Advertisement

Rambo Circus ; ಮಂಗಳೂರಿನಲ್ಲಿ ನಾಳೆಯಿಂದ ರಾಂಬೋ ಸರ್ಕಸ್

05:00 PM Sep 20, 2023 | Team Udayavani |

ಮಂಗಳೂರು: ಬೆರಗುಗೊಳಿಸುವ ಪ್ರದರ್ಶನಗಗಳೊಂದಿಗೆ ರಾಂಬೋ ಸರ್ಕಸ್ ಮಂಗಳೂರಿಗೆ ಬರುತ್ತಿದ್ದು ನಾಳೆ (ಸೆ. 21 , ಗುರುವಾರ) ಉದ್ಘಾಟನೆ ಗೊಳ್ಳಲಿದೆ.

Advertisement

ಮೊದಲ ಬಾರಿಗೆ ಸಂಪೂರ್ಣ ಹವಾ ನಿಯಂತ್ರಿತ ಡಾ.ಟಿ.ಎಂ.ಎ.ಪೈ ಆಡಿಟೋರಿಯಂನಲ್ಲಿ ಸರ್ಕಸ್ ಪ್ರದರ್ಶನಗೊಳ್ಳಲಿದ್ದು, ಮಧ್ಯಾಹ್ನ 3.45 ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅವರು ಉದ್ಘಾಟಿಸಲಿದ್ದಾರೆ. ಶಾಸಕ ವೇದವ್ಯಾಸ ಕಾಮತ್ ದೀಪ ಬೆಳಗಿಸಲಿದ್ದಾರೆ.ಮುಖ್ಯ ಅಭ್ಯಾಗತರಾಗಿ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಉಪಸ್ಥಿತರಿರಲಿದ್ದಾರೆ.

ಸೆ.24 ರ ವರೆಗೆ ಸರ್ಕಸ್ ಪ್ರದರ್ಶನವಿರಲಿದೆ. ಸೆ.21 ರಂದು ಎರಡು ಶೋಗಳು ಇರಲಿದ್ದು, ಸಂಜೆ 4 ಗಂಟೆಗೆ ಬಳಿಕ 7 ಗಂಟೆಗೆ ಇನ್ನೊಂದು ಶೋ ಪ್ರದರ್ಶನಗೊಳ್ಳಲಿವೆ. 22ರಂದು 1,4 ಮತ್ತು 7 ಗಂಟೆಗೆ ಮೂರು ಶೋ ಪ್ರದರ್ಶನಗೊಳ್ಳಲಿವೆ. ಸೆ.23 ಮತ್ತು ಕೊನೆಯ ದಿನ 24 ರಂದು ಬೆಳಗ್ಗೆ 11 ಗಂಟೆಗೆ,1,4 ಮತ್ತು 7 ಗಂಟೆಗೆ ಒಟ್ಟು ನಾಲ್ಕು ಶೋ ಪ್ರದರ್ಶನಗೊಳ್ಳಲಿವೆ.

https://www.rambocircus.in/ನಲ್ಲಿ, ಬುಕ್ ಮೈ ಶೋ ನಲ್ಲಿ ಆನ್ ಲೈನ್ ಟಿಕೆಟ್ಸ್ ಲಭ್ಯವಿದೆ. ಬುಕ್ಕಿಂಗ್ ಗಾಗಿ 8306430643 ಗೆ ಕರೆ ಮಾಡಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next