Advertisement
ಏನಿದು ರಶೀದ್? ಹಕುಟೊ-ಆರ್?ಜಪಾನಿನ ಹಕುಟೊ-ಆರ್ ಖಾಸಗಿ ಲ್ಯಾಂಡರ್ ಸಾಧನದ ಮೂಲಕ ಯುಎಇಯ ರಶೀದ್ ರೋವರ್ ಚಂದ್ರನಲ್ಲಿಗೆ ಪ್ರಯಾಣ ಬೆಳೆಸಿದೆ. ಸ್ಪೇಸ್‌ಎಕ್ಸ್ ರಾಕೆಟ್ ಮೂಲಕ 2022, ಡಿಸೆಂಬರ್‌ನಲ್ಲಿ ರಶೀದ್ ರೋವರ್ ಉಡಾವಣೆಗೊಂಡಿತು. ಈಗಾಗಲೇ 5 ತಿಂಗಳು ಮುಗಿದಿದೆ. ಇನ್ನು ಚಂದ್ರನ ಮೇಲಿಳಿಯಲು ರಶೀದ್‌ಗೆ ಅತ್ಯಂತ ಕನಿಷ್ಠ ಸಮಯ ಸಾಕು. ಗ್ರಹವೊಂದರ ಮೇಲ್ಮೆ„ಯನ್ನು ಅಧ್ಯಯನ ಮಾಡುವ, ಚಿತ್ರ ತೆಗೆಯುವ ಸಾಮರ್ಥ್ಯ ರೋವರ್‌ಗಳಿಗಿರುತ್ತದೆ. ಯುಎಇ ರೋವರ್‌ಗೆ ಆಧುನಿಕ ಯುಎಇ ನಿರ್ಮಾತೃ ಎಂಬ ಗೌರವ ಹೊಂದಿರುವ ಶೇಖ್ ರಶೀದ್ ಬಿನ್ ಸಯೀದ್ ಅಲ್ ಮಖೂ¤ಮ್ ಹೆಸರನ್ನಿಡಲಾಗಿದೆ.
10 ಕೆಜಿ ತೂಕದ ರಶೀದ್ ರೋವರ್, ಎರಡು ಕ್ಯಾಮೆರಾಗಳನ್ನು ಹೊಂದಿದೆ. ಇವು ಚಂದ್ರನ ಮಣ್ಣಿನ ಚಿತ್ರಗಳನ್ನು ತೆಗೆಯುತ್ತವೆ. ಚಂದ್ರನಲ್ಲಿರುವ ಜೀವದ್ರವ್ಯದ ಪ್ರಮಾಣವೇನು, ಅದು ಹೇಗಿದೆ, ಸೌರವ್ಯೂಹ ವಿಕಿರಣಗಳೊಂದಿಗೆ ರೋವರ್ ಹೇಗೆ ಸ್ಪಂದಿಸುತ್ತದೆ ಎಂಬುದನ್ನೆಲ್ಲ ವಿಜ್ಞಾನಿಗಳು ಹುಡುಕಲಿದ್ದಾರೆ.