ಚಿಕ್ಕಮಗಳೂರು: ”ದೇವರ ಕಾರ್ಯಕ್ರಮಕ್ಕೆ ಆಮಂತ್ರಣ, ಗೀಮಂತ್ರಣ ಬೇಡ ಆದರೆ, ಅಲ್ಲಿ ಜಗದ್ಗುರು ಇಲ್ಲ, ಇರುವುದು ವಿಶ್ವಗುರು” ಎಂದು ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಭಾನುವಾರ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ,’ಶಂಕರಾಚಾರ್ಯರು ಹಿಂದೂ ಧರ್ಮದ ಮುಖ್ಯಸ್ಥರು ಎಂದು ಹೇಳಿಕೊಂಡಿದ್ದಾರೆ. ಶಂಕರರು ಪ್ರಾಣ ಪ್ರತಿಷ್ಠಾನೆ ಕಾರ್ಯಕ್ರಮ ಮಾಡಿದರೆ ಧಾರ್ಮಿಕ ಕಾರ್ಯಕ್ರಮ, ಶಂಕರಾಚಾರ್ಯರು ಹೋಗಿಲ್ಲ, ಅಲ್ಲಿಗೆ ಹೋಗೊರೋದು ವಿಶ್ವ ಗುರುವೇ ಹೊರತು ಜಗದ್ಗುರು ಅಲ್ಲ. ವಿಶ್ವಗುರು ಏನೆಂದು ದೇಶಕ್ಕೆ ಗೊತ್ತು” ಎಂದು ವ್ಯಂಗ್ಯವಾಡಿದರು.
”ನಾಲ್ಕು ಶಂಕರಾಚಾರ್ಯರಲ್ಲಿ ಇಬ್ಬರು ವಿರುದ್ಧ, ಇಬ್ಬರು ತಟಸ್ಥ , ಅದು ಬಿಜೆಪಿಯ ವಿಶ್ವಗುರು ನಡೆಸುತ್ತಿರುವ ಕಾರ್ಯಕ್ರಮ. ಆಮಂತ್ರಣ ಕೊಡಲು ಇವರ್ಯಾರು? ರಾಮ ಫೋನ್ ಮಾಡಿ ಹೇಳಿದ್ದಾನಾ?, ಶಂಕರಾಚಾರ್ಯರು ಮಾಡಿದ್ದರೇ ನಮಗೆ ಆಮಂತ್ರಣ ಬೇಡವಾಗಿತ್ತು. ದೇಶದಲ್ಲಿ 33ಕೋಟಿ ದೇವರಿದ್ದು, ಎಲ್ಲಾದರೂ ಹೋಗುತ್ತೇವೆ. ದೇವರ ಬಳಿ ಹೋಗಬೇಕು, ಇಂತಹ ದೇವರ ಬಳಿ ಹೋಗಬೇಕು ಎಂದೆನಿಲ್ಲ. ನಾವು ಭೂತ, ದೆವ್ವ, ಪೂಜೆ ಮಾಡುವವರು ಭೂತದ ಬಳಿ ಹೋಗುತ್ತೇವೆ” ಎಂದರು.
”ನಾನು ಅಧಿಕಾರಕ್ಕಾಗಿ ಬಂದ ವಲಸೆ ಪ್ರಾಣಿ ಅಲ್ಲ, ಅಧಿಕಾರಕ್ಕಾಗಿ ಬೇರೆ ಬೇರೆ ಪಕ್ಷಗಳನ್ನು ಬದಲಾವಣೆ ಮಾಡುವವನಲ್ಲ, ಕೆಲವರು ಕಾಂಗ್ರೆಸ್ ನಮ್ಮದು ಅಂತಿದ್ದಾರೆ. ಅದಕ್ಕೆ ನಮ್ಮ ಅಸಮಾಧಾನ. ಸಮಾಧಾನ ಅಸಮಾಧಾನ ತಿಳಿದುಕೊಂಡವರಿಗೆ ಗೊತ್ತಾಗುತ್ತದೆ. ಸಿಎಂ ಮೇಲೆ ಯಾಕೆ ಸಿಟ್ಟಾಗುವುದು, ನಾನೇಕೆ ಕಾಂಗ್ರೆಸ್ ಮೇಲೆ ಅಸಮಾಧಾನ ಹೊರಹಾಕುವುದು, ನಾನು ವಿದ್ಯಾರ್ಥಿಯಾದಾಗಿನಿಂದ ಕಾಂಗ್ರೆಸ್ ನಲ್ಲಿ ಇದ್ದೇನೆ” ಎಂದರು.
”ನಿಗಮ ಮಂಡಳಿ ನೇಮಕ ವಿಚಾರದ ಕುರಿತು ಪ್ರತಿಕ್ರಿಯಿಸಿ, ನೀವು ಸರಕಾರವನ್ನು ಕೇಳಬೇಕು, ನಾನು ಸರಕಾರವಲ್ಲ, ನಾನು ಹೊರಗೆ ಇದ್ದೇನೆ. ಯಾವ ಮಾನದಂಡ ದಲ್ಲಿ ನಿಗಮ ಮಂಡಳಿಗೆ ನೇಮಕ ಮಾಡಿದ್ದಾರೆ ಅವರನ್ನೇ ಕೆಳಬೇಕು. ನನಗೆ ಗೊತ್ತಿಲ್ಲ” ಎಂದರು.