ಸೋಮವಾರ ಕಾಂಗ್ರೆಸ್ ಯುವ ಮುಖಂಡ ರಾಜಾ ವೇಣುಗೋಪಾಲ ನಾಯಕ ಅನಾವರಣ ಮಾಡಿದರು.
ನಂತರ ಮಾತನಾಡಿದ ಅವರು, ಸರ್ವಜ್ಞ ತ್ರಿಕಾಲ ಜ್ಞಾನಿ ಆತನ ವಚನಗಳನ್ನು ಶ್ರೀಸಾಮನ್ಯನು ಕೂಡಾ ಓದಿ
ಅರ್ಥೈಸಿಕೊಳ್ಳಬಹುದು. ಇಂತಹ ಸರ್ವಶ್ರೇಷ್ಠ ಜ್ಞಾನಿಯನ್ನು ನಾಡಿಗೆ ಕೊಡುಗೆಯಾಗಿ ನೀಡಿದ ಕುಂಬಾರ ಸಮುದಾಯ
ಧನ್ಯ ಎಂದು ಸ್ಮರಿಸಿದರು. ತಾಲೂಕು ಕುಂಬಾರ ಸಂಘದ ಅಧ್ಯಕ್ಷ ರಾಜು ಕುಂಬಾರ ಮಾತನಾಡಿ, ತಾಲ್ಲೂಕಿನಲ್ಲಿ ಅತೀ ಹಿಂದುಳಿದ ಸಮಾಜವಾದ ಕುಂಬಾರ ಸಮಾಜವನ್ನು ಗುರುತಿಸಿ ಮಾನ್ಯ ಶಾಸಕರು ಸಮುದಾಯ ಭವನವನ್ನು ನೀಡುವ ಮೂಲಕ ಕುಂಬಾರ ಸಮಾಜದ ಅಭಿವೃದ್ಧಿಗೆ ಶಕ್ತಿ ನೀಡಿದ್ದಾರೆ ಎಂದರು. ನಗರಯೋಜನಾ ಪ್ರಾಧಿಕಾರ ಅಧ್ಯಕ್ಷ ಸುಗುರೇಶ ವಾರದ, ಮಾಜಿ ಅಧ್ಯಕ್ಷ ರಾಜಾ ವಾಸುದೇವ ನಾಯಕ, ಪ್ರಮುಖರಾದ ಮಲ್ಲಣ್ಣ ಸಾಹು ಮುಧೋಳ, ಅಬ್ದುಲ ಗಫೂರ ನಗನೂರಿ, ರಾಜಾ ಅಪ್ಪಯ್ಯ ನಾಯಕ,ದವಲಸಾಬ ಚಿಟ್ಟಿವಾಲೆ, ಶಿವುಕುಮಾರ ಎಲಿಗಾರ, ಸಂಗಣ್ಣ ಎಕ್ಕೆಳ್ಳಿ, ಈರಣ್ಣ ಕುಂಬಾರ, ಸಾಹೆಬಗೌಡ ಕುಂಬಾರ, ಆನಂದ ಕುಂಬಾರ, ಸಂಗಪ್ಪ ಮಲ್ಲಾ, ವೀರಭದ್ರಪ್ಪ ಕುಂಬಾರ, ಆದಪ್ಪ ಕುಂಬಾರ, ವಿಶ್ವನಾಥ ಕುಂಬಾರ ಇದ್ದರು.
Advertisement