Advertisement

ಕಾಗೋಡು,ಚಿಂಚನಸೂರ್‌ ಯಡವಟ್ಟು; ರಾಜ್ಯಸಭೆ ವೋಟಿಂಗ್‌ ಕೆಲ ಕಾಲ ಸ್ಥಗಿತ

11:37 AM Mar 23, 2018 | |

ಬೆಂಗಳೂರು: ರಾಜ್ಯ ಸಭೆಯ ನಾಲ್ಕು ಸ್ಥಾನಗಳಿಗಾಗಿ ಶುಕ್ರವಾರ ವಿಧಾನಸೌಧದ ಕೊಠಡಿ ಸಂಖ್ಯೆ 106 ರಲ್ಲಿ ಬಿರುಸಿನ ಮತದಾನ ನಡೆಯುತ್ತಿದ್ದು, ಜನಪ್ರತಿನಿಧಿಗಳ ನಡುವೆ ವಾಗ್ವಾದ ,ಯಡವಟ್ಟುಗಳೂ ನಡೆದಿರುವ ಬಗ್ಗೆ ವರದಿಯಾಗಿದೆ. 

Advertisement

ಸಚಿವರಾದ ಕಾಗೋಡು ತಿಮ್ಮಪ್ಪ ಮತ್ತು ಕಾಂಗ್ರೆಸ್‌ ಶಾಸಕ ಬಾಬು ರಾವ್‌ ಚಿಂಚನಸೂರ್‌ ಅವರು ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಚಲಾಯಿಸುವ ಬದಲು ವಿಪಕ್ಷದ ಅಭ್ಯರ್ಥಿಗೆ ಮತ ಯಾಕಿ ಯಡವಟ್ಟು ಮಾಡಿದ್ದಾರೆ. ಈ ವಿಚಾರ ಭಾರೀ ವಾಗ್ವಾದಕ್ಕೆ ಕಾರಣವಾಗಿ ಮತದಾನವನ್ನು 15 ನಿಮಿಷಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. 

ಇಬ್ಬರೂ ನಾಯಕರು ಗೊಂದಲಕ್ಕೀಡಾಗಿ ಬೇರೆ ಅಭ್ಯರ್ಥಿಗೆ ಮತ ಚಲಾಯಿಸಿದ್ದಾರೆ. ಮತಕೇಂದ್ರದಲ್ಲಿದ್ದ ಪಕ್ಷದ ಏಜೆಂಟ್‌ಗೆ ಮತಪತ್ರ ತೋರಿಸಿದಾಗ ಯಡವಟ್ಟಾಗಿರುವುದು ತಿಳಿದು ಮತ್ತೆ ಬೇರೆ ಮತ ಪತ್ರದಲ್ಲಿ ಪುನರ್‌ ಮತ ಚಲಾಯಿಸಿದ್ದಾರೆ. ಇದಕ್ಕೆ ಬಿಜೆಪಿ ಏಜೆಂಟ್‌ ಆಗಿದ್ದ ಅರವಿಂದ ಲಿಂಬಾವಳಿ ಮತ್ತು ಜೆಡಿಎಸ್‌ ಏಜೆಂಟ್‌ ರಮೇಶ್‌ ಬಾಬು ಆಕ್ಷೇಪ ವ್ಯಕ್ತ ಪಡಿಸಿ ಮತ್ತೆ ಮತ್ತೆ ಹೀಗಾಗಲು ಅವಕಾಶ ನೀಡಬಾರದು  ಎಂದು ವಾಗ್ವಾದ ನಡೆಸಿದ್ದಾರೆ. 

ಜೆಡಿಎಸ್‌ ನಾಯಕ ಎಚ್‌.ಡಿ .ಕುಮಾರಸ್ವಾಮಿ ಅವರು ಚುನಾವಣಾಧಿಕಾರಿಯೊಂದಿಗೆ ವಾಗ್ವಾದ ನಡೆಸಿದ್ದಾರೆ. ನೀವು ಚುನಾವಣಾಧಿಕಾರಿಯಾಗಿ ಕೆಲಸ ಮಾಡಿ ಕಾಂಗ್ರೆಸ್‌ ಪಕ್ಷದ ಏಜೆಂಟ್‌ ಆಗಿ ಕೆಲಸ ಮಾಡಬೇಡಿ ಎಂದು ಕಿಡಿ ಕಾರಿದ್ದಾರೆ. 

ಸಾಂಭಾಜಿಗೆ ‘ಕೈ’ ನಡುಕ 
ಮಹಾರಾಷ್ಟ್ರ  ಏಕೀಕರಣ ಸಮಿತಿಯ ಶಾಸಕ ಸಾಂಭಾಜಿ ಪಾಟೀಲ್‌ ಪರ ಮತ ಚಲಾಯಿಸಲು ಕಾಂಗ್ರೆಸ್‌ ಎಂಎಲ್‌ಸಿ ಲಕ್ಷ್ಮೀ ನಾರಾಯಣ ಅವರು ಬಂದಿದ್ದು ಇದಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್‌ ಏಜೆಂಟರುಗಳು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಸಾಂಭಾಜಿಗೆ ಕೈ ನಡುಗುತ್ತದೆ ಮತ ಚಲಾಯಿಸಲು ಆಗುವುದಿಲ್ಲ ಎಂದಾಗ ವೈದ್ಯರ ಪ್ರಮಾಣ ಪತ್ರ ತಂದು ತೋರಿಸಿ ಬಳಿಕ ನೀವು ಮತ ಚಲಾಯಿಸಿ ಎಂದು ಬಿಜೆಪಿ, ಕಾಂಗ್ರೆಸ್‌ ಏಜೆಂಟರುಗಳು ತಕರಾರು ತೆಗೆದರು. ಬಳಿಕ ಸಾಂಭಾಜಿ ಅವರೇ ಮತ ಚಲಾಯಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next