Advertisement

ಮೊದಲ ಹಿಂದಿ ಚಿತ್ರದ ಶೂಟಿಂಗ್‌ ಮುಗಿದ ಖುಷಿಯಲ್ಲಿ ರಶ್ಮಿಕಾ ಮಂದಣ್ಣ

04:30 PM Sep 16, 2021 | Team Udayavani |

ಕನ್ನಡ ಚಿತ್ರರಂಗದಿಂದ ತೆಲುಗಿನತ್ತ ಹೊರಟು, ಅಲ್ಲಿಂದ ಬಾಲಿವುಡ್‌ ನ‌ತ್ತ ಮುಖ ಮಾಡಿರುವ ನಟಿ ರಶ್ಮಿಕಾ ಮಂದಣ್ಣ ಸದ್ಯ ತಮ್ಮ ಮೊದಲ ಹಿಂದಿ ಚಿತ್ರ “ಮಿಷನ್‌ ಮಜ್ನು’ ಚಿತ್ರೀಕರಣ ಮುಗಿಸಿದ ಖುಷಿಯಲ್ಲಿದ್ದಾರೆ.

Advertisement

ಇತ್ತೀಚೆಗಷ್ಟೇ ರಶ್ಮಿಕಾ ಮಂದಣ್ಣ ಅಭಿನಯದ ಚೊಚ್ಚಲ ಹಿಂದಿ ಚಿತ್ರ ” ಮಿಷನ್‌ ಮಜ್ನು ‘ ಚಿತ್ರೀಕರಣ ಪೂರ್ಣಗೊಂಡಿದ್ದು, ಇದೇ ಖುಷಿಯಲ್ಲಿ ಚಿತ್ರತಂಡ ಮುಂಬೈನ ಪ್ರತಿಷ್ಟಿತ ಐಷಾರಾಮಿ ಹೋಟೆಲ್‌ನಲ್ಲಿ ಭರ್ಜರಿಯಾಗಿ ಕೇಕ್‌ಕತ್ತರಿಸಿ ಪಾರ್ಟಿ ಮಾಡಿದೆ. ಚಿತ್ರತಂಡದ ಈ ಅದ್ಧೂರಿ ಪಾರ್ಟಿಯ ಪೋಟೋಗಳು ಮತ್ತು ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲೂ ಸಾಕಷ್ಟು ವೈರಲ್‌ ಆಗಿದೆ.

ಇದನ್ನೂ ಓದಿ:ತ್ಯಾಗಮಯಿ ಈ ‘ಪ್ರೇಮಮಯಿ’: ಪ್ರೇಮ-ಪ್ರೀತಿಗೆ ಹೊಸ ವ್ಯಾಖ್ಯಾನ

ಇನ್ನು ” ಮಿಷನ್‌ ಮಜ್ನು ‘ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಗೆ ಜೋಡಿಯಾಗಿ ರಶ್ಮಿಕಾ ಕಾಣಿಸಿ ಕೊಂಡಿದ್ದಾರೆ. ಸದ್ಯ “ಮಿಷನ್‌ ಮಜ್ನು’ ಪೋಸ್ಟ್‌ ಪ್ರೊಡಕ್ಷನ್‌ಕೆಲಸಗಳು ಭರದಿಂದ ನಡೆಯುತ್ತಿದ್ದು, ಮುಂದಿನ ವರ್ಷದ ಪ್ರಾರಂಭದಲ್ಲಿ ರಶ್ಮಿಕಾ ಮೊದಲ ಬಾಲಿವುಡ್‌ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next