Advertisement

ರಣಜಿ: ಪ್ರಸಿದ್ಧ್ ಕೃಷ್ಣ ಬೌಲಿಂಗಿಗೆ ಕುಸಿದ ಜಮ್ಮು-ಕಾಶ್ಮೀರ

06:42 PM Feb 25, 2022 | Team Udayavani |

ಚೆನ್ನೈ: ಪ್ರಸಿದ್ಧ್ ಕೃಷ್ಣ ಅವರ ಘಾತಕ ಬೌಲಿಂಗ್‌ ದಾಳಿಗೆ ತತ್ತರಿಸಿದ ಜಮ್ಮು ಮತ್ತು ಕಾಶ್ಮೀರ ರಣಜಿ ಪಂದ್ಯದ 2ನೇ ದಿನ 93 ರನ್ನಿಗೆ ಆಲೌಟ್‌ ಆಗಿದೆ.

Advertisement

ಒಟ್ಟು 337 ರನ್ನುಗಳ ಮುನ್ನಡೆಯೊಂದಿಗೆ ಕರ್ನಾಟಕ ತನ್ನ ಹಿಡಿತವನ್ನು ಬಿಗಿಗೊಳಿಸಿದೆ. ಪ್ರಸಿದ್ಧ್ ಕೃಷ್ಣ 35 ರನ್ನಿತ್ತು 6 ವಿಕೆಟ್‌ ಉಡಾಯಿಸಿದರು.

ಜಮ್ಮು- ಕಾಶ್ಮೀರದ ಆರಂಭ ಉತ್ತಮವಾಗಿಯೇ ಇತ್ತು. ಮೊದಲ ವಿಕೆಟಿಗೆ 55 ರನ್‌ ಒಟ್ಟುಗೂಡಿತು. ಆದರೆ ಕೇವಲ 38 ರನ್‌ ಅಂತರದಲ್ಲಿ ಎಲ್ಲ 10 ವಿಕೆಟ್‌ಗಳು ಉದುರಿ ಹೋದವು!

ಕರುಣ್‌ ನಾಯರ್‌ ಅವರ ಅಜೇಯ ಶತಕ ಸಾಹಸದಿಂದ ಕರ್ನಾಟಕ ಮೊದಲ ದಿನ 8 ವಿಕೆಟಿಗೆ 268 ರನ್‌ ಗಳಿಸಿತ್ತು. ದ್ವಿತೀಯ ದಿನ 302ಕ್ಕೆ ಇನ್ನಿಂಗ್ಸ್‌ ಮುಗಿಸಿತು. 152 ರನ್‌ ಮಾಡಿ ಆಡುತ್ತಿದ್ದ ನಾಯರ್‌ 175 ರನ್‌ ಮಾಡಿ ರಸೂಲ್‌ ಎಸೆತದಲ್ಲಿ ಲೆಗ್‌ ಬಿಫೋರ್‌ ಆದರು. 311 ಎಸೆತಗಳ ಈ ಅಮೋಘ ಇನ್ನಿಂಗ್ಸ್‌ನಲ್ಲಿ 24 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸೇರಿತ್ತು.

ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿರುವ ಕರ್ನಾಟಕ 2 ವಿಕೆಟಿಗೆ 128 ರನ್‌ ಗಳಿಸಿದೆ. ಆರ್‌. ಸಮರ್ಥ್ 62, ದೇವದತ್ತ ಪಡಿಕ್ಕಲ್‌ 49 ರನ್‌ ಮಾಡಿ ನಿರ್ಗಮಿಸಿದ್ದಾರೆ. ಕರುಣ್‌ ನಾಯರ್‌ (10) ಮತ್ತು ಕೆ. ಸಿದ್ಧಾರ್ಥ್ (1) ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

Advertisement

ಇದನ್ನೂ ಓದಿ :ದ್ವಿತೀಯ ಟೆಸ್ಟ್‌: ಸರೆಲ್‌ ಇರ್ವೀ ಚೊಚ್ಚಲ ಶತಕ; ದಕ್ಷಿಣ ಆಫ್ರಿಕಾ ಚೇತರಿಕೆ

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ-302 (ನಾಯರ್‌ 175, ಸಮರ್ಥ್ 45, ಮೋರೆ 23, ರಸೂಲ್‌ 60ಕ್ಕೆ 4, ಮಲಿಕ್‌ 35ಕ್ಕೆ 2, ಯೂಸುಫ್ 52ಕ್ಕೆ 2) ಮತ್ತು 2 ವಿಕೆಟಿಗೆ 128.

ಜಮ್ಮು ಮತ್ತು ಕಾಶ್ಮೀರ-93 (ಕಮ್ರಾನ್‌ ಇಕ್ಬಾಲ್‌ 35, ಜತಿನ್‌ ವಾಧ್ವಾನ್‌ 25, ಪ್ರಸಿದ್ಧ್ ಕೃಷ್ಣ 35ಕ್ಕೆ 6, ಪಾಟೀಲ್‌ 10ಕ್ಕೆ 2).

ಮುಂಬಯಿ ವಿರುದ್ಧ ಗೋವಾ ಮೇಲುಗೈ
ಅಹ್ಮದಾಬಾದ್‌: ಪ್ರಬಲ ಮುಂಬಯಿ ವಿರುದ್ಧ ಗೋವಾ 164 ರನ್ನುಗಳ ಮೊದಲ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿದೆ. ಮುಂಬಯಿಯ 163 ರನ್ನುಗಳ ಮೊದಲ ಇನ್ನಿಂಗ್ಸ್‌ ಉತ್ತರವಾಗಿ ಗೋವಾ 327 ರನ್‌ ಪೇರಿಸಿತು. ದ್ವಿತೀಯ ಸರದಿಯಲ್ಲಿ ಮುಂಬಯಿ ಒಂದು ವಿಕೆಟಿಗೆ 57 ರನ್‌ ಮಾಡಿದ್ದು, ಇನ್ನೂ 107 ರನ್‌ ಹಿನ್ನಡೆಯಲ್ಲಿದೆ.
ಗೋವಾ ಸರದಿಯಲ್ಲಿ ಮೂವರಿಂದ ಅರ್ಧ ಶತಕ ದಾಖಲಾಯಿತು. ಏಕನಾಥ್‌ ಕೇರ್ಕರ್‌ 71, ಅಮೋಘ… ದೇಸಾಯಿ 64 ಹಾಗೂ ಲಕ್ಷ್ಯ ಗರ್ಗ್‌ 59 ರನ್‌ ಹೊಡೆದರು. ಬೌಲಿಂಗ್‌ನಲ್ಲೂ ಮಿಂಚಿದ ಗರ್ಗ್‌ ಮುಂಬಯಿಯ 6 ವಿಕೆಟ್‌ಗಳನ್ನು 46 ರನ್ನಿಗೆ ಉರುಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next