Advertisement

ರಮೇಶಕುಮಾರ ವಿರುದ್ಧ ಮಹಿಳಾ ಮೋರ್ಚಾ ನಿರಶನ

12:24 PM Dec 19, 2021 | Team Udayavani |

ಬೀದರ: ವಿಧಾನಸಭೆ ಅಧಿವೇಶನದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿರುವ ಮಾಜಿ ಸಭಾಪತಿ ರಮೇಶಕುಮಾರ ಅವರನ್ನು ಪಕ್ಷದಿಂದಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಮಹಿಳಾ ಮೋರ್ಚಾದಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

Advertisement

ಮೋರ್ಚಾ ಜಿಲ್ಲಾಧ್ಯಕ್ಷೆ ಲುಂಬಿಣಿ ಗೌತಮ ಮತ್ತು ಪಕ್ಷದ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಕರ್‌ ನೇತೃತ್ವದಲ್ಲಿ ನಗರದ ಅಂಬೇಡ್ಕರ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಘೋಷಣೆ ಕೂಗಲಾಯಿತು.

ರಮೇಶಕುಮಾರ ಹೇಳಿಕೆ ನೀಡುವ ಮೂಲಕ ಇಡೀ ಮಹಿಳಾ ಸಮಾಜಕ್ಕೆ ಅವಮಾನಿಸಿದ್ದಾರೆ. ಒಬ್ಬ ಹಿರಿಯ ಮುತ್ಸದ್ದಿ ರಾಜಕಾರಣಿಯಾಗಿ ರೇಪ್‌ಗೆ ಸಂಬಂಧಿಸಿದಂತೆ, ತುಲಾನಾತ್ಮಕವಾಗಿ ಆಡಿರುವ ಮಾತುಗಳಿಂದ ಪ್ರಜ್ಞಾವಂತ ಸಮಾಜ ತಲೆ ತಗ್ಗಿಸುವಂತೆ ನಡೆದುಕೊಂಡಿರುತ್ತಾರೆ ಎಂದು ಪ್ರಮುಖರು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಬಿಜೆಪಿ ವಿಭಾಗೀಯ ಸಹ ಪ್ರಭಾರಿ ಈಶ್ವರಸಿಂಗ್‌ ಠಾಕೂರ, ಪ್ರಮುಖರಾದ ಮಾಯಾದೇವಿ ಸಿಂದನಕೇರಾ,ಪ್ರಸನ್ನಲಕ್ಷ್ಮೀದೇಶಪಾಂಡೆ, ಶೋಭಾ ತೆಲಂಗ್‌, ವುಲ್ಕಾವತಿ, ರೂಪಾವತಿ ಜಾಧವ, ಸಂಗೀತಾ ಅಡಕೆ, ಪ್ರೇಮಾ ತಲವಾರ, ಸರಸ್ವತಿ ಜಮಾದರ, ಮಹಾನಂದ ಪಾಟೀಲ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next