Advertisement

ರಂಜಾನ್‌, ವೀಕೆಂಡ್‌ಗಾಗಿ ಹೆಚ್ಚುವರಿ ಬಸ್‌

11:10 AM Jun 24, 2017 | Team Udayavani |

ಬೆಂಗಳೂರು: ರಂಜಾನ್‌ ಹಬ್ಬ ಮತ್ತು ವಾರಾಂತ್ಯದ ಹಿನ್ನೆಲೆಯಲ್ಲಿ ಸಾಲು ಸಾಲು ರಜೆ ಇರುವುದರಿಂದ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ವು ಪ್ರಯಾಣಿಕರ ಅನುಕೂಲಕ್ಕಾಗಿ ಜೂನ್‌ 24 ಮತ್ತು 26ರಂದು ಬೆಂಗಳೂರಿನಿಂದ ನಾನಾ ಭಾಗಗಳಿಗೆ ಹೋಗುವ ಮತ್ತು ಬೇರೆ ಕಡೆಗಳಿಂದ ಬೆಂಗಳೂರಿಗೆ ಬರುವವರಿಗೆ 450ರಿಂದ 500 ಹೆಚ್ಚುವರಿ ಬಸ್‌ ವ್ಯವಸ್ಥೆ ಕಲ್ಪಿಸಿದೆ. 

Advertisement

ಕೆಂಪೇಗೌಡ ಬಸ್‌ ನಿಲ್ದಾಣ, ಮೈಸೂರು ರಸ್ತೆ, ಶಾಂತಿನಗರ ಬಿಎಂಟಿಸಿ ಬಸ್‌ ನಿಲ್ದಾಣ, ಜಯನಗರ, ಜೆ.ಪಿ. ನಗರ, ಜಯನಗರ 4ನೇ ಬ್ಲಾಕ್‌ ಮತ್ತು 9ನೇ ಬ್ಲಾಕ್‌, ಜಾಲಹಳ್ಳಿ ಕ್ರಾಸ್‌, ನವರಂಗ್‌ (ರಾಜಾಜಿನಗರ), ಮಲ್ಲೇಶ್ವರ 18ನೇ ಅಡ್ಡರಸ್ತೆ, ಕೆಂಗೇರಿ ಉಪನಗರ, ಬಸವೇಶ್ವರ ಬಸ್‌ ನಿಲ್ದಾಣ (ಪೀಣ್ಯ) ಸೇರಿದಂತೆ ನಗರದ ವಿವಿಧೆಡೆಯಿಂದ ಪ್ರಯಾಣಿಕರ ಒತ್ತಡಕ್ಕೆ ಅನುಗುಣವಾಗಿ ಬಸ್‌ಗಳು ಕಾರ್ಯಾಚರಣೆ ಮಾಡಲಿವೆ. 

ನಾಲ್ಕು ಅಥವಾ ನಾಲ್ಕಕ್ಕಿಂತ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡವಾಗಿ ಕಾಯ್ದಿರಿಸಿದರೆ, ಪ್ರಯಾಣದಲ್ಲಿ ಶೇ. 5ರಷ್ಟು ಮತ್ತು ಹೋಗುವ-ಬರುವ ಪ್ರಯಾಣದ ಟಿಕೆಟ್‌ಗಳನ್ನು ಒಟ್ಟಿಗೆ ಕಾಯ್ದಿರಿಸದರೆ, ಶೇ. 10ರಷ್ಟು ರಿಯಾಯ್ತಿ ದೊರೆಯಲಿದೆ. ಟಿಕೆಟ್‌ ಕಾಯ್ದಿರಿಸಲು ನಗರದಲ್ಲಿ 171, ಮೈಸೂರಿನಲ್ಲಿ 17, ಮಂಗಳೂರಿನಲ್ಲಿ 35 ಸೇರಿದಂತೆ ವಿವಿಧೆಡೆ 230 ಗಣಕೀಕೃತ ಬುಕಿಂಗ್‌ ಕೌಂಟರ್‌ಗಳನ್ನು ತೆರೆಯಲಾಗಿದೆ.  

ಕೆಎಸ್‌ಆರ್‌ಟಿಸಿ ವೆಬ್‌ಸೈಟ್‌ www.ksrtc.in ಮೂಲಕ ಇ-ಟಿಕೆಟ್‌ ಬುಕಿಂಗ್‌ ಕೂಡ ಮಾಡಬಹುದು. ಮಾಹಿತಿಗೆ 080-49596666 ಸಂಪರ್ಕಿಸಬಹುದು ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next