Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯಪುರದಲ್ಲಿ ನಡೆದ ಘಟನೆ ಹೇಯ ಕೃತ್ಯ. ಇಂತಹ ದುಷ್ಕೃತ್ಯ ನಿಯಂತ್ರಿಸಲು ಮಧ್ಯ ಪ್ರದೇಶದಲ್ಲಿರುವ ಕಾನೂನು ಮಾಹಿತಿ ತರಿಸಿಕೊಂಡು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ದೇಶದಲ್ಲಿ ನಡೆಯುವ ಅಪರಾಧಗಳ ಸಂಖ್ಯೆ ಪೈಕಿ ಶೇ.5ರಷ್ಟು ಮಾತ್ರ ರಾಜ್ಯದಲ್ಲಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ.6 ರಷ್ಟಿತ್ತು. ನಮ್ಮ ಸರ್ಕಾರ ಬಂದ ನಂತರ ಶೇ.1ರಷ್ಟು ಕಡಿಮೆಯಾಗಿದೆ. ಶೇ.11.5ರಷ್ಟು ಅಪರಾಧ ನಡೆಯುವ ಮೂಲಕ ದೇಶದಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. ಹೀಗಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೊದಲು ಈ ಬಗ್ಗೆ ತಲೆಕೆಡಿಸಿಕೊಳ್ಳಲಿ. 80 ಹಸುಗೂಸುಗಳು ಸಾವನ್ನಪ್ಪಿವೇ. ಈ ಮಕ್ಕಳ ಸಾವಿಗೆ ಮೊದಲು ನ್ಯಾಯ ಕೊಡಿಸಿ, ನಂತರ ನಮ್ಮ ರಾಜ್ಯದ ಬಗ್ಗೆ ಮಾತನಾಡಿ. ಅದು ಬಿಟ್ಟು ಇಲ್ಲಿಗೆ ಬಂದು ಟಿಪ್ಪು ಜಯಂತಿ ಬಗ್ಗೆ ಮಾತನಾಡಬೇಡಿ. ನಾವು ರಾಮನ ಜಯಂತಿನೂ ಮಾಡ್ತಿವಿ, ಕೃಷ್ಣನ ಜಯಂತಿನೂ ಮಾಡ್ತಿವಿ ಎಂದು ಎಂದು ತಿರುಗೇಟು ನೀಡಿದರು.
Related Articles
ನರೇಂದ್ರ ದಾಬೋಲ್ಕರ್ ಹತ್ಯೆಯಾಗಿ 4ವರ್ಷ ಕಳೆದರೂ ಹಂತಕರು ಪತ್ತೆಯಾಗಿಲ್ಲ. ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆ ರೀತಿಯಾಗುವುದಿಲ್ಲ. ಪತ್ರಕರ್ತೆ ಗೌರಿ ಲಂಕೇಶ್ ಹಂತಕರು ಸದ್ಯದಲ್ಲೇ ಸಿಗುತ್ತಾರೆ. ಆ ನಿಟ್ಟಿನಲ್ಲೇ ವಿಶೇಷ ತಂಡ ಕೆಲಸ ಮಾಡುತ್ತಿದೆ ಎಂದ ಸಚಿವರು, ಕಿಡಿಗೇಡಿಗಳಿಂದ ಗೌರಿಲಂಕೇಶ್ ಹತ್ಯೆಯಾದಾಗ ಸೌಜನ್ಯಕ್ಕಾದರೂ ಬಿಜೆಪಿಯವರು ತಿರುಗಿ ನೋಡದೆ, ಈಗ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದರು.
Advertisement