Advertisement
ಶ್ರೀ ಕೃಷ್ಣಮಠದಲ್ಲಿ ರವಿವಾರ ರಾಜಾಂಗಣದಲ್ಲಿ ಜರಗಿದ ಯುವ ಗೀತೋತ್ಸವ ಸಮಾರೋಪದಲ್ಲಿ ಶ್ರೀಪಾದರು ಆಶೀರ್ವಚನ ನೀಡಿ, ಮನುಷ್ಯ ಜೀವನವನ್ನು ಯಜ್ಞವಾಗಿ ಪರಿವರ್ತಿಸಬೇಕು. ಕರ್ತವ್ಯಕ್ಕೆ ಶ್ರೀಕೃಷ್ಣ ಹೆಚ್ಚು ಒತ್ತು ನೀಡಿದ್ದಾನೆ. ಅರ್ಜುನ ಕರ್ತವ್ಯಚ್ಯುತನಾದಾಗ ಯುದ್ಧ ಮಾಡಬೇಕು ಎಂದು ಎಚ್ಚರಿಸುತ್ತಾನೆ. ಹೀಗೆ ಮನುಷ್ಯ ಕರ್ತವ್ಯದ ವಿಷಯದಲ್ಲಿ ಜಾಗೃತನಾದರೆ ಅದೇ ಜೀವನೌಷಧ ಮತ್ತು ಕರ್ತವ್ಯಪ್ರಜ್ಞೆ ಬೆಳೆಸುವುದೇ ಶ್ರೀ ಕೃಷ್ಣನ ಉದ್ದೇಶವಾಗಿದೆ ಎಂದರು.
ಪರ್ಯಾಯ ಪುತ್ತಿಗೆ ಮಠಾಧೀಶ ರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅನುಗ್ರಹಿಸಿ, ಜೀವನ ಉತ್ಸಾಹ ಮಾಡುವ ಗ್ರಂಥ ಭಗವದ್ಗೀತೆ. ಕೃಷ್ಣ ಎಂದೂ ಅಳಲಿಲ್ಲ. ದುಃಖ, ವಿಷಾದ ತೋರಿಸಿಕೊಂಡಿಲ್ಲ. ಗೀತೆ ಕೇಳುವವರು ಲವಲವಿಕೆಯಿಂದ ಜೀವಿಸುವಂತೆ ಶ್ರೀ ಕೃಷ್ಣ ಮಾಡುತ್ತಾನೆ. ಗೀತೆಗೆ ಯೋಗ ಶಾಸ್ತ್ರ ಎನ್ನುವ ಹೆಸರಿದೆ. ಯೋಗ ಮಾಡಿದರೆ ನಿತ್ಯವೂ ಚೈತನ್ಯ ಇರುವಂತೆ, ಗೀತೆ ಓದಿದರೆ ನಿತ್ಯ ಚೈತನ್ಯ, ಉತ್ಸಾಹ ಇರುತ್ತದೆ. ಯೋಗದಿಂದ ಭೌತಿಕ ಜೀವನ ಹಾಗೂ ಗೀತೆಯಿಂದ ಮನಸ್ಸು ಉತ್ಸಾಹದಿಂದ ಇರುತ್ತದೆ. ಹೀಗಾಗಿಯೇ ಶ್ರೀ ಕೃಷ್ಣ ಯೋಗೇಶ್ವನಾಗಿದ್ದಾನೆ ಎಂದರು.
Related Articles
Advertisement
ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಅನುಗ್ರಹಿಸಿದರು. ಪತ್ರಕರ್ತರಾದ ಸುಭಾಸ್ ಶಿರಿಯಾ, ದಿನೇಶ್ ಕುಲಾಲ್, ಪ್ರಮುಖರಾದ ಜಗನ್ನಾಥ್ ಶೆಟ್ಟಿ, ಸಂಪನ್ಮೂಲ ವ್ಯಕ್ತಿಗಳಾದ ಡಾ| ವಿಶ್ವನಾಥ ಸುಂಕಸಾಳ, ನಚಿಕೇತ್ ಹೆಗಡೆ, ಡಾ| ನವೀನ್ ಗಂಗೋತ್ರಿ ಉಪಸ್ಥಿತರಿದ್ದರು.
ರೋಹಿತ್ ಚಕ್ರತೀರ್ಥ ಸ್ವಾಗತಿಸಿ, ಪ್ರಸ್ತಾವಿಸಿದರು. ಮಹಿತೋಷ್ ಆಚಾರ್ಯ ಮತ್ತು ಪ್ರಮೋದ್ ಸಾಗರ್ ನಿರೂಪಿಸಿ, ವಂದಿಸಿದರು.ಭಗವದ್ಗೀತೆಯು ಪ್ರಶ್ನೆಗೆ ಉತ್ತರಗಳನ್ನು ನೀಡುತ್ತ ಮನಸ್ಸನ್ನು ಹೇಗೆ ಬಳಸಿಕೊಳ್ಳ ಬೇಕು ಎಂಬುದನ್ನು ತಿಳಿಸುತ್ತದೆ ಎಂದು ರೋಹಿತ್ ಚಕ್ರತೀರ್ಥ ಹೇಳಿದರು.