Advertisement
ಇದು ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಂ ರಹೀಂ ಸಿಂಗ್‌ನ ಮೊದಲ ದಿನದ ಜೈಲುವಾಸದ ದಿನಚರಿ. ಜೈಲು ಶಿಕ್ಷೆ ಘೋಷಣೆಯಾದ ಬಳಿಕ ರಾಂ ರಹೀಂನನ್ನು ರೋಹrಕ್‌ನ ಸುನೈರಾ ಜೈಲಿನಲ್ಲಿರಿಸಲಾಗಿದೆ. ಸೋಮವಾರ ಶಿಕ್ಷೆ ಘೋಷಣೆ ವೇಳೆ ಹೈಡ್ರಾಮಾ ಮಾಡಿದ್ದ ರಾಂ ರಹೀಂ ರಾತ್ರಿ ಊಟವನ್ನೂ ಮಾ ಡದೇ ನಿದ್ರೆಗೆ ಜಾರಿದರು ಎಂದು ಜೈಲಿನ ಮೂಲ ಗಳು ತಿಳಿಸಿವೆ. ಬೆಳಗ್ಗೆದ್ದು ಒಂದು ಲೋಟ ಹಾಲು ಕುಡಿದಿದ್ದು ಬಿಟ್ಟರೆ, ಯಾರೊಂ ದಿಗೂ ಮಾತುಕತೆ ನಡೆಸದೇ ಜೈಲು ಕೊಠಡಿ ಯೊಳಗೇ ಚಿಂತಾಮಗ್ನ ನಾಗಿ ಅತ್ತಿತ್ತ ಚಲಿಸುತ್ತಿದ್ದ ಎನ್ನಲಾಗಿದೆ.
ಮತ್ತೂಬ್ಬ ಸ್ವಘೋಷಿತ ದೇವ ಮಾನವ ರಾಂಪಾಲ್‌ನನ್ನು 2 ಕ್ರಿಮಿನಲ್ ಕೇಸುಗಳಲ್ಲಿ ಹಿಸಾರ್‌ನ ಕೋರ್ಟ್ ಮಂಗಳವಾರ ಖುಲಾಸೆಗೊಳಿಸಿದೆ. ಬರ್ವಾಲಾದ ರಾಂಪಾಲ್ ವಿರುದ್ಧ ಗಲಭೆ, ಕಾನೂನು ಬಾಹಿರವಾಗಿ ಜನ ಸೇರಿಸಿದ, ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಗಳಿದ್ದವು. ಸಾಕ್ಷ್ಯ ಕೊರತೆ ಹಿನ್ನೆಲೆಯಲ್ಲಿ ಆತ ಮುಕ್ತನಾಗಿದ್ದಾನೆ. ಆದರೆ, ಆತನ ವಿರುದ್ಧದ ಕೊಲೆ ಪ್ರಕರಣದ ತೀರ್ಪು ಇನ್ನೂ ಪ್ರಕಟವಾಗದ ಕಾರಣ, ಸದ್ಯಕ್ಕೆ ಜೈಲಿನಲ್ಲೇ ಇರಬೇಕಾಗಿದೆ.
Related Articles
ಹಲವಾರು ಮಹಿಳಾ ಭಕ್ತರು ರಾಂ ರಹೀಂನಿಂದ ಲೈಂಗಿಕ ಶೋಷಣೆಗೆ ಒಳಗಾಗಿದ್ದಾರೆ. ಆದರೆ, ಸಮಾಜಕ್ಕೆ ಹೆದರಿ ಅವರು ಎಲ್ಲವನ್ನೂ ಮುಚ್ಚಿಡುತ್ತಿದ್ದಾರೆ ಎಂದು ಕಾನೂನು ಹೋರಾಟದಲ್ಲಿ ಗೆದ್ದ ಸಂತ್ರಸ್ತೆ ಹೇಳಿದ್ದಾರೆ. 15 ವರ್ಷಗಳ ಕಾಲ ನಾನು ಮತ್ತು ನಮ್ಮ ಕುಟುಂಬ ಹಲವು ಬೆದರಿಕೆಗಳು, ಮಾನಸಿಕ ಒತ್ತಡಕ್ಕೆ ಗುರಿಯಾಗಬೇಕಾಯಿತು. ನನ್ನ ಸಹೋದರನನ್ನೂ ಬಾಬಾ ಬೆಂಬಲಿಗರು ಗುಂಡಿಟ್ಟು ಹತ್ಯೆಗೈದರು. ಆ ಪ್ರಕರಣದಲ್ಲೂ ನಾವು ನ್ಯಾಯಕ್ಕಾಗಿ ಕಾಯುತ್ತಿದ್ದೇವೆ ಎಂದಿದ್ದಾರೆ. ನಮ್ಮ ಕುಟುಂಬ 40 ವರ್ಷಗಳಿಂದ ಡೇರಾ ಜತೆ ಸಂಪರ್ಕದಲ್ಲಿತ್ತು. ಅಲ್ಲಿನ ಶಾಲೆಯಲ್ಲಿ ನಾನು ಶಿಕ್ಷಕಿಯಾಗಿದ್ದೆ. ಬಾಬಾ ವಾಸಿಸುತ್ತಿದ್ದ ಗುಫಾ(ಗುಹೆ)ದ ಹೊರಗೆ ಅಮಾಯಕ ಹೆಣ್ಣುಮಕ್ಕಳನ್ನು ನಿಯೋಜಿಸಲಾಗುತ್ತಿತ್ತು. ಅವರನ್ನು ಗುಹೆಯೊಳಗೆ ಕರೆದು ಅತ್ಯಾಚಾರ ಮಾಡಲಾಗುತ್ತಿತ್ತು. ಹೊರಗೆ ಬರುವಾಗ ಎಲ್ಲರೂ ಅಳುತ್ತಾ ಬರುತ್ತಿದ್ದರು. ಒಂದು ದಿನ ಬಾಬಾನ ಕಣ್ಣು ನನ್ನ ಮೇಲೂ ಬಿತ್ತು. ನನ್ನ ಮೇಲೂ ಆತ ಅತ್ಯಾಚಾರ ಎಸಗಿದ. ಈ ವಿಚಾರವನ್ನು ಮನೆಯವರಿಗೆ ತಿಳಿಸಿದೆ. ನಂತರ ನಮ್ಮ ಕುಟುಂಬ ಡೇರಾವನ್ನು ಬಿಟ್ಟು ಬೇರೆಡೆ ಹೋಗಿ ನೆಲೆಸಿತು ಎಂದಿದ್ದಾರೆ ಸಂತ್ರಸ್ತ ಮಹಿಳೆ.
Advertisement