Advertisement
ಸರಿಗಮಪ ಇಂಡಿಯಾ ಸಂಸ್ಥೆ ನ.1ರಂದು ಕನ್ನಡ ರಾಜ್ಯೋತ್ಸವ ಆಚರಣೆಯನ್ನು ವಿಶಿಷ್ಟ ಹಾಗೂ ವಿಭಿನ್ನವಾಗಿ ಆಚರಿಸಲು ಮುಂದಾಗಿದ್ದು, “ದೂರದಿಂದ ಬಂದಂತ ಸುಂದರಾಂಗ ಜಾಣ’ ಆಡಿಯೋ-ವೀಡಿಯೋ ರೆಟ್ರೊರೀ ಮಿಕ್ಸಿ ಅನಾವರಣಕ್ಕೆ ಸಜ್ಜಾಗಿದೆ. ಈ ಆಡಿಯೋ ವೀಡಿಯೋ ಮೂಲಕ ಫಿಟ್‌ನೆಸ್ ಎಕ್ಸ್‌ಫರ್ಟ್ ವನಿತಾ ಅಶೋಕ್ ಕನ್ನಡಿಗರಲ್ಲಿ ಕನ್ನಡ ಜಾಗೃತಿ ಮೂಡಿಸಲು ಹೊರಟಿದ್ದಾರೆ.
Related Articles
Advertisement
ವಿವಿಧ ಕಾರ್ಯಕ್ರಮಗಳು: ರಾಜ್ಯೋತ್ಸವ ಅಂಗವಾಗಿ ಬಸವನಗುಡಿಯ ಕಹಳೆ ಬಂಡೆ ಉದ್ಯಾನದಲ್ಲಿ ಡಿವಿಜಿ ಪುತ್ಥಳಿಗೆ ಮಾಲಾರ್ಪಣೆ, ಗೀತ ಗಾಯನ ಮತ್ತು ನುಡಿನಮನ ನಡೆಯಲಿದೆ. 62ನೇ ರಾಜ್ಯೋತ್ಸವ ಸಮಾರಂಭದ ಪ್ರಯುಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸಂತೋಷ ಕೂಟ ಏರ್ಪಡಿಸಿದ್ದಾರೆ.
ಅಂಚೆ ಕಚೇರಿಯಿಂದ ಜಿಪಿಒ ಕಟ್ಟಡದಲ್ಲಿ ಬೆಳಗ್ಗೆ 11ಕ್ಕೆ ಕವಿ ಮುದ್ದಣ, ಆದಿಕವಿ ನನ್ನಯ ಮತ್ತು ದ್ರಾಕ್ಷಾರಾಮಂ ಭಿಮೇಶ್ವರ ದೇವಸ್ಥಾನದ ಅಂಚೆ ಚೀಟಿ ಬಿಡುಗಡೆ ಮಾಡಲಾಗುತ್ತಿದೆ. ಕರುನಾಡ ಗೆಳೆಯರು ಸಂಸ್ಥೆಯಿಂದ ರಾಜ್ಯೋತ್ಸವ ಅಂಗವಾಗಿ ಚಿತ್ರಕಲಾ ಪ್ರದರ್ಶನ ಹಾಗೂ ಜನರಿಗೆ ಕನ್ನಡ ಪುಸ್ತಕದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕನ್ನಡ ಪುಸ್ತಕಗಳ ಪ್ರದರ್ಶನವಿದೆ.
ಜತೆಗೆ ವಾಹನಗಳಿಗೆ ಉಚಿತವಾಗಿ ಕರ್ನಾಟಕದ ನಕ್ಷೆಯನ್ನು ಅಂಟಿಸುವ ಸಮಾರಂಭವೂ ನಡೆಯಲಿದೆ. ಉದಯಭಾನು ಕಲಾಸಂಘದಿಂದ ಬೆಳಗ್ಗೆ 9ಕ್ಕೆ ಕನ್ನಡ ಧ್ವಜಾರೋಹಣ ಸಹಿತ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಇದೆ. ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ಕಚೇರಿ ಸೇರಿದಂತೆ 28 ವಿಧಾನಸಭಾ ಕ್ಷೇತ್ರಗಳ ಕಸಾಪ ಘಟಕಗಳಲ್ಲಿ ಕನ್ನಡ ಧ್ವಜಾರೋಹಣ ಮತ್ತು ವಿವಿಧ ಕಾರ್ಯಕ್ರಮ, ಸಿಹಿ ವಿತರಣೆ ಆಯೋಜಿಸಲಾಗಿದೆ.