ನವದೆಹಲಿ: ಪ್ರಯಾಣಿಕರನ್ನು ಹೊತ್ತು ರಾಂಚಿಗೆ ಹೊರಟಿದ್ದ ಇಂಡಿಗೋ ವಿಮಾನವೊಂದು ತಾಂತ್ರಿಕ ದೋಷದಿಂದ ಟೇಕ್ ಆಫ್ ಆದ ಒಂದು ಗಂಟೆಯಲ್ಲೇ ದೆಹಲಿ ವಿಮಾನ ನಿಲ್ದಾಣಕ್ಕೆ ಮರಳಿದೆ.
ಇಂಡಿಗೋ ವಿಮಾನ ಟೇಕ್ ಆಫ್ ಆದ ಕೆಲವೇ ಹೊತ್ತಿನಲ್ಲಿ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಪೈಲೆಟ್ ಮಾಹಿತಿ ನೀಡಿದ್ದು ಬಳಿಕ ವಿಮಾನವನ್ನು ದೆಹಲಿಗೆ ಹಿಂತಿರುಗಿಸಲಾಯಿತು ಎಂದು ಪ್ರಯಾಣಿಕರು ಹೇಳಿದ್ದಾರೆ.
ಟೇಕ್ ಆಫ್ ಆದ ಕೆಲವೇ ಹೊತ್ತಿನಲ್ಲಿ ವಿಮಾನದಲ್ಲಿ ಕಂಪನದ ಅನುಭವಾಗಿದೆ ಎಂದೂ ಪ್ರಯಾಣಿಕರು ಮಾಹಿತಿ ನೀಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗದ ರೀತಿಯಲ್ಲಿ ಪೈಲೆಟ್ ಭೂ ಸ್ಪರ್ಶ ಮಾಡಿದ್ದಾರೆ.
ಇಂಡಿಗೋ ವಿಮಾನವು ರಾಷ್ಟ್ರ ರಾಜಧಾನಿಯಿಂದ ಬೆಳಿಗ್ಗೆ 7.40 ರ ಸುಮಾರಿಗೆ ಹೊರಟು ಬೆಳಿಗ್ಗೆ 8.20 ಕ್ಕೆ ಮರಳಿತು. ಬಳಿಕ ಪ್ರಯಾಣಿಕರಿಗೆ ಬೇರೆ ವಿಮಾನದ ವ್ಯವಸ್ಥೆಯನ್ನು ಮಾಡಿಕೊಡಲಾಯಿತು ಎಂದು ವಿಮಾನಯಾನ ಸಂಸ್ಥೆ ಹೇಳಿದೆ.
ತಾಂತ್ರಿಕ ದೋಷದಿಂದ ಇಂಡಿಗೋ ವಿಮಾನವೊಂದು ನಿಲ್ದಾಣಕ್ಕೆ ಹಿಂತಿರುಗಿದ ಎರಡನೇ ಘಟನೆ ಇದಾಗಿದೆ. ಶುಕ್ರವಾರ, ದೆಹಲಿಗೆ ಹೋಗುವ ಇಂಡಿಗೋ ವಿಮಾನವು ಅದರ ಎಂಜಿನ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ನಂತರ ಪಾಟ್ನಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು ಇದಾದ ಇಪ್ಪತನಾಲ್ಕು ಗಂಟೆಯೊಳಗೆ ಮತ್ತೊಂದು ಘಟನೆ ನಡೆದಿದೆ.
ಇದನ್ನೂ ಓದಿ: ಹರಿಯಾಣ: ನುಹ್‌ನಲ್ಲಿ ಮುಂದುವರೆದ ಬುಲ್ಡೋಜರ್ ಕಾರ್ಯಾಚರಣೆ, 20ಕ್ಕೂ ಹೆಚ್ಚು ಮೆಡಿಕಲ್ ನೆಲಸಮ