Advertisement

ರಾಮಲಿಂಗಾ ರೆಡ್ಡಿಗೆ ಸಚಿವ ಸ್ಥಾನ ಇಲ್ಲ ; ಪುತ್ರಿ ತೀವ್ರ ಅಸಮಾಧಾನ 

10:00 AM Dec 22, 2018 | |

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗೂ ಮುನ್ನ ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳಾಗಿದ್ದವರ ಅಸಮಾಧಾನ ಭುಗಿಲೆದ್ದಿದೆ. ಹಿರಿಯ ಶಾಸಕ ರಾಮಲಿಂಗಾ ರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡದೇ ಇದ್ದುದಕ್ಕೆ  ಪುತ್ರಿ ಸೌಮ್ಯ ರೆಡ್ಡಿ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.

Advertisement

ಟ್ವೀಟರ್‌ನಲ್ಲಿ ಪತ್ರವೊಂದನ್ನು ಪೋಸ್ಟ್‌ ಮಾಡಿರುವ ಜಯನಗರ ಕ್ಷೇತ್ರದ ಶಾಸಕಿ ಸೌಮ್ಯ ರೆಡ್ಡಿ ಕಾಂಗ್ರೆಸ್‌ ಪಕ್ಷ ನನಗೆ ಜಯನಗರ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಗೆ ಟಿಕೆಟ್‌ ನೀಡಿದ್ದು ಮತದಾರರು ನನಗೆ ಆಶೀರ್ವದಿಸಿದ್ದಾರೆ. ಜಯನರ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿ ಪಡಿಸಬೇಕಾಗಿದೆ.  ನನಗೀಗ ಯಾವ ರೀತಿಯ ಪಾರ್ಲಿಮೆಂಟರಿ ಸಕ್ರೆಟರಿ ಹಾಗೂ ಯಾವುದೇ ರೀತಿಯ ಹುದ್ದೆ ಬೇಡ. 

ಸದ್ಯಕ್ಕೆ ಕಾಂಗ್ರೆಸ್‌ ಪಕ್ಷಕ್ಕೆ ದುಡಿದವರಿಗೆ ಸ್ವಲ್ಪ ಹಿಂದೇಟು ಆಗುವುದು ಖಂಡಿತ ಅದು ರಾಜಕೀಯದ ಒಂದು ಭಾಗ, ಆದರೆ ಈ ರೀತಿ ಪಕ್ಷಕ್ಕೆ ನಿಷ್ಠೆಯಾದವರಿಗೆ ಹಿಂದೇಟು ಆದರೆ ಬೇಸರವಾಗುತ್ತದೆ.

ನಾನು ಮೊದಲನೆ ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದೇನೆ ಇನ್ನೂ ನನ್ನ ಕ್ಷೇತ್ರದ ಹಲವಾರು ಕೆಲಸಗಳನ್ನು ಮಾಡಲು ನನಗೆ ಬಹಳ ಸಮಯ ಬೇಕಾಗಿದೆ. ನನಗೆ ಪಾರ್ಲಿಮೆಂಟ್‌ ಸಕ್ರೆಟರಿ ಸ್ಥಾನ ನೀಡಿರುವುದು ಸದ್ಯಕ್ಕೆ ಬೇಡ ಯಾರಿಗೆ ಅವಶ್ಯಕತೆ ಇದೆ ಅವರಿಗೆ ಕೊಡಿ.ನನಗೆ ನನ್ನ ಕ್ಷೇತ್ರದ ಜನರ ಋಣ ತೀರಿಸಬೇಕಾಗಿದೆ. ನನ್ನ ತಂದೆ 2 ಬಾರಿ ಡಿಸಿಸಿ ಅಧ್ಯಕ್ಷರಾಗಿ 7 ಬಾರಿ ಶಾಸಕರಾಗಿ ಬೆಂಗಳೂರಿನಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ದುಡಿದಿದ್ದಾರೆ.ಕೇವಲ 1 ಶಾಸಕರಿಂದ ಈಗ ಬೆಂಗಳೂರಿನಲ್ಲಿ ಹದಿನೈದಕ್ಕೂ ಹೆಚ್ಚು ಶಾಸಕರಿದ್ದಾರೆ. ನಾನು ಅವರನ್ನು ಮಂತ್ರಿಯಾಗಿ ನೋಡಲು ಇಷ್ಟಪಡುತ್ತೇನೆ. ಬೆಂಗಳೂರಿನ ಎಲ್ಲಾ 28 ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಶಾಸಕರು ಗೆಲ್ಲಲು ಶ್ರಮಿಸಬೇಕಾದ ಅಗತ್ಯ ಇದೆ . ಇಂತಿ ಸೌಮ್ಯ ರೆಡ್ಡಿ ಎಂದು ಬರೆದಿದ್ದಾರೆ. 

Advertisement

ರೊಚ್ಚಿಗೆದ್ದ ಬೆಂಬಲಿಗರು
ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರ ಬೆಂಬಲಿಗರು ತೀವ್ರ ಆಕ್ರೋಶಗೊಂಡಿದ್ದು, ಬೀದಿಗಿಳಿದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಬೆಳಗ್ಗೆ ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಲು ತೀರ್ಮಾನ ನಡೆಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next