ಪಾಟ್ನಾ/ಹೊಸದಿಲ್ಲಿ: ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರಿಗೆ ಬಿಜೆಪಿ ರಾಜ್ಯಸಭಾ ಟಿಕೆಟ್ ನೀಡಿದೆ. ರಾಜ್ಯಸಭೆಗೆ ಉಪಚುನಾವಣೆ ನಡೆಯಲಿದ್ದು, ಸುಶೀಲ್ ಕುಮಾರ್ ಮೋದಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಡಿಸೆಂಬರ್ 14ರಂದು ಈ ಚುನಾವಣೆ ನಡೆಯಲಿದೆ. ಆರ್ ಜೆಡಿ ಪಕ್ಷ ತನ್ನ ಉಮೇದುವಾರಿಕೆ ತೋರಿದರೆ ಮಾತ್ರ ಚುನಾವಣೆ ನಡೆಯಲಿದೆ. ಇಲ್ಲವಾದರೆ ಅವಿರೋಧವಾಗಿ ಸುಶೀಲ್ ಮೋದಿ ರಾಜ್ಯಸಭೆ ಪ್ರವೇಶಿಸಲಿದ್ದಾರೆ.
ಈ ಹಿಂದೆ ನಿತೀಶ್ ಕುಮಾರ್ ಸರ್ಕಾರದಲ್ಲಿ ಸುಶೀಲ್ ಮೋದಿ ಉಪಮುಖ್ಯಮಂತ್ರಿಯಾಗಿದ್ದರು. ಆದರೆ ಈ ಬಾರಿ ತಾರಕಿಶೋರ್ ಅವರನ್ನು ಡಿಸಿಎಂ ಆಗಿ ಬಿಜೆಪಿ ನೇಮಿಸಿತ್ತು. ಈ ವೇಳೆ ಸುಶೀಲ್ ಮೋದಿ ಅವರಿಗೆ ದೆಹಲಿ ಮಟ್ಟದ ಸ್ಥಾನಮಾನ ನೀಡುವುದಾಗಿ ಬಿಜೆಪಿ ಭರವಸೆ ನೀಡಿತ್ತು.
ಇದನ್ನೂ ಓದಿ:ಬಿಜೆಪಿ ವಲಸಿಗ ಶಾಸಕರಲ್ಲೇ ಭಿನ್ನರಾಗ: ತಡರಾತ್ರಿ ಮೀಟಿಂಗ್, ‘ನಾಯಕ’ರ ವಿರುದ್ಧ ಆಕ್ರೋಶ
ಕೇಂದ್ರ ಸಚಿವರಾಗಿದ್ದ ಎಲ್ ಜೆಪಿ ನಾಯಕ ರಾಮ್ ವಿಲಾಸ್ ಪಾಸ್ವಾನ್ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ.