ಮುಂಬಯಿ: ಬಾಲಿವುಡ್ ತಾರೆಗಳಾದ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರು ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ನಟರ ನಿಕಟ ಮೂಲಗಳು ತಿಳಿಸಿವೆ.
ಮುಂಬಯಿಯ ಚೆಂಬೂರಿನಲ್ಲಿರುವ ರಣಬೀರ್ ಕಪೂರ್ ಅವರ ಮನೆಯಾದ ವಾಸ್ತು ಮತ್ತು ಆರ್‌ಕೆ ಸ್ಟುಡಿಯೋದಲ್ಲಿ ಮದುವೆ ಕಾರ್ಯಕ್ರಮಗಳು ನಡೆದಿವೆ.
ಕುಟುಂಬದಿಂದ ಯಾವುದೇ ಅಧಿಕೃತ ಮಾಹಿತಿಗಳಿಲ್ಲದಿದ್ದರೂ, ಕುಟುಂಬಕ್ಕೆ ಹತ್ತಿರವಿರುವವರು ಸಮಾರಂಭದ ವಿಧಿವಿಧಾನಗಳು ಸಂಜೆ 5.15 ರ ಸುಮಾರಿಗೆ ನಡೆದವು ಎಂದು ಹೇಳಿದ್ದಾರೆ.
ರಣಬೀರ್ ಅವರ ಸೋದರ ಮಾವ ಭರತ್ ಸಹಾನಿ ಮದುವೆ ಸಮಾರಂಭ ಮುಸಿಸಿ ಅಪಾರ್ಟ್ಮೆಂಟ್ ನಿಂದ ಹೊರಬಂದ ಮೊದಲ ವ್ಯಕ್ತಿಯಾಗಿದ್ದರು. ಸಮಾರಂಭ ಮುಗಿದ ತಕ್ಷಣ ಸೆಲೆಬ್ರಿಟಿ ಅತಿಥಿಗಳ ಕಾರುಗಳಿಗೆ ರಸ್ತೆಯನ್ನು ತೆರವುಗೊಳಿಸಲು ಬೌನ್ಸರ್‌ಗಳು ಕಾರ್ಯಪ್ರವೃತ್ತರಾಗಿದ್ದಾರೆ. ಸಂಜೆ 7 ಗಂಟೆಯ ನಂತರ ದಂಪತಿಗಳು ಫೋಟೋಗಳಿಗೆ ಪೋಸ್ ನೀಡುತ್ತಿದ್ದಾರೆ.
39 ರ ಹರೆಯದ ರಣಬೀರ್ 29 ರ ಹರೆಯದ ಆಲಿಯಾ ಬಾಲಿವುಡ್ ನಲ್ಲಿ ಜೋಡಿ ಹಕ್ಕಿಗಳಾಗಿ ಸುದ್ದಿಯಾಗಿದ್ದರು, ಈಗ ಅಧಿಕೃತವಾಗಿ ದಾಂಪತ್ಯ ಜೀವನ ಆರಂಭಿಸಿದ್ದಾರೆ.