Advertisement

ಲಕ್ಷ್ಮಣ ಬೀಳಿಸಿದ ಬಾಣ ಹೊತ್ತ ರಾಮ

07:33 PM Feb 28, 2020 | Lakshmi GovindaRaj |

ಅರಸೀಕೆರೆ ಮೂಲಕ ಹಾದುಹೋಗುವ ಪ್ರತಿ ರೈಲಿನ ಪ್ರಯಾಣಿಕರಿಗೂ, “ಬಾಣಾವರ’ ಸ್ಟೇಷನ್‌ ಪರಿಚಿತ. ಇಲ್ಲಿನ ಬಾಣೇಶ್ವರ ದೇವಾಲಯದಿಂದ ಈ ಊರಿಗೆ “ಬಾಣಾವರ’ ಎಂದು ಹೆಸರು ಬಂತು. ರಾಮ- ಲಕ್ಷ್ಮಣರು ನಡೆದುಹೋಗುವಾಗ, ಲಕ್ಷ್ಮಣನು ಆಯಾಸದಿಂದ ಬಾಣಗಳನ್ನು ಹೊರಲಾರದೆ, ಇಲ್ಲಿ ಕೆಳಕ್ಕೆ ಇಟ್ಟನಂತೆ.

Advertisement

ಹಾಗೆ ಬಿದ್ದ ಬಾಣಗಳನ್ನು ರಾಮ, ಎತ್ತಿಕೊಂಡ ಕಾರಣ “ಬಾಣಹೊರು’ ಅಥವಾ “ಬಾಣಾವರ’ ಎಂಬ ಹೆಸರು ಬಂತು ಎನ್ನುವುದು ಪುರಾಣಗನ್ನಡಿಯಲ್ಲಿ ಕಾಣುವ ಕತೆ. ಬಾಣ ದೊರೆಗಳಿಗೂ, ಈ ಊರಿಗೂ ಏನೋ ಸಂಬಂಧವಿತ್ತು ಎಂಬ ಅಭಿಪ್ರಾಯವೂ ಇದೆ. 11ನೇ ಶತಮಾನದಲ್ಲಿ ಈ ಊರನ್ನು ಹರಿಹರ ಸೋಮೇಶ್ವರ ರಾಯ ಆಳುತ್ತಿದ್ದನಂತೆ. ನಂತರ ಈ ಪಟ್ಟಣ ಹೊಯ್ಸಳರ ರಾಜ್ಯಕ್ಕೆ ಸೇರಿ, ವ್ಯಾಪಾರ ಕೇಂದ್ರವಾಗಿತ್ತು ಎಂದೂ ಹೇಳಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next