Advertisement
ನಾಗರಹೊಳೆ ಅಭಯಾರಣ್ಯದ ಮತ್ತಿಗೋಡು ಆನೆಕ್ಯಾಂಪ್ ಬಳಿ ಸೋಮವಾರ ಬೆಳಗ್ಗಿನ ಜಾವ ಖಾಸಗಿ ಬಸ್ ಡಿಕ್ಕಿಯಾಗಿ ರಂಗ ಎಂಬ ಆನೆ ಸಾವಿಗೀಡಾಗಿದ್ದು ಸೇರಿದಂತೆ ಅರಣ್ಯ ಪ್ರದೇಶಗಳಲ್ಲಿ ವನ್ಯಜೀವಿಗಳು ವಾಹನಗಳಿಗೆ ಸಿಲುಕಿ ಸಾವನ್ನಪ್ಪಲು ಕಾರಣವಾಗಿದೆ.
Related Articles
Advertisement
ರಸ್ತೆ ಉಬ್ಬುಗಳೇ ಪರಿಹಾರ: ರಸ್ತೆಗಳ ವಿಚಾರದಲ್ಲಿ ಅರಣ್ಯ ಇಲಾಖೆಗೆ ಯಾವುದೇ ಅಧಿಕಾರ ಇಲ್ಲದ ಕಾರಣ ಲೋಕೋಪಯೋಗಿ ಇಲಾಖೆ ಅಥವಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳು ಅರಣ್ಯ ವ್ಯಾಪ್ತಿಯಲ್ಲಿ ಹಾದು ಹೋಗುವ ವಾಹನಗಳ ವೇಗ ನಿಯಂತ್ರಣಕ್ಕೆ ರಸ್ತೆ ಉಬ್ಬುಗಳನ್ನು (ಹಂಪ್ಸ್) ನಿರ್ಮಿಸುವುದೊಂದೇ ಆ ಭಾಗದಲ್ಲಿ ವನ್ಯಜೀವಿಗಳ ಸಂರಕ್ಷಣೆಗಿರುವ ಪರಿಹಾರ ಎನ್ನುತ್ತಾರೆ ಮತ್ತೂಬ್ಬ ವನ್ಯಜೀವಿ ತಜ್ಞ ಶಿವಕುಮಾರ್ ಮಗಜಿ.
ಈ ಹಿಂದೆ ರಸ್ತೆಗಳು ಸರಿ ಇರಲಿಲ್ಲ. ಹೀಗಾಗಿ ವಾಹನಗಳು ನಿಧಾನವಾಗಿ ಚಲಿಸುತ್ತಿದ್ದವು. ಆಗೆಲ್ಲಾ ವನ್ಯಜೀವಿಗಳು ವಾಹನಗಳಿಗೆ ಸಿಲುಕಿ ಮೃತಪಟ್ಟ ಉದಾಹರಣೆಗಳು ಕಮ್ಮಿ. ಆದರೆ, ರಸ್ತೆಗಳು ಉತ್ತಮವಾಗಿ ನಿರ್ಮಾಣವಾದ ಮೇಲೆ ಈ ರೀತಿಯ ಪ್ರಕರಣಗಳು ಹೆಚ್ಚಾಗುತ್ತಿವೆ.
ಅನೇಕ ಸಂದರ್ಭದಲ್ಲಿ ಸಣ್ಣ ಪುಟ್ಟ ಪ್ರಾಣಿಗಳು ವಾಹನಗಳಿಗೆ ಸಿಲುಕಿ ಮೃತಪಡುವುದು ಬೆಳಕಿಗೆ ಬರುವುದೇ ಇಲ್ಲ. ಹೀಗಾಗಿ ರಸ್ತೆ ಉಬ್ಬು ನಿರ್ಮಿಸಿ ವಾಹನಗಳ ವೇಗಕ್ಕೆ ನಿಯಂತ್ರಣ ಹೇರಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬುದು ಅವರ ಅಭಿಪ್ರಾಯ.
ಪರಿಣಾಮಕಾರಿ ನಿಯಮ ಜಾರಿ ಕುರಿತು ಚರ್ಚೆ: ವಾಹನಗಳಿಗೆ ಸಿಲುಕಿ ವನ್ಯಜೀವಿಗಳು ಮೃತಪಡುವುದಕ್ಕೆ ಕಡಿವಾಣ ಹಾಕಲು ಇರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ. ಬಸ್‌ಗೆ ಸಿಲುಕಿ ರಂಗ ಆನೆ ಸಾವಿಗೀಡಾದ ಪ್ರಕರಣ ನಡೆದ ಬೆನ್ನಲ್ಲೇ ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳು ಸಭೆ ಸೇರಿ ಈ ಕುರಿತು ಆದೇಶ ಹೊರಡಿಸಲು ಮುಂದಾಗಿದ್ದಾರೆ.
ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ರಸ್ತೆಗಳಲ್ಲಿ ವಾಹನಗಳ ವೇಗಮಿತಿ 35 ರಿಂದ 40 ಕಿ.ಮೀ. ಮೀರಬಾರದು ಎಂಬ ನಿಯಮವಿದೆ. ಈ ಕಾರಣಕ್ಕೆ ಅರಣ್ಯ ಪ್ರದೇಶದಲ್ಲಿ ಇಂತಿಷ್ಟು ಕಿ.ಮೀ. ಸಂಚರಿಸಲು ಇಂತಿಷ್ಟು ಸಮಯ ಎಂದು ನಿಗದಿಪಡಿಸಲಾಗಿದೆ. ಅದಕ್ಕಾಗಿ ಅರಣ್ಯ ಇಲಾಖೆಯ ಚೆಕ್‌ಪೋಸ್ಟ್‌ಗಳಲ್ಲಿ ವಾಹನ ಅರಣ್ಯ ಪ್ರವೇಶಿಸಿದ ಮತ್ತು ಹೊರಹೋದ ಸಮಯ ದಾಖಲಿಸಲಾಗುತ್ತದೆ.
ಅಲ್ಲದೆ, ವಾಹನಗಳು ಅರಣ್ಯ ಪ್ರವೇಶಿಸುವ ಮುನ್ನ ಅಲ್ಲಿನ ಚೆಕ್‌ಪೋಸ್ಟ್‌ನಲ್ಲಿ ವಾಹನ ನೋಂದಣಿ ಸಂಖ್ಯೆ ದಾಖಲಿಸಿ ಮುಂದೆ ಸಾಗಬೇಕು. ಆದರೆ, ರಾತ್ರಿ ವೇಳೆ ಈ ನಿಯಮ ಅಷ್ಟೊಂದು ಪರಿಣಾಕಾರಿಯಾಗಿ ಜಾರಿಗೆ ಬರುತ್ತಿಲ್ಲ. ಹೀಗಾಗಿ ಎಚ್ಚರ ವಹಿಸಲು ತೀರ್ಮಾನಿಸಲಾಗಿದ್ದು, ಅದಕ್ಕಾಗಿ ಎಲ್ಲಾ ಚೆಕ್‌ಪೋಸ್ಟ್‌ಗಳನ್ನು ಇನ್ನಷ್ಟು ಬಲಿಷ್ಠಗೊಳಿಸುವ ಬಗ್ಗೆ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ವನ್ಯಜೀವಿಗಳ ಸಾವಿನ ಪ್ರಮಾಣ ಇಳಿಮುಖ: ವಾಹನಗಳಿಗೆ ಸಿಲುಕಿ ವನ್ಯಜೀವಿಗಳು ಮೃತಪಡುತ್ತಿದ್ದ ಪ್ರಕರಣಗಳು ಅತಿ ಹೆಚ್ಚು ಸಂಭವಿಸುತ್ತಿದ್ದುದು ಬಂಡೀಪುರ ಅರಣ್ಯ ಪ್ರದೇಶದಲ್ಲಿ. ಶೇ. 90 ಪ್ರಕರಣಗಳು ಈ ಭಾಗದಲ್ಲೇ ನಡೆಯುತ್ತವೆ. ಇಲ್ಲಿ 2004ರಲ್ಲಿ 32, 2005ರಲ್ಲಿ 7, 2007ರಲ್ಲಿ 41, 2008ರಲ್ಲಿ 2, ರಾತ್ರಿ ವಾಹನ ಸಂಚಾರ ನಿಷೇಧದ ಬಳಿಕ 2009ರಲ್ಲಿ 2, 2010ರಲ್ಲಿ 3, 2011ರಲ್ಲಿ 7, 2012ರಲ್ಲಿ 10, 2013ರಲ್ಲಿ 6, 2014ರಲ್ಲಿ 1, 2015ರಲ್ಲಿ 2, 2016ರಲ್ಲಿ 1, 2017ರಲ್ಲಿ 2, 2018ರಲ್ಲಿ 2 ಪ್ರಕರಣಗಳು ವರದಿಯಾಗಿವೆ.
2009ರ ಬಳಿಕ ಈ ಭಾಗದಲ್ಲಿ ರಸ್ತೆಗಳು ಉತ್ತಮ ಸ್ಥಿತಿಯಲ್ಲಿದ್ದರೂ ವನ್ಯಜೀವಿಗಳ ಸಾವಿನ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ರಾತ್ರಿ ವಾಹನ ಸಂಚಾರ ನಿಷೇಧ ಸಾಧ್ಯವಾದಷ್ಟು ಕಡೆ ಜಾರಿಗೆ ತಂದರೆ ಮತ್ತು ಸಾಧ್ಯವಾಗದ ಕಡೆ ಪರ್ಯಾಯ ರಸ್ತೆ ವ್ಯವಸ್ಥೆ ಕೈಗೊಂಡರೆ ವನ್ಯಜೀವಿಗಳ ಸಾವಿನ ಸಂಖ್ಯೆಯನ್ನು ಸಂಪೂರ್ಣ ನಿಯಂತ್ರಿಸಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ ತೆರವಿಗೆ ಯತ್ನ: ಇದೆಲ್ಲದರ ಮಧ್ಯೆ ಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಹೇರಿರುವ ನಿಷೇಧ ತೆರವುಗೊಳಿಸುವ ಕೇರಳ ಸರ್ಕಾರ ಮತ್ತು ಅಲ್ಲಿನ ಟ್ರಾನ್ಸ್‌ಪೊರ್ಟ್ ಲಾಬಿಯ ಪ್ರಯತ್ನ ಮುಂದುವರಿದಿದೆ.
ಈಗಾಗಲೇ ಕೇರಳ ಸರ್ಕಾರ ಮತ್ತು ಅಲ್ಲಿನ ಟ್ರಾನ್ಸ್‌ಪೊàರ್ಟ್ ಮಾಲೀಕರು ಸುಪ್ರೀಂ ಕೋರ್ಟ್‌ನಲ್ಲಿ ನಿಷೇಧ ತೆರವು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇನ್ನೊಂದೆಡೆ ಕೇಂದ್ರದ ಅಧಿಕಾರಿಗಳೂ ಇದಕ್ಕೆ ಪೂರಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ರಾಜ್ಯದ ಅರಣ್ಯ ಇಲಾಖೆ ಮತ್ತು ಪರಿಸರವಾದಿಗಳು, ವನ್ಯಜೀವಿ ತಜ್ಞರ ಒತ್ತಡದಿಂದಾಗಿ ರಾಜ್ಯ ಸರ್ಕಾರ ಮಾತ್ರ ನಿಷೇಧದ ಪರ ನಿಂತಿದೆ.
ವಿಶೇಷವೆಂದರೆ ರಾತ್ರಿ ಸಂಚಾರ ನಿಷೇಧ ತೆರವಿಗೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದವರ ಪೈಕಿ ಸೋಮವಾರ ಮುಂಜಾನೆ ರಂಗ ಎಂಬ ಆನೆಯ ಸಾವಿಗೆ ಕಾರಣವಾದ ಖಾಸಗಿ ಬಸ್‌ನ ಮಾಲೀಕರೇ ಎರಡನೆಯವರು. ಹೀಗಾಗಿ ಸೋಮವಾರ ಮುಂಜಾನೆ ಬಸ್‌ಗೆ ಸಿಲುಕಿ ಆನೆ ಮೃತಪಟ್ಟ ಘಟನೆ ನಿಷೇಧದ ಪರ ಇರುವವರಿಗೆ ದೊಡ್ಡ ಅಸ್ತ್ರ ಸಿಕ್ಕಂತಾಗಿದೆ.
ಹೆದ್ದಾರಿಗಳಲ್ಲಿ ವಾಹನಗಳಿಗೆ ಸಿಲುಕಿ ವನ್ಯಜೀವಿಗಳು ಮೃತಪಡುವುದನ್ನು ತಡೆಗಟ್ಟಲು ಅಭಯಾರಣಗಳಲ್ಲಿ ಹಾದು ಹೋಗುವ ರಸ್ತೆಗಳಲ್ಲಿ ರಾತ್ರಿ ಸಂಚಾರ ನಿಷೇಧಿಸಬೇಕು. ಅದು ಸಾಧ್ಯವಾಗದಿದ್ದಲ್ಲಿ ಪರ್ಯಾಯ ರಸ್ತೆ ವ್ಯವಸ್ಥೆ ಇಲ್ಲವೇ ವೇಗ ನಿಯಂತ್ರಕಗಳನ್ನು ಅಳವಡಿಸಬೇಕು.-ಸಂಜಯ್ ಗುಬ್ಬಿ, ವನ್ಯಜೀವಿ ತಜ್ಞ ರಸ್ತೆಗಳು ಅರಣ್ಯದ ಮಧ್ಯೆ ಹಾದುಹೋಗುತ್ತಿದ್ದರೂ ರಸ್ತೆಗಳ ನಿರ್ವಹಣೆಗೂ ಅರಣ್ಯ ಇಲಾಖೆಗೂ ಯಾವುದೇ ಸಂಬಂಧ ಇಲ್ಲ. ಹೀಗಾಗಿ ಅರಣ್ಯದ ರಸ್ತೆಗಳಲ್ಲಿ ರಸ್ತೆ ಉಬ್ಬುಗಳನ್ನು ನಿರ್ಮಿಸುವ ಮೂಲಕ ವಾಹನಗಳ ವೇಗಕ್ಕೆ ನಿಯಂತ್ರಣ ಹೇರಬೇಕು.
-ಶಿವಕುಮಾರ್ ಮಗಜಿ, ವನ್ಯಜೀವಿ ತಜ್ಞ * ಪ್ರದೀಪ್‌ಕುಮಾರ್ ಎಂ.