Advertisement

ಗಲ್ಫ್ ಮತ್ತು ಇಂಗ್ಲೆಂಡ್‌ನ‌ಲ್ಲಿ ರಾಜಕುಮಾರ

11:27 AM Apr 18, 2017 | Team Udayavani |

ಇತ್ತೀಚೆಗಷ್ಟೇ ಸುದೀಪ್‌ ಅಭಿನಯದ “ಹೆಬ್ಬುಲಿ’ ಚಿತ್ರವು ದುಬೈ, ಶಾರ್ಜಾ ಮುಂತಾದ ಕಡೆ ಬಿಡುಗಡೆಯಾಗಿ ಭರ್ಜರಿಯಾಗಿ ಘರ್ಜಿಸಿತ್ತು. ಇದುವರೆಗೂ ಯಾವ ಕನ್ನಡಕ್ಕೂ ಸಿಕ್ಕದ ಪ್ರತಿಕ್ರಿಯೆ ಆ ಚಿತ್ರಕ್ಕೆ ಸಿಕ್ಕಿತ್ತು. ಈಗ ಪುನೀತ್‌  ರಾಜಕುಮಾರ್‌ ಅಭಿನಯದ “ರಾಜಕುಮಾರ’ ಸಹ ಅಲ್ಲಿ ಹವಾ ಎಬ್ಬಿಸುವುದಕ್ಕೆ ಸಜ್ಜಾಗುತ್ತಿದೆ.

Advertisement

ಇದೇ ತಿಂಗಳ 20ರಂದು “ರಾಜಕುಮಾರ’ ಚಿತ್ರವು ಯು.ಎ.ಇ, ಒಮಾನ್‌ ಮತ್ತು ಕುವೈಟ್‌ಗಳಲ್ಲಿ ಬಿಡುಗಡೆಯಾಗುತ್ತಿದೆ. ಯು.ಎ.ಇಯಲ್ಲಿ ದುಬೈ, ಶಾರ್ಜಾ, ಅಬು ದಾಭಿಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಇನ್ನು ಒಮಾನ್‌ ಮತ್ತು ಕುವೈಟ್‌ಗಳಲ್ಲಿ ಚಿತ್ರ ಸತತವಾಗಿ ತೆರೆಕಾಣುತ್ತಿದೆ. ದುಬೈ ನಗರದಲ್ಲಿ ನೋವೋ ಮತ್ತು ವಾಕ್ಸ್‌ ಸಿನಿಮಾಸ್‌ ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರಗಳನ್ನು ನೋಡಬಹುದು.

ಇನ್ನು ಸ್ಟಾರ್‌ ಸಮೂಹದ ಮಲ್ಟಿಪ್ಲೆಕ್ಸ್‌ಗಳಲ್ಲೂ ಚಿತ್ರ ಬಿಡುಗಡೆಯಾಗಲಿದೆಯಂತೆ. “ರಾಜಕುಮಾರ’ ಗಲ್ಫ್ನಲ್ಲಿ ಬಿಡುಗಡೆಯಾಗುತ್ತಿದೆ, ನಮ್ಮಲ್ಲಿ ಬಿಡುಗಡೆಯಾಗುತ್ತಿಲ್ಲ ಎಂದು ಇಂಗ್ಲೆಂಡ್‌ನ‌ಲ್ಲಿರುವವರು ಬೇಸರ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಇಂಗ್ಲೆಂಡ್‌ನ‌ ಲಂಡನ್‌, ಬರ್ಮಿಂಗ್‌ಹ್ಯಾಮ್‌ ಮುಂತಾದ ಕಡೆ ಬಿಡುಗಡೆಯಾಗುತ್ತಿದೆ.

ಈ ಚಿತ್ರ ಹ್ಯಾರೋ ಮತ್ತು ಬರ್ಮಿಂಗ್‌ಹ್ಯಾಮ್‌ಗಳಲ್ಲಿ ಏಪ್ರಿಲ್‌ 22ರಂದು ಬಿಡುಗಡೆಯಾದರೆ, ಲಂಡನ್‌ನಲ್ಲಿ ಏಪ್ರಿಲ್‌ 23ರಂದು ಬಿಡುಗಡೆಯಾಗಲಿದೆ. ಇದಲ್ಲದೆ ಮುಂದಿನ ದಿನಗಳಲ್ಲಿ ಬ್ರಿಸ್ಟಲ್‌, ನಾರ್ವಿಚ್‌, ಎಡಿನ್‌ಬರ್ಗ್‌, ಕಾರ್ಡಿಫ್ ಮುಂತಾದ ಕಡೆ ಚಿತ್ರ ಬಿಡುಗಡೆಯಾಗುತ್ತದಂತೆ. ಈ ಚಿತ್ರವನ್ನು ಜಾಲಿ ಹಿಟ್ಸ್‌ ಮತ್ತು ಸ್ಯಾಂಡಲ್‌ವುಡ್‌ ಟಾಕೀಸ್‌ ಜೊತೆಯಾಗಿ ಚಿತ್ರವನ್ನು ಬಿಡುಗಡೆ ಮಾಡುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next