ಕಾಪು: ಪೊಲೀಸರು ಮತ್ತು ಸ್ಥಳೀಯರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸುವ ಮೂಲಕ ಅಕ್ರಮವಾಗಿ ಮೂರು ಲಾರಿಗಳಲ್ಲಿ ಸಾಗಿಸುತ್ತಿದ್ದ ದನಗಳನ್ನು ಪತ್ತೆ ಹಚ್ಚಿರುವ ಘಟನೆ ಬುಧವಾರ ಕಾಪುವಿನ ಪೊಲಿಪು ಜಂಕ್ಷನ್ ಬಳಿ ನಡೆದಿದೆ.
ಕೇರಳದಿಂದ ಉಡುಪಿಗೆ ಅಕ್ರಮವಾಗಿ ಮೂರು ಲಾರಿಗಳಲ್ಲಿ ದನಕರುಗಳನ್ನು ಸಾಗಿಸಲಾಗುತ್ತಿತ್ತು ಎಂದು ವರದಿ ತಿಳಿಸಿದೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಹಿಂದೂ ಸಂಘಟನೆಯ ಕಾರ್ಯಕರ್ತರು ಸೇರಿದಂತೆ ನೂರಾರು ಮಂದಿ ಕಾಪು ಪೊಲೀಸ್ ಠಾಣೆಯ ಮುಂದೆ ಜಮಾಯಿಸಿರುವುದಾಗಿ ವರದಿ ವಿವರಿಸಿದೆ.
ಇದೀಗ ಕಾಪು ಪೊಲೀಸರು ಪ್ರಾಣಿ ತಡೆ ಕಾಯ್ದೆ, ಮೋಟಾರು ವಾಹನ ಕಾಯ್ದೆ ಉಲ್ಲಂಘನೆ ಮತ್ತು ಅಕ್ರಮ ಗೋ ಸಾಗಾಟ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.