Advertisement

Rani Channamma ಭಾರತೀಯ ಮಹಿಳಾ ಶಕ್ತಿಯ ಪ್ರತೀಕ: ಶಾಸಕ ಸಿದ್ದು ಸವದಿ

06:25 PM Oct 23, 2023 | Team Udayavani |

ರಬಕವಿ-ಬನಹಟ್ಟಿ: ರಾಣಿ ಚನ್ನಮ್ಮ ಭಾರತೀಯ ಮಹಿಳಾ ಶಕ್ತಿಯ ಪ್ರತೀಕವಾಗಿದ್ದಾರೆ. ಭಾರತದ ಸ್ವಾತಂತ್ರ‍್ಯ ಹೋರಾಟದಲ್ಲಿ ಚನ್ನಮ್ಮಳ ಪಾತ್ರ ಮಹತ್ವದ್ದಾಗಿದೆ. ಸಮಾಜಕ್ಕೆ ಆದರ್ಶರಾದವರು ನಮಗೆಲ್ಲರಿಗೂ ಮಾದರಿಯಾಗಬೇಕು ಎಂದು ತೇರದಾಳ ಮತಕ್ಷೇತ್ರ‍್ರದ ಶಾಸಕ ಸಿದ್ದು ಸವದಿ ತಿಳಿಸಿದರು.

Advertisement

ಅವರು ಸೋಮವಾರ ಬನಹಟ್ಟಿಯ ಬಸ್ ನಿಲ್ದಾಣದ ಹತ್ತಿರದ ಚನ್ಮಮ್ಮ ವೃತ್ತದ ಬಳಿ ಚನ್ನಮ್ಮಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಮಹಾಪುರುಷರು ನಾಡಿನ ಆಸ್ತಿಗಳು, ಅವರು ಯಾವುದೇ ಜಾತಿ ಪಂಗಡಕ್ಕೆ ಸೀಮಿತವಾಗಿಲ್ಲ. ಆದರೂ ಇತ್ತಿಚಿಗೆ ಸಮಾಜಗಳು ಅವರು ತಮ್ಮವರು ಎಂದು ಗುರುತಿಸಿಕೊಳ್ಳುತ್ತಿದ್ದಾರೆ. ವೈಯಕ್ತಿಕ ಸ್ವಾರ್ಥ ಬಿಟ್ಟು ಮಹಾಪುರುಷರ ನಡೆಯಂತೆ ನಡೆಯಬೇಕು. ಅವರ ಆದರ್ಶ ನಮಗೆಲ್ಲರಿಗೆ ಮಾದರಿಯಾಗಲಿ ಎಂದು ಸವದಿ ಹೇಳಿದರು.

ಇದೇ ಸಂದರ್ಭದಲ್ಲಿ ಸಮಾಜದ ಮುಖಂಡ ಮಹಾದೇವ ಕೋಟ್ಯಾಳ ಮಾತನಾಡಿ, ಇಂದಿನ ಯುವ ಜನತೆಗೆ ಸ್ವಾತಂತ್ರ‍್ಯದ ಮಹತ್ವವನ್ನು ಹೇಳಬೇಕು. ರಾಣಿ ಚನ್ನಮ್ಮ ಹೋರಾಟದ ಕತೆಗಳನ್ನು ತಿಳಿಸುವುದರ ಜೊತೆಗೆ ಅವರಲ್ಲಿ ಆತ್ಮಸ್ತೈರ್ಯವನ್ನು ತುಂಬಬೇಕು. ಇಂಥ ಮಹಾನ್ ಮಹಿಳೆ ಚನ್ನಮ್ಮ ನಮ್ಮ ನಾಡಿನ ಮಹಿಳೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಶ್ರೀಶೈಲ ಉಳ್ಳಾಗಡ್ಡಿ, ಧರೆಪ್ಪ ಉಳ್ಳಾಗಡ್ಡಿ, ಅಶೋಕ ರಾವಳ, ಅಣ್ಣಪ್ಪ ಪಾಟೀಲ, ಈರಣ್ಣ ಚಿಂಚಖಂಡಿ, ಮಲ್ಲಪ್ಪ ಜನವಾಡ, ಬಾಬಾಗೌಡ ಪಾಟೀಲ, ಗೌರಿ ಮಿಳ್ಳಿ, ಹಿರಾಚಂದ ಕಾಸರ, ಈಶ್ವರ ಕಾಡದೇವರ, ಸುವರ್ಣ ಕೊಪ್ಪದ, ಬಾಲು ನಂದೆಪ್ಪನವರ, ಪ್ರಕಾಶ ಮೂಡಲಗಿ, ವಿನಾಯಕ ಶೇಗುಣಸಿ, ರಾಜು ದಾಲಾಲ, ಶಿವಾನಂದ ಬುದ್ನಿ, ಈರಪ್ಪ ಸಂಪಗಾಂವಿ, ವಿಜಯಕುಮಾರ ಪೂಜೇರಿ, ಶಂಕರ ಪಾಲಬಾಂವಿ, ಗೋಪಾಲ ಲಡ್ಡಾ, ರಾಜು ಕಡಕಬಾಂವಿ, ಮಲ್ಲಿಕಾರ್ಜುನ ಭದ್ರನ್ನವರ, ಡಾ. ಸಿದ್ದರಾಮ ಖಾನಾಪುರ, ಬಸವರಾಜ ಗುಂಡಿ, ಮಹಾದೇವ ಪಾಲಬಾಂವಿ, ಮಹಾದೇವ ದೂಪದಾಳ, ಸಿದ್ದು ಗೌಡಪ್ಪನವರ, ಭೀಮಸಿ ಪಾಟೀಲ, ಸಿದ್ದನಗೌಡ ಪಾಟೀಲ, ರವಿ ಸಂಪಗಾಂವಿ, ಈಶ್ವರ ಬಿರಾದಾರಪಾಟೀಲ, ರಾಜುಗೌಡ ಪಾಟೀಲ, ವಿದ್ಯಾಧರ ಸವದಿ, ಮಲಕಪ್ಪ ಪಾಟೀಲ, ಭೀಮಸಿ ಹಂದಿಗುಂದ, ರವೀಂದ್ರ ಹುಕ್ಕೇರಿ, ಕಿರಣ ಪಾಟೀಲ, ಬಸವರಾಜ ಬೆಳಗಲಿ, ರವಿ ಬಸಗೊಂಡನವರ, ಆರ್. ಕೆ. ಪಾಟೀಲ, ಸಿದ್ದು ಪಾಟೀಲ, ಶಶಿಕಾಂತ ಪಾಟೀಲ, ಗುಂಡು ಪಾಟೀಲ, ಶಿವಾನಂದ ಕಾಗಿ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next