Advertisement

ಉದ್ಯಮಿ ಮಿಹಿಕಾ ಜತೆ ಇಂದು ರಾಣಾ ದಗ್ಗುಬಾಟಿ ವಿವಾಹ

09:37 AM Aug 08, 2020 | mahesh |

ಹೈದರಾಬಾದ್‌: ಬಾಹುಬಲಿ ಚಿತ್ರದ ಮೂಲಕ ಜಗಜ್ಜಾಹೀರಾದ ಕಲಾವಿದ ರಾಣಾ ದಗ್ಗುಬಾಟಿ ಹಾಗೂ ಮಿಹಿಕಾ ಬಜಾಜ್‌ ಅವರ ಮದುವೆ ಆ.8ರಂದು ಹೈದರಾಬಾದ್‌ನ ರಾಮಾನಾಯ್ಡು ಸ್ಟುಡಿಯೋಸ್‌ನಲ್ಲಿ ನಡೆಯಲಿದೆ. ಈ ವಿಷಯವನ್ನು ಖುದ್ದು ರಾಣಾ ದಗ್ಗುಬಾಟಿಯವರೇ ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.

Advertisement

ಮಿಹಿಕಾ ಮೂಲತಃ ಹೈದರಾಬಾದ್‌ನ ಉದ್ಯಮಿ. ಲಂಡನ್‌ನ ಚೆಲ್ಸಾ ವಿವಿಯಿಂದ ಇಂಟೀರಿಯರ್‌ ಡಿಸೈನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು, ಮುತ್ತಿನ ನಗರಿಯಲ್ಲಿ ಇಂಟೀರಿಯರ್‌ ಡೆಕೊರೇಷನ್‌ ಹಾಗೂ ಇವೆಂಟ್‌ ಮ್ಯಾನೇಜ್‌ಮೆಂಟ್‌ಗೆ ಸಂಬಂಧಿಸಿದ “ಡ್ನೂ ಡ್ರಾಪ್‌ ಡಿಸೈನ್‌ ಸ್ಟುಡಿಯೋ’ ಎಂಬ ಕಂಪೆನಿ ಹೊಂದಿ ದ್ದಾರೆ. ಅವರ ತಾಯಿ ಬಂಟಿ ಬಜಾಜ್‌ ಅವರೂ ಉದ್ಯಮಿ ಯಾಗಿದ್ದು ಹೈದರಾಬಾದ್‌ನಲ್ಲಿ “ಕ್ರಸಾಲ ಜುವೆಲ್ಸ್‌’ ಎಂಬ ಆಭರಣ ಬ್ರಾಂಡ್‌ ಮಳಿಗೆ ಹೊಂದಿದ್ದಾರೆ. ರಾಣಾ ಹಾಗೂ ಮಿಹಿಕಾ ಎಲ್ಲಿ ಮೊದಲು ಪರಿಚಯವಾದರು, ಹೇಗೆ ಅವರಿಬ್ಬರ ನಡುವೆ ಪ್ರೀತಿ ಮೂಡಿತು ಎಂಬಿತ್ಯಾದಿ ವಿವರಗಳು ಸದ್ಯಕ್ಕೆ ಲಭ್ಯವಿಲ್ಲ. ರಾಣಾ,ಮಿಹಿಕಾ ಜೊತೆಗೆ ಡೇಟಿಂಗ್‌ ಮಾಡುತ್ತಿದ್ದರೂ ಗೌಪ್ಯವಾಗೇ ಇಟ್ಟಿದ್ದರು.


Advertisement

Udayavani is now on Telegram. Click here to join our channel and stay updated with the latest news.

Next