Advertisement

ಅಂದು ರಣಜಿ ಆಟಗಾರರು ಇಂದು ಅಮೆರಿಕ ಕ್ರಿಕೆಟಿಗರು!

12:54 PM Jan 21, 2018 | |

ನವದೆಹಲಿ: ಭಾರತದಲ್ಲಿ ಅವಕಾಶಕ್ಕಾಗಿ ಪ್ರಬಲ ಸ್ಪರ್ಧೆ ಏರ್ಪಟ್ಟಿರುವ ಬೆನ್ನಲ್ಲೇ ಕೆಲವು ವರ್ಷಗಳ ಹಿಂದೆ ರಣಜಿ ಕ್ರಿಕೆಟ್‌, ಕಿರಿಯರ ಭಾರತ ತಂಡದಲ್ಲಿ ಆಡಿದ್ದ ಆಟಗಾರರು ಇದೀಗ ಅಮೆರಿಕ ತಂಡವನ್ನು ಏಕದಿನ ಕ್ರಿಕೆಟ್‌ನಲ್ಲಿ ಪ್ರತಿನಿಧಿಸಲು ಸಜ್ಜಾಗಿದ್ದಾರೆ. 

Advertisement

ಜ.31 ರಿಂದ ಆರಂಭವಾಗಲಿರುವ ವೆಸ್ಟ್‌ ಇಂಡೀಸ್‌ ಪ್ರದೇಶಿಕ ಸೂಪರ್‌ 50 ಟೂರ್ನಿಗೆ 14 ಆಟಗಾರರ ಅಮೆರಿಕ ತಂಡವನ್ನು ಪ್ರಕಟಿಸಲಾಗಿದೆ. ವಿಶೇಷವೆಂದರೆ ಅದರಲ್ಲಿ ನಾಲ್ವರು ಕ್ರಿಕೆಟಿಗರು ಭಾರತದಲ್ಲಿ ರಣಜಿ ಟ್ರೋಫಿ ಆಡಿದವರಾಗಿದ್ದಾರೆ.

ಯಾವುದೇ ರಾಷ್ಟ್ರದಲ್ಲಿ 3 ವರ್ಷ ನೆಲೆಸಿದವರು ಆ ರಾಷ್ಟ್ರದ ಪರ ಆಡಬಹುದು ಎಂದು ಕಳೆದ ವರ್ಷ ಐಸಿಸಿ ನಿಯಮ ರೂಪಿಸಿತ್ತು. ಇದು ಈ ನಾಲ್ಕು ಆಟಗಾರರಿಗೆ ಅನುಕೂಲವಾಗಿ ಪರಿಣಮಿಸಿದೆ. ಮುಂಬೈನ ಸೌರಭ್‌ ನೇತ್ರಾವಲ್ಕರ್‌, ಪಂಜಾಬ್‌ನ ಸನ್ನಿ ಸೋಹಲ್‌, ಹೈದರಾಬಾದ್‌ನ ಇಬ್ರಾಹಿಂ ಖಲೀಲ್‌, ಗುಜರಾತ್‌ನ ತಿಮಿಲ್‌ ಪಟೇಲ್‌ ಅಮೆರಿಕ ತಂಡದಲ್ಲಿ ಸ್ಥಾನಪಡೆದಿರುವ ಭಾರತದ ಮೂಲದವರಾಗಿದ್ದಾರೆ.

ಮುಂಬೈನ ಸೌರಭ್‌ ನೇತ್ರಾವಲ್ಕರ್‌ ರಣಜಿ ಟ್ರೋಫಿ ಮತ್ತು ಅ-19 ಭಾರತ ತಂಡದಲ್ಲಿ ಆಡಿದವರಾಗಿದ್ದಾರೆ. 2013 ಮತ್ತು 2014ರಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸಿದ್ದರು. ಆನಂತರ ಅಮೆರಿಕಕ್ಕೆ ತೆರಳಿ ಅಲ್ಲಿ ಕ್ರಿಕೆಟ್‌ ಆಡುವುದನ್ನು ಮುಂದುವರಿಸಿದ್ದರು. ಸೌರಭ್‌ ಸೋಹಲ್‌ ಪಂಜಾಬ್‌ ಪರ, ಇಬ್ರಾಹಿಮ್‌ ಖಲೀಲ್‌ ಹೈದರಾಬಾದ್‌ ಪರ, ತಮಿಲ್‌ ಪಟೇಲ್‌ ಗುಜರಾತ್‌ ಪರ ಪ್ರಥಮ ದರ್ಜೆ ಪಂದ್ಯ ಆಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next