Advertisement

ರಣಜಿ ಟ್ರೋಫಿ: ಮೊದಲ ಪಂದ್ಯದಲ್ಲೇ ತ್ರಿಶತಕ; ಗನಿ ವಿಶ್ವ ದಾಖಲೆ

11:33 PM Feb 18, 2022 | Team Udayavani |

ಕೋಲ್ಕತಾ: ಬಿಹಾರದ 22 ವರ್ಷದ ಬ್ಯಾಟರ್‌ ಸಕಿಬುಲ್‌ ಗನಿ ಪದಾರ್ಪಣ ಪ್ರಥಮ ದರ್ಜೆ ಪಂದ್ಯದಲ್ಲೇ ತ್ರಿಶತಕ ಬಾರಿಸುವ ಮೂಲಕ ವಿಶ್ವದಾಖಲೆ ಸ್ಥಾಪಿಸಿದ್ದಾರೆ.

Advertisement

ಮಿಜೋರಂ ವಿರುದ್ಧ ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿ ಸಕಿಬುಲ್‌ 341 ರನ್‌ ಹೊಡೆದು ದಾಖಲೆಯ ಪುಟ ಸೇರಿದರು. 405 ಎಸೆತಗಳ ಈ ಮ್ಯಾರಥಾನ್‌ ಬ್ಯಾಟಿಂಗ್‌ ವೇಳೆ ಸಕಿಬುಲ್‌ ಗನಿ 56 ಬೌಂಡರಿ ಹಾಗೂ 2 ಸಿಕ್ಸರ್‌ ಸಿಡಿಸಿದರು.

ಹಿಂದಿನ ದಾಖಲೆ ಮಧ್ಯಪ್ರದೇಶದ ಅಜಯ್‌ ರೊಹೇರ ಹೆಸರಲ್ಲಿತ್ತು. ಅವರು 2018-19ರ ರಣಜಿ ಋತುವಿನಲ್ಲಿ ಹೈದರಾಬಾದ್‌ ವಿರುದ್ಧ 267 ರನ್‌ ಹೊಡೆದಿದ್ದರು.

ಬಿಹಾರದ ಮತ್ತೋರ್ವ ಆಟಗಾರ ಬಾಬುಲ್‌ ಕುಮಾರ್‌ 229 ರನ್‌ ಬಾರಿಸಿದರು. ಸಕಿಬುಲ್‌-ಬಾಬುಲ್‌ 4ನೇ ವಿಕೆಟಿಗೆ 538 ರನ್‌ ಪೇರಿಸಿದರು. ಬಿಹಾರ 5ಕ್ಕೆ 686 ರನ್‌ ಗಳಿಸಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿತು.

ಸರ್ಫರಾಜ್ ಖಾನ್‌ 275
ಅಹ್ಮದಾಬಾದ್‌: ಸೌರಾಷ್ಟ್ರ ವಿರುದ್ಧ ಮುಂಬಯಿ 7 ವಿಕೆಟಿಗೆ 544 ರನ್‌ ರಾಶಿ ಹಾಕಿದೆ. ಮಧ್ಯಮ ಕ್ರಮಾಂಕದ ಆಟಗಾರ ಸರ್ಫರಾಜ್ ಖಾನ್‌ ಬರೋಬ್ಬರಿ 275 ರನ್‌ ಬಾರಿಸಿದರು (401 ಎಸೆತ, 30 ಬೌಂಡರಿ, 7 ಸಿಕ್ಸರ್‌). ಅಜಿಂಕ್ಯ ರಹಾನೆ 129ರ ತನಕ ಸಾಗಿದರು (290 ಎಸೆತ, 17 ಬೌಂಡರಿ, 2 ಸಿಕ್ಸರ್‌).

Advertisement
Advertisement

Udayavani is now on Telegram. Click here to join our channel and stay updated with the latest news.

Next