Advertisement

Bigg Boss OTT 3:‌ ಬಿಗ್‌ ಬಾಸ್‌ ಓಟಿಟಿಯ ಮೂರನೇ ಸೀಸನ್‌ ಆರಂಭಕ್ಕೆ ಡೇಟ್‌ ಫಿಕ್ಸ್

03:28 PM Jun 06, 2024 | Team Udayavani |

ಮುಂಬಯಿ: ಹಿಂದಿ ಬಿಗ್‌ ಬಾಸ್‌ ಓಟಿಟಿ ಸೀಸನ್‌ -3 ಆರಂಭಕ್ಕೆ ಡೇಟ್‌ ಫಿಕ್ಸ್‌ ಆಗಿದೆ. ಆ ಮೂಲಕ ಕುತೂಹಲಕ್ಕೆ ತೆರೆಬಿದ್ದಿದೆ.

Advertisement

ಕಳೆದ ಕೆಲ ದಿನಗಳ ಹಿಂದಷ್ಟೇ ಕಾರ್ಯಕ್ರಮದ ಪ್ರೋಮೊವೊಂದನ್ನು ರಿಲೀಸ್‌ ಮಾಡಿ ಹೊಸ ನಿರೂಪಕ ಅನಿಲ್‌ ಕಪೂರ್‌ ಅವರನ್ನು ಪರಿಚಯಿಸಿತು. ಇದೀಗ ಕಾರ್ಯಕ್ರಮ ಯಾವಾಗದಿಂದ ಆರಂಭಗೊಳ್ಳಲಿದೆ ಎನ್ನುವುದನ್ನು ಆಯೋಜಕರು ರಿವೀಲ್‌ ಮಾಡಿದ್ದಾರೆ

ಬಿಗ್‌ ಸ್ಕ್ರೀನ್‌ ನಿಂದ – ಬಿಗ್‌ಬಾಸ್‌ವರೆಗೆ ಎಂದು ನಿರೂಪಕ ಅನಿಲ್‌ ಕಪೂರ್‌ ಅವರನ್ನು ಪರಿಚಿಯಿಸಿ ಇದೇ ಜೂನ್.21‌ ರಿಂದ ಬಿಗ್‌ ಬಾಸ್‌ ಓಟಿಟಿ -3 ಆರಂಭಗೊಳ್ಳಲಿದೆ ಎಂದು ʼಜಿಯೋ ಸಿನಿಮಾʼ ಹೇಳಿದೆ.

ಈ ಬಾರಿ ಸ್ಪರ್ಧಿಗಳ ವಿಚಾರದಲ್ಲೂ ಕುತೂಹಲ ಹೆಚ್ಚಾಗಿದೆ. ಶಿವಂಗಿ ಜೋಶಿ, ಶಫಕ್ ನಾಜ್, ರೋಹಿ ಕುಮಾರ್, ಯೂಟ್ಯೂಬರ್ ದಂಪತಿ ಜತಿನ್ ತಲ್ವಾರ್-ನಿಧಿ ತಲ್ವಾರ್, ಪಂಜಾಬಿ ಗಾಯಕ ನವಜೀತ್ ಸಿಂಗ್, ದೆಹಲಿಯ ವೈರಲ್ ವಡಾ ಪಾವ್‌  ಹುಡುಗಿ ಚಂದ್ರಿಕಾ ಸೇರಿದಂತೆ ಹಲವರ ಹೆಸರು ಕೇಳಿ ಬಂದಿದೆ. ಯಾರೆಲ್ಲ ಬಿಗ್‌ ಬಾಸ್‌ ಓಟಿಟಿಯ ಮನೆಯೊಳಗಡೆ ಹೋಗಲಿದ್ದಾರೆ ಎನ್ನುವ ಕುತೂಹಲಕ್ಕೆ ಜೂ.21 ರಂದೇ ತೆರೆ ಬೀಳಲಿದೆ.

ಬಿಗ್‌ ಬಾಸ್‌ ಓಟಿಟಿ ಸೀಸನ್‌ -1 ರಲ್ಲಿ ದಿವ್ಯಾ ಅಗರ್ವಾಲ್ ವಿಜೇತರಾಗಿದ್ದರು. ನಿಶಾಂತ್ ಭಟ್ ಎರಡನೇ ಸ್ಥಾನ ಪಡೆದಿದ್ದರು. ಎರಡನೇ ಸೀಸನ್‌ ನಲ್ಲಿ ಯೂಟ್ಯೂಬರ್ ಎಲ್ವಿಶ್ ಯಾದವ್ ವಿಜೇತರಾಗಿದ್ದರು. ಅಭಿಷೇಕ್ ಮಲ್ಹಾನ್ ಮೊದಲ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದಿದ್ದರು.

View this post on Instagram
Advertisement

 

A post shared by JioCinema (@officialjiocinema)

Advertisement

Udayavani is now on Telegram. Click here to join our channel and stay updated with the latest news.

Next