನಭಾಗ್ಯ ಯೋಜನೆಯಡಿ ಪ್ರತಿ ಪಡಿತರ ಚೀಟಿಗೆ 35 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತದೆ. ಎಪಿಎಲ್‌ಗೆ ಸಾಮಾನ್ಯ ಹಂಚಿಕೆ ಯೋಜನೆಯಡಿ ಏಕ ಸದಸ್ಯ ಪಡಿತರ ಚೀಟಿದಾರರಿಗೆ 5 ಕೆಜಿ ಅಕ್ಕಿ, ಬಹುಸದಸ್ಯ ಪಡಿತರ ಚೀಟಿದಾರರಿಗೆ 10 ಕೆಜಿ ಅಕ್ಕಿಯನ್ನು ಪ್ರತಿ ಕೆಜಿ ಅಕ್ಕಿಗೆ ರೂ. 15ನಂತೆ ನೀಡಲಾಗುತ್ತದೆ. ಹೊಸ ಪಡಿತರ ಚೀಟಿ ಅರ್ಜಿದಾರರಿಗೆ ವಿಶೇಷ ಹಂಚಿಕೆ ಯೋಜನೆಯಡಿ ಬಿಪಿಎಲ್‌ ಮತ್ತು ಅಂತ್ಯೋದಯ ಪಡಿತರ ಚೀಟಿದಾರರಿಗೆ ಪ್ರತಿ ಪಡಿತರ ಚೀಟಿಗೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತದೆ. ಎಪಿಎಲ್‌ ಪಡಿತರ ಚೀಟಿದಾರರಿಗೆ ಪ್ರತಿ ಪಡಿತರ ಚೀಟಿಗೆ 10 ಕೆಜಿ ಅಕ್ಕಿಯನ್ನ ಪ್ರತಿ ಕೆಜಿಗೆ ರೂ. 15ರಂತೆ ವಿತರಣೆ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next