Advertisement

ನಗರ ಪ್ರದೇಶದವರಿಗೂ ಶೀಘ್ರ ಉದ್ಯೋಗ

05:23 AM May 16, 2020 | Team Udayavani |

ಕೊಳ್ಳೇಗಾಲ: ನರೇಗಾ ಯೋಜನೆಯಡಿ ಗ್ರಾಮೀಣರಿಗೆ ಕೂಲಿ ಕೆಲಸ ದೊರೆಯುತ್ತಿದ್ದು, ಅದೇ ರೀತಿ ನಗರ ಪ್ರದೇಶದವರಿಗೂ ಉದ್ಯೋಗ ಅವಕಾಶ ಶೀಘ್ರದಲ್ಲೇ ದೊರೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ಕುಮಾರ್‌ ಹೇಳಿದರು.

Advertisement

ತಾಲೂಕಿನ ಮುಳ್ಳೂರು ಗ್ರಾಪಂನಿಂದ 150 ಎಕರೆ ಕೆರೆ ಹೂಳೆತ್ತುವ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು, ಈಗಾಗಲೇ ಕೇಂದ್ರ ಸರ್ಕಾರ 20 ಲಕ್ಷ ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಿದೆ. ಅದರಲ್ಲಿ ನಗರ  ಪ್ರದೇಶದವರಿಗೂ ಉದ್ಯೋಗ ಸೃಷ್ಟಿಯಾಗಲಿದೆ ಎಂದರು.

ಎಪಿಎಂಸಿ ಮಾರುಕಟ್ಟೆ ಖಾಸಗೀಕರಣ ಮಾಡಲು ಈ ಹಿಂದೆ ಇದ್ದ ಯುಪಿಎ ಸರ್ಕಾರ ಕೈಗೆ ತ್ತಿಕೊಂಡಿತ್ತು. ಆದರೆ ಅದು ಈಗ ಜಾರಿಯಾಗಿದೆ. ವಿರೋಧ ಪಕ್ಷದವರು ಕೇವಲ ತಪ್ಪು  ಕಲ್ಪನೆ ಸೃಷ್ಟಿಸಿ ರೈತರಿಗೆ ಸ್ವತಂತ್ರವಾಗಿ ವ್ಯಾಪಾರ ಮಾಡಲು ವಿರೋಧ ಪಕ್ಷಗಳು ತಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ತಪ್ಪು ಕಲ್ಪನೆ ಹೋಗಲಾಡಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಈ ಸಂದ ರ್ಭದಲ್ಲಿ ಶಾಸಕರಾದ  ಮಹೇಶ್‌, ನಿರಂಜನ್‌ಕುಮಾರ್‌, ಜಿಲ್ಲಾಧಿಕಾರಿ ಡಾ. ಎಂ.ಆರ್‌.ರವಿ, ಉಪ ವಿಭಾಗಾಧಿಕಾರಿ ನಿಖೀತ, ಎಎಸ್ಪಿ ಅನಿತಾ, ಮುಳ್ಳೂರು ಗ್ರಾಪಂ ಅಧ್ಯಕ್ಷೆ ಶಾರದಾಕುಮಾರಿ, ಉಪಾಧ್ಯಕ್ಷ ಪ್ರವೀಣ್‌, ಪಿಡಿಒ ರಾಜೇಶ್‌, ತಹಶೀಲ್ದಾರ್‌ ಕುನಾಲ್‌, ಇಒ  ಪ್ರಕಾಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next