ಮತ್ತು ಹಿಂದೂಗಳಿಗೆ ಸೂಕ್ತ ರಕ್ಷಣೆ ನೀಡದ ರಾಜ್ಯ ಸರಕಾರದ ಕ್ರಮವನ್ನು ವಿರೋಧಿಸಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ವತಿಯಿಂದ ನಗರದ ಪಿವಿಎಸ್ ಸರ್ಕಲ್ ಬಳಿ ಗುರುವಾರ ತುರ್ತು ರಾಸ್ತಾರೋಕೊ ಪ್ರತಿಭಟನೆ ನಡೆಯಿತು.
Advertisement
ಪ್ರತಿಭಟನಕಾರರು ರಸ್ತೆ ತಡೆ ನಡೆಸುತ್ತಿದ್ದಂತೆಯೇ ಪೊಲೀಸರು ಅವರನ್ನೆಲ್ಲ ಬಂಧಿಸಿದರು. ಪ್ರತಿಭಟನೆ ನಡೆಸಿದ ಪ್ರಮುಖರಾದ ವೇದವ್ಯಾಸ ಕಾಮತ್, ಬದರೀನಾಥ ಕಾಮತ್, ರವಿಶಂಕರ್ ಮಿಜಾರ್, ಕ್ಯಾ| ಬ್ರಿಜೇಶ್ ಚೌಟ,ಪ್ರೇಮಾನಂದ ಶೆಟ್ಟಿ, ರೂಪಾ ಡಿ. ಬಂಗೇರ ಮತ್ತಿತರರನ್ನು ಪೊಲೀಸರು ಬಂಧಿಸಿ ಆನಂತರ ಬಿಡುಗಡೆಗೊಳಿಸಿದರು.