Advertisement

ಚರ್ಚ್‌ಸ್ಟ್ರೀಟ್‌ನಲ್ಲಿ ಶೀಘ್ರ ಜನ ಸಂಚಾರ

12:10 PM Dec 29, 2017 | |

ಬೆಂಗಳೂರು: ಹೊಸ ವರ್ಷದ ವೇಳೆಗೆ ನಗರದ ಪ್ರತಿಷ್ಠಿತ ಚರ್ಚ್‌ಸ್ಟ್ರೀಟ್‌ ಅನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲು ಬಿಬಿಎಂಪಿ ಸಿದ್ಧತೆ ನಡೆಸಿದ್ದು, ಬಾಕಿ ಕಾಮಗಾರಿಗಳನ್ನು ಡಿ.31ರೊಳಗೆ ಪೂರ್ಣಗೊಳಿಸಲು ಮುಂದಾಗಿದೆ.

Advertisement

ಚರ್ಚ್‌ಸ್ಟ್ರೀಟನ್ನು ವಿಶ್ವದರ್ಜೆ ಮಾದರಿಯ ರಸ್ತೆಯನ್ನಾಗಿ ನಿರ್ಮಿಸಲು ಬಿಬಿಎಂಪಿ 9.02 ಕೋಟಿ ರೂ. ವೆಚ್ಚದಲ್ಲಿ ಟೆಂಡರ್‌ ಶ್ಯೂರ್‌ ಕಾಮಗಾರಿ ಕೈಗೆತ್ತಿಕೊಂಡಿದ್ದು, ಈಗಾಗಲೇ ಮೊದಲ ಹಂತದ 440 ಮೀ. ಕಾಮಗಾರಿ ಪೂರ್ಣಗೊಂಡಿದೆ. ಬೀದಿ ದೀಪ ಅಳವಡಿಕೆ ಹಾಗೂ ಪಾದಚಾರಿ ಮಾರ್ಗದ ಸ್ಲಾéಬ್‌ ಅಳವಡಿಕೆ ಕಾರ್ಯ ಮಾತ್ರ ಬಾಕಿಯಿದ್ದು, ಡಿ.31ರ ವೇಳೆಗೆ ಅದನ್ನು ಪೂರ್ಣಗೊಳಿಸಲು ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ.

ಇದರೊಂದಿಗೆ ಚರ್ಚ್‌ಸ್ಟ್ರೀಟ್‌ ರಸ್ತೆಯಲ್ಲಿ ಕರಕುಶಲ ಕಲೆಗಳನ್ನು ಬಿಂಬಿಸುವ ಕಾಬಲ್‌ ಸ್ಟೋನ್‌ ಅಳವಡಿಸಲಾಗುತ್ತಿದ್ದು, ಸದ್ಯ 480 ಮೀಟರ್‌ ರಸ್ತೆಯಲ್ಲಿ ಈ ಕೆಲಸ ಪೂರ್ಣಗೊಳಿಸಲಾಗಿದೆ. ಉಳಿದಂತೆ ಎರಡನೇ ಹಂತದ ರಸ್ತೆಯಲ್ಲಿಯೂ ವಿವಿಧ ಸೇವಾ ಜಾಲಗಳ ಸ್ಥಳಾಂತರ ಕಾಮಗಾರಿ ಮುಗಿಸಿದ್ದು, ಹೊಸವರ್ಷಕ್ಕೆ ಸದ್ಯ ಕಾಮಗಾರಿ ಪೂರ್ಣಗೊಂಡ 480 ಮೀಟರ್‌ ರಸ್ತೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲು ಚಿಂತನೆ ನಡೆಸಿದ್ದು,

ಬಾಕಿಯಿರುವ ಬೀದಿ ದೀಪ ಅಳವಡಿಕೆ ಕಾರ್ಯವನ್ನು ಶನಿವಾರ ಪೂರ್ಣಗೊಳಿಸಲಾಗುವುದು ಎಂದು ಪಾಲಿಕೆಯ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಈಗಾಗಲೇ 480 ಮೀಟರ್‌ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿಲ್ಲ. ಹೊಸ ವರ್ಷಕ್ಕೆ ರಸ್ತೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿ, ಜನವರಿ ಎರಡನೇ ವಾರದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಪಾಲಿಕೆಯ ಎಂಜಿನಿಯರ್‌ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next