ರಾಮನಗರ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಎಂಬ ಸರ್ಕಾರದ ನೂತನ ಕಾರ್ಯಕ್ರಮ ಕಳೆದ ಫೆ.20ರಂದು ತಾಲೂಕಿನ ಕೈಲಾಂಚ ಹೋಬಳಿಯ ಲಕ್ಕೋಜನಹಳ್ಳಿಯಲ್ಲಿ ನಡೆದಿತ್ತು. ನೂತನ ಕಾರ್ಯ ಕ್ರಮ ಅಧಿಕಾರಿಗಳು ಮತ್ತು ಗ್ರಾಮಸ್ಥರು ಇಬ್ಬರಲ್ಲೂ ಸಾರ್ಥಕತೆ ಮನೆ ಮಾಡಿದೆ.
ನಾಗರಿಕರ ಮನೆ ಬಾಗಿಲಿಗೆ ಹೋಗಿದ್ದರಿಂದ ಪ್ರತಿಯೊಬ್ಬ ಅರ್ಜಿದಾರನೊಂದಿಗೂ ಮಾತನಾಡಲು ಅವ ಕಾಶವಾಗಿದೆ. ಅಲ್ಲದೆ ಕಾನೂನಿನ ಸೂಕ್ಷ್ಮ ಅಂಶಗಳ ಬಗ್ಗೆಯೂ ನಾಗರಿಕರಲ್ಲಿ ತಿಳವಳಿಕೆ ಮೂಡಿಸಲು ಸಹಾಯಕವಾಗಿದೆ ಎಂಬ ಅಭಿಪ್ರಾಯ ಅಧಿಕಾರಿವಲಯದಿಂದ ಬಂದರೆ, ತಾಲೂಕು ಕೇಂದ್ರಗಳಿಗೆ ಅಲೆ ಯುವುದು ತಪ್ಪಿದೆ ಎಂಬ ಅಭಿಪ್ರಾಯ ನಾಗರಿಕ ವಲಯದಿಂದ ವ್ಯಕ್ತವಾಗಿದೆ.
ಕೈಲಾಂಚ ಹೋಬಳಿಯ ಬನ್ನಿ ಕುಪ್ಪೆ(ಕೆ) ಗ್ರಾಪಂ ವ್ಯಾಪ್ತಿಗೆ ಬರುವ ಈ ಗ್ರಾಮದಲ್ಲಿ 241 ಮನೆಗಳಿವೆ. 971 ಜನಸಂಖ್ಯೆ ಇದೆ. ಲಕ್ಕೋಜನಹಳ್ಳಿ ರೆವೆನ್ಯು ಗ್ರಾಮಕ್ಕೆ ನಂಜಾ ಪುರ ಹ್ಯಾಮ್ಲೆಟ್ ಗ್ರಾಮವೂ ಸೇರಿಕೊಳ್ಳು ತ್ತದೆ. ಇಲ್ಲಿ 72 ಮನೆಗಳಿದ್ದು, 861 ಮಂದಿ ವಾಸವಿದ್ದಾರೆ.
ಕಾರ್ಯಕ್ರಮದಲ್ಲಿ ಒಟ್ಟು 62 ಅರ್ಜಿಗಳು ಸ್ವೀಕೃತವಾಗಿದ್ದವು. ಹೆಚ್ಚಿನ ಅರ್ಜಿಗಳು ಪಿಂಚಣಿ ಮತ್ತು ಇ-ಖಾತೆಗೆ ಸಂಬಂಧಿಸಿದ್ದು, ತಮ್ಮ ವಯಸ್ಸು 65ಕ್ಕಿಂತ ಹೆಚ್ಚಾಗಿದೆ, ಹೀಗಾಗಿ ಪಿಂಚಣಿಯನ್ನು 600 ರಿಂದ 1000 ರೂ.ಗೆ ಏರಿಕೆ ಮಾಡಿಕೊಡಿ ಎಂಬ ಅರ್ಜಿ ಬಂದಿವೆ. ಇಂತಹ 6 ಅರ್ಜಿಗಳನ್ನು ತಹಸೀಲ್ದಾರರು ಸ್ಥಳದಲ್ಲೇ ಮಂಜೂರು ಮಾಡಿದ್ದಾರೆ. ಉಳಿದವನ್ನು ಒಂದು ವಾರದಲ್ಲಿ ವಿಲೇ ಮಾಡುವ ಭರವಸೆ ನೀಡಿದ್ದಾರೆ.
ಇ-ಖಾತೆ ವಿಳಂಬ ದೂರು, ಮನವರಿಕೆ: ಹೆಚ್ಚಿನ ಅರ್ಜಿಗಳು ಕಂದಾಯ ಇಲಾಖೆಗೆ ಸಂಬಂಧಿಸಿದ್ದು, ಅರ್ಜಿ ಗಳು ಸ್ವೀಕೃತವಾಗಿವೆ. ಕೆಲವು ಅರ್ಜಿಗಳು ಇ-ಖಾತೆ ವಿಳಂಬವಾಗುತ್ತಿದೆ ಎಂದು ದೂರಲಾಗಿದೆ. ಈ ವಿಚಾರ ದಲ್ಲಿ ತಹಶೀಲ್ದಾರ್ ನರಸಿಂಹ ಮೂರ್ತಿ ಮತ್ತು ಬನ್ನಿಕುಪ್ಪೆ (ಕೆ) ಗ್ರಾಪಂ ಪಿಡಿಒ ಜಯಶಂಕರ್ ಪರಿಶೀ ಲನೆ ನಡೆಸಿದಾಗ ಪಹಣಿ ಇತ್ಯಾದಿ ದಾಖಲೆಗಳಲ್ಲಿ ಸದರಿ ಅರ್ಜಿದಾರರ ಹೆಸರು ಇರಲಿಲ್ಲ.
ಎರಡು-ಮೂರು ತಲೆಮಾರು ಹಿಂದೆ ಖರೀದಿಸಿದ್ದ ಭೂಮಿಯ ಒಡೆತನವನ್ನು ಆಗಲೆ ಬದಲಾಯಿಸಿಕೊಳ್ಳ ದಿರುವುದರಿಂದ ಹಾಲಿ ಅರ್ಜಿದಾರರ ಹೆಸರಾಗಲಿ, ಅಜ್ಜ, ತಂದೆ ಹೆಸರುಗಳು ದಾಖಲೆಗಳಲ್ಲಿ ಕಾಣದ ಕಾರಣ ಇ-ಖಾತೆ ಸಾಧ್ಯವಾಗುತ್ತಿಲ್ಲ.
ಅರ್ಜಿ ಸಲ್ಲಿಸಿದರೆ ಶೀಘ್ರ ಸ್ಪಂದನೆ: ಭೂಮಿಯ ಬಗೆಗಿನ ದಾಖಲೆಗಳನ್ನು ತಾಲೂಕು ಕಂದಾಯ ಇಲಾ ಖೆಗೆ ಮೊದಲು ಸಲ್ಲಿಸಿ ಖಾತೆ ಬದಲಾವಣೆ ಮಾಡಿಸಿದ ನಂತರ ಇ-ಖಾತೆ ಸಾಧ್ಯವಾಗುತ್ತದೆ ಎಂದು ಕಂದಾಯ ಅಧಿಕಾರಿಗಳು ಅರ್ಜಿದಾರರಿಗೆ ಮನವರಿಕೆ ಮಾಡಿಕೊಟ್ಟರು. ತಾಲೂಕು ಕಚೇರಿಗೆ ಅರ್ಜಿ ಸಲ್ಲಿ ಸಿದರೆ ಶೀಘ್ರದಲ್ಲೇ ಸ್ಪಂದಿಸುವುದಾಗಿ ತಹಶೀಲ್ದಾರರು ಭರವಸೆ ನೀಡಿದರು.
ಸರ್ವೆಗೆ ಸಂಬಂಧಿಸಿದಂತೆ ಕೆಲವು ಅರ್ಜಿಸಲ್ಲಿಕೆಯಾಗಿವೆ. ಈ ವಿಚಾರದಲ್ಲೂ ಅಧಿಕಾರಿಗಳು ಸಮಾಧಾನ ಚಿತ್ತದಿಂದಲೇ ಪರಿಶೀಲಿಸಿ, ಸರ್ವೆ ಸಂಬಂಧ ವಿಳಂಬಕ್ಕೆ ಸಮಜಾಯಿಷಿಯನ್ನು ನೀಡಿದ್ದಾರೆ.