Advertisement

26ಕ್ಕೆ ರಾಮಾಯಣ ಟ್ಯಾಬ್ಲೋ

06:00 AM Jan 05, 2018 | Team Udayavani |

ನವದೆಹಲಿ: ಈ ತಿಂಗಳ 26ರಂದು ದೇಶಕ್ಕೆ 69ನೇ ಗಣರಾಜ್ಯ ದಿನದ ಸಂಭ್ರಮ. ವಿಶೇಷವೆಂದರೆ, ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನ‌ಲ್ಲಿ ಆಸಿಯಾನ್‌ -ಇಂಡಿಯಾ ಟ್ಯಾಬ್ಲೋ ಪ್ರಮುಖ ಆಕರ್ಷಣೆಯಾಗುವ ಸಾಧ್ಯತೆಗಳಿವೆ. ಇದರಲ್ಲಿ ರಾಮಾಯಣದ ದೃಶ್ಯವನ್ನು ಕಲಾವಿದರು ಅಭಿನಯಿಸಲಿದ್ದಾರೆ. 

Advertisement

ಹತ್ತು ಆಸಿಯಾನ್‌ ರಾಷ್ಟ್ರಗಳ ರಾಷ್ಟ್ರಪತಿ, ಪ್ರಧಾನಮಂತ್ರಿಗಳು ಮತ್ತು ಅವರ ಕುಟುಂಬ ಸದಸ್ಯರು ಗಣರಾಜ್ಯ ದಿನದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ, ಹಿಂದಿನ ಭದ್ರತೆ ಮತ್ತು ವಸತಿ ಸಿದ್ಧತೆಗಳಿಗಿಂತ ಭಿನ್ನವಾದ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. ಸರ್ಕಾರಿ ನಾಯಕರು ವೇದಿಕೆಯಲ್ಲಿ ಕುಳಿತುಕೊಳ್ಳುವುದಕ್ಕಾಗಿ ಕೇಂದ್ರ ಲೋಕೋಪಯೋಗಿ ಇಲಾಖೆ 95 ಅಡಿ ಅಗಲದ ವೇದಿಕೆ ಸಿದ್ಧಪಡಿಸುತ್ತಿದೆ. ಕಳೆದ ವರ್ಷದ ವರೆಗೆ 40 ಅಡಿಯ ವೇದಿಕೆ ಇತ್ತು.  ಅದೇ ಸಂದರ್ಭದಲ್ಲಿ ಇಂಡಿಯಾ- ಆಸಿಯಾನ್‌ ದೇಶಗಳ ಮೈತ್ರಿಕೂಟಕ್ಕೆ 25 ವರ್ಷ ಪೂರ್ತಿಗೊಂಡ ಹಿನ್ನೆಲೆಯಲ್ಲಿ ಆಸಿ ಯಾನ್‌ ರಾಷ್ಟ್ರಗಳ ಸಮಾವೇಶ ನವದೆಹಲಿ ಯಲ್ಲಿ ನಡೆಯಲಿದೆ. ಪೂರ್ವದತ್ತ ನೋಟ (ಲುಕ್‌ ಈಸ್ಟ್‌ ಪಾಲಿಸಿ) ಎಂಬ ನಿಲುವಿಗೆ ತಕ್ಕಂತೆ ಕಾರ್ಯ ಕ್ರಮ ಆಯೋ ಜಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ದೇಶದ ಈಶಾನ್ಯ ರಾಜ್ಯಗಳ ಅಭಿವೃದ್ಧಿ, ಆಸಿಯಾನ್‌ ರಾಷ್ಟ್ರಗಳ ಜತೆ ವ್ಯಾಪಾರ- ವಾಣಿಜ್ಯ ಮತ್ತು ಇತರ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗಾಗಿ ಹಲವು ಒಪ್ಪಂದಗಳಿಗೂ ಸಹಿ ಹಾಕಲಾಗುತ್ತದೆ ಎಂದು “ದ ಹಿಂದುಸ್ತಾನ್‌ ಟೈಮ್ಸ್‌’ ವರದಿ ಮಾಡಿದೆ. 

ಪ್ರತ್ಯೇಕ ಆಗಮನ: ಹತ್ತು ಮಂದಿ ಆಸಿಯಾನ್‌ ನಾಯಕರು ಪ್ರತ್ಯೇಕವಾಗಿ ಗಣರಾಜ್ಯ ಕಾರ್ಯಕ್ರಮಕ್ಕೆ ಆಗಮಿಸಲಿದ್ದು, ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವಾಗತಿಸಲಿದ್ದಾರೆ. ಸಿಂಗಾಪುರ ಪ್ರಧಾನಮಂತ್ರಿ ಲೀ ಹೀಸನ್‌ ಲೂಂಗ್‌ ಆಸಿಯಾನ್‌ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next