Advertisement

ಮಲೈಕಾ – ಅರ್ಜುನ್‌ ದೂರವಾಗಿಲ್ಲ: ಬ್ರೇಕಪ್‌ ವಿಚಾರ ವದಂತಿಯಷ್ಟೇ ಎಂದ ನಟಿಯ ಮ್ಯಾನೇಜರ್

05:26 PM Jun 01, 2024 | Team Udayavani |

ಮುಂಬಯಿ: ಬಾಲಿವುಡ್‌ ನಟ ಅರ್ಜುನ್‌ ಕಪೂರ್‌ ಹಾಗೂ ನಟಿ ಮಲೈಕಾ ಅರೋರಾ ಬ್ರೇಕಪ್‌ ವಿಚಾರ ಬಾಲಿವುಡ್‌ ನಲ್ಲಿ ಹರಿದಾಡಿದೆ.

Advertisement

ಕಳೆದ 5 ವರ್ಷಗಳಿಂದ  ಪ್ರೀತಿಸುತ್ತಿದ್ದ ಅರ್ಜುನ್‌ – ಮಲೈಕಾ ವಯಸ್ಸಿನ ವಿಚಾರದಲ್ಲಿ ಅನೇಕರಿಂದ ಟ್ರೋಲ್‌ ಗೆ ಒಳಗಾಗಿತ್ತು. ಇಬ್ಬರು ಜೊತೆಯಾಗಿದ್ದ ಕ್ಷಣಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಈ ಹಿಂದೆ ಮಲೈಕಾ ಸಂದರ್ಶನವೊಂದರಲ್ಲಿ ಅರ್ಜುನ್‌ ಜೊತೆಗಿನ ತಮ್ಮ ಮದುವೆಯ ವಿಚಾರದ ಬಗ್ಗೆ ಹೇಳಿಕೊಂಡಿದ್ದರು. ಇಬ್ಬರು ನಡುವಿನ ಬಾಂಧವ್ಯ ಬಹಳ ಆತ್ಮೀಯವಾಗಿದ್ದು, ಪರಸ್ಪರ ಗೌರವದಿಂದ ಜೋಡಿ ಬ್ರೇಕಪ್‌ ಮಾಡಿಕೊಂಡ ವಿಷಯ ಬಿಟೌನ್‌ ನಲ್ಲಿ ಹರಿದಾಡಿದೆ.

ಬ್ರೇಕಪ್‌ ಮ್ಯಾಟರ್‌ ಬಂದ ಬಳಿಕ ಅರ್ಜುನ್‌ ಕಪೂರ್‌ ಸೋಶಿಯಲ್‌ ಮೀಡಿಯಾದಲ್ಲಿ ನಾನಾರ್ಥ ಬರುವ ಪೋಸ್ಟ್‌ ವೊಂದನ್ನು ಹಂಚಿಕೊಂಡಿದ್ದು, ಇದು ಬ್ರೇಕಪ್‌ ವಿಚಾರಕ್ಕೆ ಪುಷ್ಟಿ ನೀಡಿದೆ.

ಆದರೆ ಮಲೈಕಾ ಅವರ ಮ್ಯಾನೇಜರ್‌ ಬ್ರೇಕಪ್‌ ಬಗ್ಗೆ ಬೇರೆಯದೇ ಮಾತನ್ನು ಹೇಳಿದ್ದಾರೆ. ಅರ್ಜುನ್‌ – ಮಲೈಕಾ ದೂರವಾಗಿದ್ದಾರೆಯೇ ಎನ್ನುವ ಪ್ರಶ್ನೆಗೆ “ಇದೆಲ್ಲ ವದಂತಿಯಷ್ಟೇ. ಅವರಿಬ್ಬರೂ ಇನ್ನೂ ಜೊತೆಯಾಗಿಯೇ ಇದ್ದಾರೆ” ಎಂದು ʼಇಂಡಿಯಾ ಟುಡೇʼಗೆ ಹೇಳಿದ್ದಾರೆ.

Advertisement

ಮಲೈಕಾ ಆರೋರಾ ಈ ಮೊದಲು ಅರ್ಬಾಜ್‌ ಖಾನ್‌ ಅವರನ್ನು ವಿವಾಹವಾಗಿದ್ದರು. 2017 ರಲ್ಲಿ ವಿಚ್ಚೇದನ ಪಡೆದ ನಂತರ,2018 ರಲ್ಲಿ ಅರ್ಜುನ್‌ ರೊಂದಿಗೆ ಡೇಟ್‌ ಶುರು ಮಾಡಿದರು. 2019 ರಲ್ಲಿ ಅರ್ಜುನ್‌ ಅವರ ಹುಟ್ಟುಹಬ್ಬದಂದು ಪ್ರೀತಿಯ ವಿಚಾರವನ್ನು ಹಂಚಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next