Advertisement

ಕೋವಿಡ್ ತಡೆಗೆ ಲಸಿಕೆಯೇ ರಾಮಬಾಣ

05:33 PM Jan 06, 2022 | Team Udayavani |

ಇಳಕಲ್ಲ: ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಆರೋಗ್ಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಬಾಗಲಕೋಟೆ, ಇಳಕಲ್ಲ ತಹಶೀಲ್ದಾರ್‌ ಕಾರ್ಯಾಲಯ, ನಗರಸಭೆ, ಸಾರ್ವಜನಿಕ ಆಸ್ಪತ್ರೆ, ಬಿಇಒ ಕಾರ್ಯಾಲಯ ಹಾಗೂ ನಗರದ ಶ್ರೀ ವಿಜಯ ಮಾಹಾಂತೇಶ ಎಜ್ಯುಕೇಶನ್‌ ಸೊಸೈಟಿಯ ವಿಜಯ ಮಹಾಂತೇಶ ಪ್ರೌಢಶಾಲೆ ಸಹಯೋಗದಲ್ಲಿ 15ರಿಂದ 18 ವರ್ಷದ ಪ್ರೌಢಶಾಲಾ ಮಕ್ಕಳ ಲಸಿಕಾ ಅಭಿಯಾನ ಕಾರ್ಯಕ್ರಮದ ಉದ್ಘಾಟನೆ ಹಾಗೂ ಸಾವಿತ್ರಿಬಾಯಿ ಫುಲೆ ಜಯಂತಿ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

Advertisement

ತಹಶೀಲ್ದಾರ್‌ ಬಸವರಾಜ ಮೆಳವಂಕಿ ಮಾತನಾಡಿ, ಆರೋಗ್ಯದ ಮುಂಜಾಗ್ರತೆ ಕ್ರಮವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು. ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು. ಇಳಕಲ್ಲ ಸಾರ್ವಜನಿಕ ವೈದ್ಯಾಧಿಕಾರಿ ಡಾ| ನವೀನ ಬಿರಾದಾರ ಮಾತನಾಡಿದರು. ನಗರಸಭೆ ಅಧ್ಯಕ್ಷ ಮಂಜುನಾಥ ಶೆಟ್ಟರ್‌ ಕಾರ್ಯಕ್ರಮ ಉದ್ಘಾಟಿಸಿದರು.

ನಗರಸಭೆ ಉಪಾಧ್ಯಕ್ಷ ಗುರುದತ್ತಾತ್ರೇಯ ಗುಳೇದ, ಪೌರಾಯುಕ್ತ ರಾಮಕೃಷ್ಣ ಸಿದ್ದನಕೊಳ್ಳ, ಸಂಸ್ಥೆ ಕಾರ್ಯಾಧ್ಯಕ್ಷ ಶ್ರೀಕಾಂತ ಡಿ. ಹರಿಹರ, ಕಾರ್ಯದರ್ಶಿ ಶರಣಪ್ಪ ಚ. ಅಕ್ಕಿ, ಪ್ರಾಥಮಿಕ ವಿಭಾಗದ ಚೇರ್‌ಮನ್‌ ತಿಮ್ಮಣ್ಣ ಭೋಗಾಪುರ, ಐಕ್ಯೂಐಸಿ ಸಂಚಾಲಕ ಸಿ.ಪಿ. ಸಾಲಿಮಠ, ಮುಖ್ಯ ಗುರುಗಳಾದ ಶ್ರೀಮತಿ ಎ.ಎಸ್‌. ಮಠದ ಮತ್ತು ನಗರಸಭೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು. ಜಿ.ವಿ. ಭದ್ರಣ್ಣವರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಎಂ.ಬಿ . ಗಣಾಚಾರಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next