Advertisement

ಧ್ರುವನಾರಾಯಣ ಪರ ರಮೇಶ್‌ ಮತಯಾಚನೆ

09:26 PM Apr 15, 2019 | Team Udayavani |

ಕೊಳ್ಳೇಗಾಲ: ಬಡವರ ಬಡತನ ಹೋಗಲಾಡಿಸುವ ಸಲುವಾಗಿ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿರವರು ಪ್ರತಿ ವರ್ಷ ಬಡವರಿಗೆ 72 ಸಾವಿರ ರೂ ನೀಡಲು ಪ್ರನಾಳಿಕೆಯಲ್ಲಿ ಘೋಷಣೆ ಮಾಡಿದ್ದು ಎಲ್ಲಾ ಬಡವರ್ಗದ ಜನರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲ ನೀಡಬೇಕೆಂದು ಮಾಜಿ ನಗರಸಭಾ ಅಧ್ಯಕ್ಷ ರಮೇಶ್‌ ಹೇಳಿದರು.

Advertisement

ನಗರದ ಮೂರು ಮತ್ತು ನಾಲ್ಕನೇ ವಾರ್ಡ್‌ನ ಭೀಮನಗರ ಬಡವಾಣೆೆಯಲ್ಲಿ ಸೋಮವಾರ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ಹಾಗೂ ಸಂಸದ ಆರ್‌.ಧ್ರುವನಾರಾಯಣ ಪರ ಮನೆಮನೆಗೆ ತೆರಳಿ ಕಾಂಗ್ರೆಸ್‌ ಕರಪತ್ರ ಹಂಚಿ ಮತಯಾಚನೆ ಮಾಡಿದ ಅವರು, ಬಡವರ ಪಕ್ಷ ಕಾಂಗ್ರೆಸ್‌ ಆಗಿದ್ದು ಕಾಂಗ್ರೆಸ್‌ ಅಭ್ಯರ್ಥಿಗೆ ಹ್ಯಾಟ್ರಿಕ್‌ ಗೆಲುವು ತಂದು ಕೊಡಬೇಕು ಎಂದರು.

ನಗರಸಭೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಗರದ 31 ವಾರ್ಡ್‌ಗಳಿಗೂ ಕುಡಿಯುವ ನೀರು ರಸ್ತೆ ಚರಂಡಿ ನಿರ್ಮಾಣ ಸ್ವಚ್ಛತೆ ಕುಡಿಯುವ ನೀರು ಪೂರೈಕೆ ಮೊದಲಾದ ಮೂಲಭೂತ ಸೌಕರ್ಯಗಳಿಗೆ ಪ್ರಥಮ ಆದ್ಯತೆ ನೀಡಿ ಉತ್ತಮ ಸೇವೆ ಸಲ್ಲಿಸಿದ್ದೇನೆ, ನಂತರ ನಗರಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸಿದ್ದ 3ನೇ ವಾರ್ಡ್‌ನಿಂದ ನನ್ನ ಪತ್ನಿ ಸ್ಪರ್ಧೆ ಮಾಡಿ ಗೆದ್ದಿದ್ದು ವಾರ್ಡ್‌ ಅನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.

ಮಾಜಿ ಸೆಸ್ಕ್ ನಿರ್ದೇಶಕ ಡಿ.ಸಿದ್ದರಾಜು ಮಾತನಾಡಿ, ದಲಿತರು ಹಲವಾರು ವರ್ಷಗಳಿಂದ ಕಾಂಗ್ರೆಸ್‌ ಬೆಂಬಲಿಸಿಕೊಂಡು ಬಂದಿದ್ದಾರೆ. ಕಾಂಗ್ರೆಸ್‌ ಸರ್ಕಾರ ಸದೀನ ದಲಿತರಿಗೆ ಬಡವರಿಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ ಮತ್ತು ಸಾಮಾಜಿಕ ನ್ಯಾಯವನ್ನು ತಂದುಕೊಟ್ಟಿದ್ದು ಈ ಬಾರಿ ಲೋಕಸಭಾ ಚುನಾವಣೆ ಏ.18 ರಂದು ನಡೆಯಲಿದ್ದು ಮತದಾರರು ಧ್ರುವನಾರಾಯಣಗೆ ಜಯತಂದು ಕೋಡಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.

ನಗರಸಭಾ ಸದಸ್ಯರಾದ ಮಂಜುನಾಥ, ರಾಘವೇಂದ್ರ, ಎ.ಪಿ.ಶಂಕರ್‌, ಸುರೇಶ, ಶಾಂತರಾಜು, ಮನೋಹರ್‌, ಕಲೀಂಉಲ್ಲಾಖಾನ್‌, ಮಾಜಿ ಸದಸ್ಯರಾದ ಅಕ್ಮಲ್‌ಪಾಷಾ, ಹರ್ಷ, ನಂಜುಂಡ, ಶಾಂತರಾಜು, ಮಲ್ಲಿಕಾರ್ಜುನ, ಕೃಷ್ಣಯ್ಯ, ಜಿಲ್ಲಾ ಕಾಂಗ್ರೆಸ್‌ ಎಸ್‌ಸಿ ಘಟಕದ ಅಧ್ಯಕ್ಷ ನಾಗರಾಜು, ಮುಖಂಡರಾದ ಕಿರಣ್‌, ಆನಂದ್‌, ನಾಗರಾಜು ಇತರರು ಇದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next