Advertisement

Ramayana: 100, 200.. ಕೋಟಿಯಲ್ಲ ʼರಾಮಾಯಣʼ ಮೊದಲ ಪಾರ್ಟ್‌ನ ಬಜೆಟ್ಟೇ 835 ಕೋಟಿ ರೂ.

08:49 AM May 14, 2024 | Team Udayavani |

ಮುಂಬಯಿ: ನಿತೇಶ್‌ ತಿವಾರಿ ಅವರ ʼರಾಮಾಯಣʼ ಸಿನಿಮಾದ ಮೇಲಿನ ಕುತೂಹಲ ಹೆಚ್ಚಾಗಿದೆ. ಬಜೆಟ್‌, ಕಲಾವಿದರು.. ಹೀಗೆ ನಾನಾ ವಿಚಾರದಲ್ಲಿ ಪ್ಯಾನ್‌ ಇಂಡಿಯಾ ʼರಾಮಾಯಣʼ ದೊಡ್ಡಮಟ್ಟದಲ್ಲೇ ಸುದ್ದಿ ಆಗುತ್ತಿದೆ.

Advertisement

ಭಾರತೀಯ ಸಿನಿಮಾದಲ್ಲಿ ಹೊಸ ರೀತಿಯಲ್ಲಿ ದಾಖಲೆ ಬರೆಯಲು ʼರಾಮಾಯಣʼ ಸಿದ್ದವಾಗಿದೆ. ಇತ್ತೀಚೆಗಷ್ಟೇ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ ಎನ್ನಲಾಗಿದೆ. ಚಿತ್ರೀಕರಣದ ಸಂದರ್ಭದಲ್ಲಿ ʼರಾಮ – ಸೀತೆʼಯಾಗಿ ಕಾಣಿಸಿಕೊಂಡಿದ್ದ ರಣ್ಬೀರ್‌ – ಸಾಯಿಪಲ್ಲವಿ ಅವರ ಫೋಟೋಗಳು ಲೀಕ್‌ ಆಗಿದ್ದವು.

ಸಿನಿಮಾವನ್ನು ಬಾಲಿವುಡ್ ನಿರ್ಮಾಪಕ ನಮಿತ್ ಮಲ್ಹೋತ್ರಾ – ನಟ ಯಶ್ ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ದೊಡ್ಡಮಟ್ಟದ ಸಿನಿಮಾವಾಗಿರಲಿದೆ. ಮೂಲಗಳ ಪ್ರಕಾರ ʼರಾಮಾಯಣʼ ಮೂರು ಭಾಗಗಳಲ್ಲಿ ಬರಲಿದೆ. ಮೊದಲ ಭಾಗ ರಿಲೀಸ್‌ ಆಗಲು ಎರಡು ವರ್ಷಗಳು ಬೇಕಿದೆ. ಅಂದರೆ 2026 ರಲ್ಲಿ ʼರಾಮಾಯಣʼ ದೊಡ್ಡ ಪರದೆಗೆ ಅಪ್ಪಳಿಸಲಿದೆ.

ಮೊದಲೇ ಹೇಳಿದಾಗೆ ಇದೊಂದು ಬಿಗ್‌ ಬಜೆಟ್‌ ಸಿನಿಮಾ. ಆದರೆ ಇದೀಗ ಬಂದಿರುವ ಲೇಟೆಸ್ಟ್‌ ವರದಿಗಳ ಪ್ರಕಾರ ಇದು ಬರೀ ಬಿಗ್‌ ಬಜೆಟ್‌ ಸಿನಿಮಾ ಮಾತ್ರವಲ್ಲದೆ ಭಾರತೀಯ ಸಿನಿಮಾರಂಗದಲ್ಲೇ ಅತ್ಯಂತ ದುಬಾರಿ ಸಿನಿಮಾವಾಗಿರಲಿದೆ.

ʼರಾಮಾಯಣ: ಭಾಗ -1ʼ ಕ್ಕಾಗಿ ನಿರ್ಮಾಪಕರು ಬರೋಬ್ಬರಿ 835 ಕೋಟಿ ರೂಪಾಯಿಯ ಬಂಡವಾಳವನ್ನು ಹಾಕಲಿದ್ದಾರೆ. ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ಗಾಗಿ 600 ದಿನ ಮೀಸಲಿಡಲು ಮುಂದಾಗಿದ್ದಾರೆ ಎಂದು ʼಬಾಲಿವುಡ್‌ ಹಂಗಾಮʼ ಮೂಲಗಳನ್ನು ಆಧಾರಿಸಿ ವರದಿ ಮಾಡಿದೆ.

Advertisement

“ರಾಮಾಯಣವು ಕೇವಲ ಚಲನಚಿತ್ರವಲ್ಲ. ಅದೊಂದು ಭಾವನೆಯಾಗಿದೆ. ಅದನ್ನು ಜಾಗತಿಕ ಚಮತ್ಕಾರವನ್ನಾಗಿಸಲು ತಯಾರಕರು ಯಾವುದೇ ರೀತಿಯಲ್ಲಿ ಹಿಂದೇಟು ಹಾಕುತ್ತಿಲ್ಲ” ಎಂದು ಮೂಲಗಳು ತಿಳಿಸಿವೆ ಎಂದು ವರದಿ ಮಾಡಿದೆ.

ಸಿನಿಮಾದ ಫ್ರಾಂಚೈಸ್ ಮುಂದೆ ಹೋಗುತ್ತಿದ್ದಂತೆ ಈ ಬಜೆಟ್‌ ನ್ನು ವಿಸ್ತರಣೆ ಮಾಡಲು ಅವರು ಯೋಜಿಸಿದ್ದಾರೆ ಎಂದು ವರದಿ ತಿಳಿಸಿದೆ.

ಮೂಲಗಳ ಪ್ರಕಾರ ನಮಿತ್ ಮಲ್ಹೋತ್ರಾ  ಹಾಗೂ ಯಶ್‌ ಬಜೆಟ್‌ ನಲ್ಲಿ 50-50 ಬಂಡವಾಳ ಹಾಕಲಿದ್ದಾರೆ. ಆ ಮೂಲಕ ಯಶ್‌ ʼರಾಮಾಯಣʼ ಕ್ಕಾಗಿ 400 ಕೋಟಿ ಬಂಡವಾಳ ಹಾಕಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ಪಾತ್ರವರ್ಗದತ್ತ ಗಮನ ಹರಿಸಿದರೆ ರಣ್ಬೀರ್‌ ಕಪೂರ್‌, ಸಾಯಿಪಲ್ಲವಿ ಜೊತೆಗೆ ರಾವಣನಾಗಿ ಯಶ್, ಕೈಕೇಯಿ ಆಗಿ ಲಾರಾ ದತ್ತಾ, ಹನುಮಂತನಾಗಿ ಸನ್ನಿ ಡಿಯೋಲ್, ವಿಭೀಷಣ ಆಗಿ ವಿಜಯ್ ಸೇತುಪತಿ, ಶೂರ್ಪನಕಿಯಾಗಿ ರಕುಲ್ ಪ್ರೀತ್ ಸಿಂಗ್ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಜೊತೆ ಹಲವು ಖ್ಯಾತ ನಟರ ಹೆಸರು ಕೂಡ ಕೇಳಿ ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next