Advertisement

Actor Yash: “ಯಶ್‌ಗಾಗಿ ನನ್ನ ಬಳಿ ಸೂಕ್ತ ಕಥೆಯಿದೆ..” ಖ್ಯಾತ ಕಾಲಿವುಡ್ ನಿರ್ದೇಶಕ

04:39 PM May 30, 2024 | Team Udayavani |

ಬೆಂಗಳೂರು: ʼಕೆಜಿಎಫ್‌ʼ ಸರಣಿ ಮೂಲಕ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿರುವ ಕನ್ನಡದ ಯಶ್‌ ಸದ್ಯ ಮತ್ತೊಂದು ಬಿಗ್‌ ಬಜೆಟ್‌ ಪ್ಯಾನ್‌ ಇಂಡಿಯಾ ʼಟಾಕ್ಸಿಕ್‌ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

Advertisement

ಯಶ್‌ ʼಕೆಜಿಎಫ್ʼನಲ್ಲಿ ಮಾಡಿದ ಅಭಿನಯ ಕನ್ನಡ ಮಾತ್ರವಲ್ಲದೆ ಇತರೆ ಸಿನಿರಂಗದಲ್ಲೂ ಹವಾ ಎಬ್ಬಿಸಿತ್ತು. ಸಿನಿಮಾ ಬಹುದೊಡ್ಡಮಟ್ಟದಲ್ಲಿ ಸದ್ದು ಮಾಡಿದ ನಂತರ ಯಶ್‌ ಆದಾಗಲೇ ಪ್ಯಾನ್‌ ಇಂಡಿಯಾದಲ್ಲಿ ಸ್ಟಾರ್‌ ಆಗಿ ಎಲ್ಲರ ಗಮನ ಸೆಳೆದಿದ್ದರು. ಖ್ಯಾತ ನಿರ್ದೇಶಕರೆಲ್ಲರೂ ಯಶ್‌ ಜೊತೆ ಸಿನಿಮಾ ಮಾಡಬೇಕೆನ್ನುವಷ್ಟರ ಮಟ್ಟಿಗೆ ʼರಾಕಿಭಾಯ್‌ʼ ಮಾರ್ಕೆಟ್‌ ಡಿಮ್ಯಾಂಡ್‌ ಡೈಮಂಡ್‌ ನಂತೆ ಹೆಚ್ಚಾಯಿತು.

ಖ್ಯಾತ ನಿರ್ದೇಶಕರು ಕೂಡ ಯಶ್‌ ಜೊತೆ ಕೆಲಸ ಮಾಡಯವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಯಶ್‌ ಮುಂದಿನ ಸಿನಿಮಾ ಯಾವುದೆನ್ನುವುದು ಎಲ್ಲರೂ ಕುತೂಹಲದಿಂದ ಕಾಯುವಂತೆ ಮಾಡಿತ್ತು.

ಇದನ್ನೂ ಓದಿ: Kantara -1: ರಿಷಬ್‌ ಶೆಟ್ಟಿ ʼಕಾಂತಾರ-1ʼ ಗೆ ಖ್ಯಾತ ಮಾಲಿವುಡ್‌ ನಟ ಜಯರಾಂ ಎಂಟ್ರಿ?

ಇದೀಗ ಮತ್ತೊಬ್ಬ ಖ್ಯಾತ ನಿರ್ದೇಶಕರೊಬ್ಬರು ಯಶ್‌ ಜೊತೆ ಕೆಲಸ ಮಾಡುವ ಇರಾದೆಯನ್ನು ವ್ಯಕ್ತಪಡಿಸಿದ್ದಾರೆ.

Advertisement

ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅವರ  ‘ಮುತ್ತು’, ‘ನಾಟಾಮ್ಮೈ’, ‘ಪಡೆಯಪ್ಪ’ ಸೇರಿದಂತೆ ಹಲವು ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿ ಸೈ ಎನ್ನಿಸಿಕೊಂಡಿರುವ ನಿರ್ದೇಶಕ ಕೆಎಸ್‌ ರವಿಕುಮಾರ್‌ ಯಶ್‌ ಜೊತೆ ಕೆಲಸ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಕಾಲಿವುಡ್‌ ಮಾತ್ರವಲ್ಲದೆ ಕನ್ನಡದಲ್ಲಿ ʼಕೋಟಿಗೊಬ್ಬ-2ʼ ಸಿನಿಮಾವನ್ನು ಮಾಡಿರುವ  ರವಿಕುಮಾರ್ ಅವರಿಗೆ ತೆಲುಗಿನ ಸಂದರ್ಶನವೊಂದರಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುವ ವೇಳೆ ಯಶ್‌ ಬಗ್ಗೆ ಅವರು ಹೇಳಿದ್ದಾರೆ.

“ನನಗೆ ಯಶ್‌ ಜೊತೆ ಕೆಲಸ ಮಾಡುವ ಆಸಕ್ತಿಯಿದೆ. ನನ್ನ ಬಳಿ ಅವರಿಗೆ ಸೂಕ್ತವಾಗುವ ಪಾತ್ರದ ಕಥೆಯೊಂದಿದೆ. ಅವರು ಇಂದು ಬಹಳ ದೊಡ್ಡ ನಟ. ಈ ಕಥೆ ಕೂಡ ಭಿನ್ನವಾಗಿದೆ. ನಾನು ರಜಿನಿಕಾಂತ್‌ ಜೊತೆ ಮಾಡಬೇಕಿದ್ದ ʼರಾಣಾʼ ಸಿನಿಮಾ ನಿಂತು ಹೋಯಿತು. ಆ ಚಿತ್ರವನ್ನು ಮಾಡುವುದು ನನ್ನ ಕನಸು. ತೆಲುಗಿನಲ್ಲಿ ನನಗೆ ರಾಮ್‌ ಚರಣ್‌ ಇಷ್ಟ” ಎಂದು ಅವರು ಹೇಳಿದ್ದಾರೆ.

ಸದ್ಯ ಯಶ್‌ ʼಟಾಕ್ಸಿಕ್‌ʼ ಸಿನಿಮಾದಲ್ಲಿ ನಿರತರಾಗಿದ್ದು, ಈ ಸಿನಿಮಾದಲ್ಲಿ ನಾಯಕಿ ಹಾಗೂ ಯಶ್‌ ಸಹೋದರಿಯ  ಪಾತ್ರದಲ್ಲಿ ನಟಿಸುವವರ ಹೆಸರು ದಿನಕ್ಕೊಂದರಂತೆ ಬರುತ್ತಿದೆ.

ʼಟಾಕ್ಸಿಕ್‌ʼ 2025 ರ ಏ.10 ರಂದು ರಿಲೀಸ್‌ ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next