Advertisement

ರಾಜ್ಯಸಭೆ “ಸರ್‌’ಗೆ ಪೂರ್ಣ ವಿರಾಮ

06:53 PM Sep 22, 2022 | Team Udayavani |

ನವದೆಹಲಿ: ಇನ್ನು ಮುಂದೆ ರಾಜ್ಯಸಭೆಯಲ್ಲಿ “ಯೆಸ್‌ ಸರ್‌’, “ನೋ ಸರ್‌’ ಎಂದು ಹೇಳಬೇಕಾಗಿಲ್ಲ. ಸಂಸತ್‌ನ ಮುಂದಿನ ಅಧಿವೇಶನದಿಂದ ಈ ವ್ಯವಸ್ಥೆ ಜಾರಿಗೆ ಬರಲಿದೆ.

Advertisement

ಶಿವಸೇನೆಯ ರಾಜ್ಯಸಭೆಯ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಅವರು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಅವರಿಗೆ ಈ ನಿಟ್ಟಿನಲ್ಲಿ ಪತ್ರ ಬರೆದು, “ಪ್ರಜಾಪ್ರಭುತ್ವದ ದೇಗುಲವಾಗಿರುವ ಸಂಸತ್‌ನಲ್ಲಿ ಲಿಂಗ ತಾರತಮ್ಯ ನಿವಾರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ “ಯೆಸ್‌ ಸರ್‌’, “ನೋ ಸರ್‌’ ಪ್ರಯೋಗ ಹೆಚ್ಚುತ್ತಿದೆ. ಅದನ್ನು ನಿವಾರಿಸಬೇಕು’ ಮನವಿ ಮಾಡಿದ್ದರು.

ಈ ಬಗ್ಗೆ ರಾಜ್ಯಸಭೆಯ ಕಾರ್ಯಾಲಯ ಸೂಕ್ತವಾಗಿ ಸ್ಪಂದಿಸಿದ್ದು, “ಎಲ್ಲಾ ಸಚಿವಾಲಯಗಳೂ ಸಂಸತ್‌ನ ಮುಂದಿನ ಅಧಿವೇಶನದಿಂದ ಅನ್ವಯವಾಗುವಂತೆ ಲಿಂಗ ತಾಟಸ್ಥ್ಯ ಉತ್ತರ ನೀಡುವಂತೆ ಸೂಚಿಸಲಾಗಿದೆ’ ಎಂದು ಉತ್ತರಿಸಿದೆ. ಸಂಸದೆ ಪ್ರಿಯಾಂಕಾ ಚೌಧರಿ ಕೂಡ ಈ ಅಂಶವನ್ನು ಟ್ವೀಟ್‌ ಮಾಡಿ ಖಚಿತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next