“ಚಿತ್ರದಲ್ಲಿರುವ ಸಂದೇಶ ಎಲ್ಲರ ಮನಮುಟ್ಟುವುದರಲ್ಲಿ ಯಾವುದೇ ಸಂದೇಹವಿಲ್ಲ…’ – ಹೀಗೆ ಹೇಳಿ ಸಣ್ಣಗೆ ನಗೆಬೀರಿದರು ರಕ್ಷಿತ್ ಶೆಟ್ಟಿ.
ಅವರು ಹೇಳಿದ್ದು, “777 ಚಾರ್ಲಿ’ ಚಿತ್ರದ ಬಗ್ಗೆ. ಇದು ರಕ್ಷಿತ್ ಶೆಟ್ಟಿ ಡ್ರೀಮ್ ಪ್ರಾಜೆಕ್ಟ್. ಜೂ.10 ರಂದು ತೆರೆಕಾಣುತ್ತಿರುವ ಈ ಚಿತ್ರ ಈಗಾಗಲೇ ಹಲವು ನಗರಗಳಲ್ಲಿ ಪ್ರೀಮಿಯರ್ ಶೋ ಕಂಡಿದೆ. ಸಿನಿಮಾ ನೋಡಿದವರು ಖುಷಿ ಪಟ್ಟಿದ್ದಾರೆ. ಇದು ರಕ್ಷಿತ್ ಶೆಟ್ಟಿ ಅವರ ವಿಶ್ವಾಸ ಹೆಚ್ಚಿಸಿದೆ.
“21 ಕಡೆಗಳಲ್ಲಿ ಪ್ರೀಮಿಯರ್ ಶೋ ಆಯೋಜಿಸಿದ್ದೆವು. ಒಂದೊಂದು ಕಡೆಗಳಲ್ಲೂ 300ಕ್ಕೂ ಹೆಚ್ಚು ಮಂದಿ ಸಿನಿಮಾ ನೋಡಿದ್ದಾರೆ. ಸಿನಿಮಾ ನೋಡಿದವರು ಕ್ಲೈಮ್ಯಾಕ್ಸ್‌ನಲ್ಲಿ ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ. ಯಾವತ್ತೂ ಸಿನಿಮಾದ ಕಂಟೆಂಟ್ ಮಾತನಾಡಬೇಕು ಎಂದು ನಂಬಿದವನು ನಾನು. ಚಾರ್ಲಿಯಲ್ಲಿ ಅದಾಗುತ್ತಿದೆ. ಚಿತ್ರದಲ್ಲೊಂದು ಮೆಸೇಜ್ ಇದೆ. ಈ ಸಿನಿಮಾ ನೋಡಿದ ನಂತರ ಅನೇಕರು ತಮ್ಮ ನಿರ್ಧಾರ ಬದಲಿಸಿ, ಪ್ರಾಣಿಗಳಿಗೆ ಮತ್ತಷ್ಟು ಹತ್ತಿರವಾಗುತ್ತಾರೆ’ ಎನ್ನುವುದು ರಕ್ಷಿತ್ ಮಾತು.
“777 ಚಾರ್ಲಿ’ ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡದ ಜೊತೆಗೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ ತೆರೆಕಾಣುತ್ತಿದೆ. ಉತ್ತರ ಭಾರತದಾದ್ಯಂತ 350ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಪ್ರದರ್ಶನವಾದರೆ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ 100ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ತೆರೆಕಾಣಲಿದೆ. ಕರ್ನಾಟಕದಲ್ಲಿ 300ಕ್ಕೂ ಹೆಚ್ಚು ಚಿತ್ರಮಂದಿ ರಗಳಲ್ಲಿ ಚಿತ್ರ ತೆರೆಕಾಣಲಿದ್ದು, ವಿದೇಶದಿಂದಲೂ ಚಿತ್ರಕ್ಕೆ ಬೇಡಿಕೆ ಬಂದಿದೆ. “ಒಮ್ಮೆಲೇ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆ ಮಾಡುವ ಬದಲು ಪ್ರತಿಕ್ರಿಯೆ ನೋಡಿಕೊಂಡು ಸ್ಕ್ರೀನ್ ಹೆಚ್ಚು ಮಾಡುವ ಆಲೋಚನೆ ನಮ್ಮದು’ ಎನ್ನುತ್ತಾರೆ.
“777 ಚಾರ್ಲಿ’ ಸಿನಿಮಾದಲ್ಲಿ ನಟಿ ಸಂಗೀತಾ ಶೃಂಗೇರಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಐದು ವರ್ಷದ ಹಿಂದೆ ಆಡಿಷನ್ ಮೂಲಕ “777 ಚಾರ್ಲಿ’ಗೆ ನಾಯಕಿಯಾಗಿ ಆಯ್ಕೆಯಾದ ಸಂಗೀತಾ, ಸಿನಿಮಾದಲ್ಲಿ ದೇವಿಕಾ ಎಂಬ ಹೆಸರಿನ ಆ್ಯನಿಮಲ್ ವೆಲ್‌ಫೇರ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. “777 ಚಾರ್ಲಿ’ ಸಿನಿಮಾ ಮತ್ತು ತಮ್ಮ ಪಾತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ:ಹೊರಬಂತು ‘ವಿಂಡೋಸೀಟ್’ ಟ್ರೇಲರ್: ಸಾಥ್ ನೀಡಿದ ಕಿಚ್ಚ ಸುದೀಪ್
“ಸಿನಿಮಾದಲ್ಲಿ ನನ್ನದು ದೇವಿಕಾ ಎಂಬ ಆ್ಯನಿಮಲ್ ವೆಲ್‌ಫೇರ್ ಆμàಸರ್ ಪಾತ್ರ. ನಾಯಕ ಧರ್ಮ (ರಕ್ಷಿತ್ ಶೆಟ್ಟಿ) ಮತ್ತು “ಚಾರ್ಲಿ’ (ನಾಯಿ)ಯ ಜೊತೆಗೆ ನನ್ನ ಪಾತ್ರ ಕೂಡ ಸಾಗುತ್ತದೆ. ಮೈಸೂರಿನಿಂದ ಶುರುವಾಗಿ ಗುಜರಾತ್, ರಾಜಸ್ಥಾನದವರೆಗೂ ನನ್ನ ಕ್ಯಾರೆಕ್ಟರ್ ಟ್ರಾವೆಲ್ ಆಗುತ್ತದೆ. ಇಡೀ ಸಿನಿಮಾದ ಜರ್ನಿಯೇ ತುಂಬ ವಂಡರ್‌ಫುಲ್ ಆಗಿತ್ತು. ಸಾಮಾನ್ಯವಾಗಿ ಸಿನಿಮಾ ಒಪ್ಪಿಕೊಂಡು 6 ತಿಂಗಳು ಅಥವಾ ವರ್ಷದೊಳಗೆ ಆ ಸಿನಿಮಾದ ಕಮಿಟ್‌ಮೆಂಟ್‌ನಿಂದ ಎಲ್ಲರೂ ಹೊರಗೆ ಬರುತ್ತಾರೆ. ಆದರೆ ನನ್ನದು “ಚಾರ್ಲಿ’ ಸಿನಿಮಾದ ಜೊತೆ ನಾಲ್ಕೈದು ವರ್ಷದ ಜರ್ನಿ’ ಎನ್ನು ತ್ತಾರೆ. ಈ ಚಿತ್ರವನ್ನು ಕಿರಣ್ ರಾಜ್ ನಿರ್ದೇಶಿಸಿದ್ದಾರೆ.