Advertisement

ಸಂಸ್ಕೃತದಲ್ಲಿ ಬೊಂಬೆ ಹೇಳುತ್ತೈತೆ

11:18 AM Sep 05, 2017 | |

ಪುನೀತ್‌ರಾಜಕುಮಾರ್‌ ಅವರ “ರಾಜ್‌ ಕುಮಾರ’ ಚಿತ್ರ ನೂರು ದಿನ ಪೂರೈಸಿದ್ದು, ಅದ್ಧೂರಿ ಕಾರ್ಯಕ್ರಮ ಮಾಡಿದ್ದೆಲ್ಲವೂ ನಿಮಗೆ ಗೊತ್ತೇ ಇದೆ. ಆದರೆ, “ರಾಜ್‌ಕುಮಾರ’ ಚಿತ್ರದ “ಬೊಂಬೆ ಹೇಳುತ್ತೈತೆ …’ ಹಾಡು ಮಾತ್ರ ಇನ್ನೂ ಸದ್ದು ಮಾಡುತ್ತಲೇ ಇದೆ. ಹೌದು, “ರಾಜ್‌ ಕುಮಾರ’ ಚಿತ್ರದ “ಬೊಂಬೆ ಹೇಳುತ್ತೈತೆ, ನೀನೇ ರಾಜ್‌ಕುಮಾರ’ ಹಾಡು ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿರೋದು, ಪ್ರತಿಯೊಬ್ಬರು ಆ ಹಾಡನ್ನು ಗುನುಗುವಂತಾಗಿತ್ತು. ಈಗ ಈ ಹಾಡಿನ ಸಂಸ್ಕೃತ ವರ್ಶನ್‌ವೊಂದನ್ನು ಮಾಡಲಾಗಿದೆ. ಹಾಗಂತ ಚಿತ್ರತಂಡ ಮಾಡಿಲ್ಲ.

Advertisement

ಅಮೆರಿಕಾದ ಇಬ್ಬರು ಪುಟ್ಟ ಅಕ್ಕ-ತಮ್ಮ ಸೇರಿಕೊಂಡು “ಬೊಂಬೆ ಹೇಳುತ್ತೈತೆ’ಯನ್ನು ಸಂಸ್ಕೃತಕ್ಕೆ ಭಾಷಾಂತರ ಮಾಡಿ, ಆ ಹಾಡು ಬಿಡುಗಡೆ ಮಾಡಿದ್ದಾರೆ. ಇದು ನಿರ್ದೇಶಕ ಸಂತೋಷ್‌ ಆನಂದರಾಮ್‌ ಅವರಿಗೆ ಖುಷಿಕೊಟ್ಟಿದೆ. ಇದು ಒಂದು ವಿಷಯವಾದರೆ, ಬೆಳಗಾವಿಯ ಶಾಲೆಯೊಂದರಲ್ಲಿ ಮಕ್ಕಳು ಶಾಲೆಗೆ ಬರುವಂತೆ ಹಾಡು ಮಾಡಲಾಗಿದ್ದು, “ಬೊಂಬೆ ಹೇಳುತ್ತೈತೆ’ ಟ್ಯೂನ್‌ಗೆ ಸಾಹಿತ್ಯ ಬರೆಯಲಾಗಿದೆಯಂತೆ. ಈ ಹಾಡು ಕೂಡಾ ಕ್ಲಿಕ್‌ ಆಗಿದೆಯಂತೆ.   

ತುಂಬಾ ಖುಷಿಯಾಗುತ್ತಿದೆ. “ರಾಜ್‌ಕುಮಾರ’ ಚಿತ್ರದ ಜೊತೆಗೆ “ಬೊಂಬೆ ಹೇಳುತ್ತೈತೆ’ ಹಾಡು
ಕೂಡಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಸುಮಾರು 200ಕ್ಕೂ ಹೆಚ್ಚು ಈ ಹಾಡಿನ ಕವರ್‌ ವರ್ಶನ್‌
ಗಳು ಬಂದಿವೆ. ಐದು ತಿಂಗಳಲ್ಲಿ 31 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗೆ ಈ ಹಾಡು ಒಳಗಾಗಿದೆ’
ಎನ್ನುವುದು ನಿರ್ದೇಶಕ ಸಂತೋಷ್‌ ಆನಂದರಾಮ್‌ ಮಾತು. ಸದ್ಯ ಸಂತೋಷ್‌ ಆನಂದರಾಮ್‌
ತಮ್ಮ ಹೊಸ ಸಿನಿಮಾದ ಸ್ಕ್ರಿಪ್ಟ್ನಲ್ಲಿ ಬಿಝಿಯಾಗಿದ್ದಾರೆ. ಎಲ್ಲವೂ ಪಕ್ಕಾ ಆದ ನಂತರವೇ ಸಿನಿಮಾ
ಮಾಡಬೇಕೆಂಬ ಕಾರಣಕ್ಕೆ ಕಥೆಯಲ್ಲಿ ಬಿಝಿಯಾಗಿರುವ ಸಂತೋಷ್‌ ಆನಂದರಾಮ್‌, ಮಾರ್ಚ್‌
ಹೊತ್ತಿಗೆ ಚಿತ್ರೀಕರಣಕ್ಕೆ ಹೊರಡಲಿದ್ದಾರಂತೆ. 

Advertisement

Udayavani is now on Telegram. Click here to join our channel and stay updated with the latest news.

Next