ತೆಲಂಗಾಣ : ಮೆಗಾ ಸ್ಟಾರ್ ಚಿರಂಜೀವಿ ನಟಿಸುತ್ತಿರುವ ಆಚಾರ್ಯ ಸಿನಿಮಾದಲ್ಲಿ ರಾಮ ಚರಣ್ ನಟಿಸುತ್ತಿರುವುದು ಸಿನಿ ರಸಿಕರಿಗೆ ಗೊತ್ತಿರುವ ವಿಚಾರ.ಇದೀಗ ಈ ಸಿನಿಮಾದಲ್ಲಿ ಅವರ ಪಾತ್ರವೇನೂ ಎಂಬುದು ರಿವೀಲ್ ಆಗಿದೆ.
ಹೌದು, ರಾಮ್ ಚರಣ ನಟಿಸುತ್ತಿರುವ , ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಗಳಿವೆ. ಅದರ ಜೊತೆಗೆ ಚಿರಂಜೀವಿ ಜೊತೆಗೆ ನಟಿಸುತ್ತಿರೋ ಆಚಾರ್ಯ ಸಿನಿಮಾದ ಬಗ್ಗೆಯೂ ಭಾರೀ ನಿರೀಕ್ಷೆಗಳಿವೆ. ಈ ಮಧ್ಯೆ ಆಚಾರ್ಯ ಸಿನಿಮಾದಲ್ಲಿ ರಾಮ್ ಚರಣ್ ಅವರದು ಯಾವ ಪಾತ್ರ ಇರಬಹುದು ಎಂಬ ಕುತೂಹಲ ಎಲ್ಲರಲ್ಲಿಯೂ ಇತ್ತು. ಇದೀಗ ಅದಕ್ಕೆ ಉತ್ತರ ಸಿಕ್ಕಿದ್ದು, ರಾಮ್ ಚರಣ್ ಲುಕ್ ರಿವೀಲ್ ಆಗಿದೆ.
ಮೆಗಾ ಸ್ಟಾರ್ ಚಿರಂಜೀವಿಯದ್ದು ಈ ಸಿನಿಮಾದಲ್ಲಿ ಮುಖ್ಯ ಪಾತ್ರ. ತಂದೆ ಜೊತೆಗೆ ಮಗ ರಾಮ್ ಚರಣ್ ಕೂಡ ಒಂದು ರೋಲ್ ಮಾಡಿದ್ದಾರೆ. ರಾಮ್ ಚರಣ್ ಈ ಸಿನಿಮಾದಲ್ಲಿ ಹೆಚ್ಚು ಸಮಯದವರೆಗೂ ಬರೋದಿಲ್ಲವಂತೆ. ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಆಚಾರ್ಯ ಸಿನಿಮಾವನ್ನ ಕೊರಟಾಲ ಶಿವ ನಿರ್ದೇಶನ ಮಾಡುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಷ್ಟೋತ್ತಿಗೆ ಸಿನಿಮಾ ತೆರೆಗೆ ಬರಬೇಕಾಗಿತ್ತು. ಆದ್ರೆ ಈ ಕೋವಿಡ್ ಮಹಾಮಾರಿ ಎಲ್ಲವನ್ನ ಹಾಳುಗೆಡವಿದೆ. ರಿಲೀಸ್ ಆಗ್ಬೇಕಿದ್ದ ಸ್ಟಾರ್ ಸಿನಿಮಾಗಳೆಲ್ಲಾ ಹಾಗೆ ನಿಂತು ಬಿಟ್ಟಿವೆ. ಇದೀಗ ಎಲ್ಲಾ ಒಂದು ತಹಬದಿಗೆ ಬರುತ್ತಿದ್ದು, ಅಭಿಮಾನಿಗಳ ನಿರೀಕ್ಷೆ ಕೂಡ ಹೆಚ್ಚಾಗಿದೆ.