Advertisement

ರಾಮನಗರ: ಚಿತ್ರಮಂದಿರ ತೆರವು ವಿಳಂಬ

02:05 PM Oct 14, 2020 | Suhan S |

ರಾಮನಗರ: ನಾಳೆ ಗುರುವಾರದಿಂದ ಜಿಲ್ಲೆಯಲ್ಲಿ ಚಿತ್ರ ಮಂದಿರಗಳು ತೆರೆಯುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಕಾರಣಚಿತ್ರ ಮಂದಿರ ಮಾಲೀಕರು ತಮ್ಮ ಕೆಲವು ಬೇಡಿಕೆಗಳು ಈಡೇರುವರೆಗೂ ಚಿತ್ರ ಮಂದಿರ ತೆರೆಯುವುದು ವಿಳಂಬವಾಗಲಿದೆ ಎಂದಿದ್ದಾರೆ.

Advertisement

ಸರ್ಕಾರದ ಕೆಲವು ನಿಯಮಗಳು ಹಾಗೂ ನಿರ್ಮಾಪಕರೊಂದಿಗಿನ ತಮ್ಮ ವ್ಯವಹಾರಗಳಲ್ಲಿ ಸಾಕಷ್ಟು ವ್ಯತ್ಯಾಸಗಳಾಗಿರುವುದರಿಂದ ಚಿತ್ರ ಪ್ರದರ್ಶನಉದ್ಯಮ ಲಾಭಶೂನ್ಯವಾಗುತ್ತಿದೆ. ಹೀಗಾಗಿ ಚಿತ್ರ ಪ್ರದರ್ಶನ ಉದ್ಯಮದ ಉಳಿವಿಗಾಗಿ ಸರ್ಕಾರದ ಮತ್ತು ಚಿತ್ರ ನಿರ್ಮಾಪಕರ ಗಮನ ಸೆಳೆಯಲು ಅ.15ರಿಂದಲೇ ಚಿತ್ರ ಪ್ರದರ್ಶನಗಳ ಆರಂಭ ವಿಳಂಬವಾಗಬಹುದು ಎಂದು ಮಾಲೀಕರು ತಿಳಿಸಿದ್ದಾರೆ.

ನಿರ್ಮಾಪಕರೊಂದಿಗಿನ ಘರ್ಷಣೆಯೇ ವಿಳಂಬಕ್ಕೆ ಕಾರಣ!: ರಾಮನಗರ ಜಿಲ್ಲೆ ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಚಿತ್ರ ಮಂದಿರಗಳ ಆರಂಭ ವಿಳಂಬವಾಗಲು ಪ್ರಮುಖ ಕಾರಣ ಪ್ರದರ್ಶಕರು ಮತ್ತುಚಿತ್ರ ನಿರ್ಮಾಕರ ನಡುವಿನ ಸಮಸ್ಯೆಗಳುಎಂದು ಹೇಳಲಾಗಿದೆ. ಡಾ.ರಾಜ್‌ ಕುಮಾರ್‌ ಅವರ ಕಾಲದ ಚಿತ್ರಮಂದಿರಗಳಲ್ಲಿ ಸಂಗ್ರಹವಾಗುತ್ತಿದ್ದ ಒಟ್ಟು ಪ್ರದರ್ಶನ ಶುಲ್ಕದಲ್ಲಿ ಚಿತ್ರ ಮಂದಿರಗಳಿಗೆ ಇಂತಿಷ್ಟು ಹಣ ಎಂದು ಕೊಡುತ್ತಿದ್ದರು. ಆದರೆ ಇಂದು ಚಿತ್ರ ಮಂದಿರದಿಂದಲೇ ಇಂತಿಷ್ಟು ಹಣ ಪಡೆದು ಚಿತ್ರ ಕೊಡುತ್ತಿದ್ದಾರೆ. ಚಿತ್ರಕ್ಕೆ ಕೊಟ್ಟ ಹಣ ಇಲ್ಲಿ ವಾಪಸ್‌ ಬರುತ್ತಿಲ್ಲ. ಹೀಗಾಗಿಯೇ ಚಿತ್ರ ಮಂದಿರಗಳು ಬಾಗಿಲು ಮುಚ್ಚುತ್ತಿವೆ ಎಂಬುದು ಪ್ರದರ್ಶಕರ ಸಂಘದ ಪ್ರಮುಖ ಆರೋಪ.

ಪರವಾನಿಗೆ ಶುಲ್ಕಕಡಿಮೆ ಮಾಡಿ: ಚಿತ್ರಮಂದಿರ ಪರವಾನಿಗೆ ಶುಲ್ಕ ಪ್ರತಿ 5 ವರ್ಷಕ್ಕೊಮ್ಮೆ 25 ಸಾವಿರ ರೂ (ವಾರ್ಷಿಕ5ಸಾವಿರ ರೂಗಳಂತೆ) ವಿಧಿಸಲಾಗುತ್ತಿತ್ತು. ಆದರೆ ಇದೀಗ ಪ್ರತಿ ವರ್ಷ 25 ಸಾವಿರ ಪಾವತಿಸಲು ಸರ್ಕಾರ ಒತ್ತಾಯಿಸುತ್ತಿದೆ.ಕಳೆದ5 ವರ್ಷಗಳಿಂದ ಚಿತ್ರ ಮಂದಿರಗಳ ವಹಿವಾಟು ಕುಸಿಯುತ್ತಿದೆ. ಹೀಗಾಗಿ ಈ ಶುಲ್ಕ ದುಬಾರಿಯಾಗಿದೆ. ಮೊದಲಿನ ಶುಲ್ಕವನ್ನೇ ಪಡೆ ಯುವಂತೆ ಸರ್ಕಾರದ ಮೇಲೆ ಪ್ರದರ್ಶಕರು ಒತ್ತಡ ಹೇರಿದ್ದಾರೆ.

ವಿದ್ಯುತ್ದರ ಸಮಸ್ಯೆ: ರಾಜ್ಯದಲ್ಲಿಚಿತ್ರದ್ಯೋಮವನ್ನು ಕೈಗಾರಿಕೆ ಎಂದು ಪರಿಗಣಿಸಲಾಗಿದೆ. ಆದರೆ ವಿದ್ಯುತ್‌ ಶುಲ್ಕ ಮಾತ್ರ ಕಮಶೀರ್ಷಿಯಲ್‌ ದರ ವಿಧಿಸಲಾಗುತ್ತಿದೆ. ಕೈಗಾರಿಕೆಗಳಿಗೆ ಪ್ರತಿ ಯೂನಿಟ್‌ಗೆ 4 ರೂ. ವಿಧಿಸಲಾಗುತ್ತಿದ್ದು ಇದೇ ದರವನ್ನು ಚಿತ್ರ ಮಂದಿರಗಳಿಂದಲೂ ಪಡೆಯಬೇಕು ಎಂಬ ಬೇಡಿಕೆಗೆ ಸರ್ಕಾರ ಸ್ಪಂದಿಸಬೇಕಾಗಿದೆ.

Advertisement

ಪಿಪಿಇ ಕಿಟ್ಧರಿಸುವುದರಿಂದ ವಿನಾಯ್ತಿ: ಚಿತ್ರ ಮಂದಿರಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಪಿಪಿಇ ಕಿಟ್‌ ಧರಿಸಬೇಕು ಎಂಬ ಕೋವಿಡ್‌ ಲಾಕ್‌ಡೌನ್‌ ಎಸ್‌ ಒಪಿ ಹೇಳುತ್ತದೆ. ಪಿಪಿಇ ಕಿಟ್‌ ಧರಿಸಿಕೊಂಡು ಕೆಲಸ ಮಾಡುವುದು ಸಾಧ್ಯವಾಗದ ಮಾತು. ಎಸ್‌ಒಪಿಯ ಎಲ್ಲಾ ನಿಯಮ ಪಾಲಿಸಲು ಸಿದ್ಧ ಆದರೆ ಪಿಪಿಇ ಕಿಟ್‌ ಧರಿಸುವುದರಿಂದವಿನಾಯ್ತಿಕೊಡುವಂತೆಪ್ರದರ್ಶಕರು ಆಗ್ರಹಿಸಿದ್ದಾರೆ.

ಸರ್ವಿಸ್ಚಾರ್ಜ್ಗೆ ಅನುಮತಿ ಕೊಡಿ: ಮಹಾರಾಷ್ಟ, ಗುಜರಾತ್‌, ತಮಿಳುನಾಡು ಮುಂತಾದ ಬಳಕೆದಾರರಶುಲ್ಕ ವಿಧಿಸಲಾಗುತ್ತಿದೆ. ಟಿಕೆಟ್‌ ಮೇಲೆ ಇಂತಿಷ್ಟು ಸರ್ವಿಸ್‌ ಚಾರ್ಜ್‌ಎಂದು ಸಂಗ್ರಹಿಸಲಗುತ್ತಿದೆ.ಥಿಯೇಟರ್‌ಗಳ ನಿರ್ವಹಣೆ ಮತ್ತು ಸೌಲಭ್ಯ ಹೆಚ್ಚಿಸಲು ಈ ಶುಲ್ಕದ ಅಗತ್ಯವಿದೆ. ರಾಜ್ಯದಲ್ಲೂ ಈ ಶುಲ್ಕಕ್ಕೆ ಸರ್ಕಾರ ಅನುಮತಿ ನೀಡಬೇಕು. ಡಿಜಿಟಲ್‌ ಚಾರ್ಜ್‌ಸ್‌ ಪ್ರತಿ ಸಿನಿಮಾಕ್ಕೆ ಪ್ರತಿ ವಾರಕ್ಕೆ10 ಸಾವಿರ ರೂ. ಶುಲ್ಕ ಞವನ್ನು ನಿರ್ಮಾಪಕರೇ ಭರಿಸುವುದುನ್ನು ಮುಂದುವರೆಸಬೇಕು ಎಂಬುದು ಪ್ರದರ್ಶಕರ ಮತ್ತೂಂದು ಬೇಡಿಕೆಯಾಗಿದೆ.

ಈ ಎಲ್ಲಾ ಬೇಡಿಕೆ ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಜಿಲ್ಲೆಯಲ್ಲಿ ಚಿತ್ರ ಪ್ರದರ್ಶನ ಆರಂಭ ತಡವಾಗಲಿದೆ.

ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುವುದುಕಡಿಮೆಯಾಗಿದೆ. ಪ್ರದರ್ಶನ ಶುಲ್ಕ ಸಂಗ್ರಹಕುಸಿಯುತ್ತಿದೆ. ಆದರೆ ಪ್ರದರ್ಶಕರು ಹಣ ಕೊಟ್ಟರೆ ಮಾತ್ರ ಚಿತ್ರಕೊಡ್ತೀವಿ ಎಂದು ಚಿತ್ರ ನಿರ್ಮಾಕರು ಹೇಳುತ್ತಿದ್ದಾರೆ. ಪ್ರದರ್ಶಕರು ಲಾಭ ಮಾಡಿಕೊಳ್ಳುವುದು ಹಾಗಿರಲಿ, ನಾವುಕೊಟ್ಟ ಹಣ ವಾಪಸ್‌ ಪಡೆಯಲು ಸಹ ಸಾಧ್ಯವಾಗುತ್ತಿಲ್ಲ. ಜಿ.ಸುರೇಂದ್ರನಾಥ, ರಾಮನಗರ ಶ್ರೀರಾಮ ಚಿತ್ರ ಮಂದಿರ ಮಾಲೀಕರು

 

ಬಿ.ವಿ.ಸೂರ್ಯಪ್ರಕಾಶ್

Advertisement

Udayavani is now on Telegram. Click here to join our channel and stay updated with the latest news.

Next